ಉಪ್ಪಳ: ಕರ್ನಾಟಕ ಫ್ರೌಢಶಿಕ್ಷಣ ಮಂಡಳಿಯು 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಬಾಯಾರಿನ ಶ್ರೀದೇವಿ ಕೆ. ಶೇ.86 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುವಳು. ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಅವರ ನಾಟ್ಯಾಲಯ ಪುತ್ತೂರು ಸಂಸ್ಥೆಯ ಬಾಯಾರು ಶಾಖಾ ವಿದ್ಯಾರ್ಥಿನಿಯಾಗಿದ್ದು, ಸಜಂಕಿಲ ಶ್ರೀದುರ್ಗಾಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲಾ ಸಿಬ್ಬಂದಿ ಶ್ರೀಧರ ಕೆ.ಆವಳ ಕೆದುಕೋಡಿ-ಶ್ರೀವಿದ್ಯಾ ಎಡಮಲೆ ದಂಪತಿಯ ಸುಪುತ್ರಿ. ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪ್ರಥಮ ಪದವಿಪೂರ್ವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.
Monday, 25 January 2021
ಪಂಚಕರ್ಮ ವಿಭಾಗದಲ್ಲಿ ಪಡ್ರೆಯ ಡಾ.ರಮ್ಯಶ್ರೀ ಗೆ ಪ್ರಥಮ ರಾಂಕ್
ಪೆರ್ಲ:ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು 2020 ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಪ್ರಥಮ ವರ್ಷದ ಸ್ನಾತಕೋತ್ತರ ಪರೀಕ್ಷೆಯ ಪಂಚಕರ್ಮ ವಿಭಾಗದಲ್ಲಿ ಮೈಸೂರು ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಡಾ.ರಮ್ಯಶ್ರೀ ಶೇ.83.25 ಅಂಕಗಳೊಂದಿಗೆ ಪ್ರಥಮ ರಾಂಕ್ ಪಡೆದಿದ್ದಾರೆ.ಈಕೆ ಪೆರ್ಲ ಸಮೀಪ ಪಡ್ರೆ ಗ್ರಾಮದ ದರ್ಬೆ ರಾಮ ಭಟ್ ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಪುತ್ರಿ.
Thursday, 7 January 2021
Subscribe to:
Posts (Atom)