Sunday, 25 February 2018

SHATAMANADA SAMBHRAMA 2021


ಶ್ರೀ ಕ್ಷೇತ್ರ ಅಗಲ್ಪಾಡಿ - ಶತಮಾನದ ಸಂಭ್ರಮ ೨೦೨೧ - ಅಭಿವೃದ್ಧಿ ಕಾರ್ಯಗಳ ಕುರಿತ ವಿವರ

ಆತ್ಮೀಯರೇ

ನಿಮಗೆ ಹಿಂದೆ ತಿಳಿಸಿದಂತೆ " ಶತಮಾನದ ಸಂಭ್ರಮ ೨೦೨೧ ಮೊದಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಅವುಗಳ ವಿವರ ಹೀಗಿದೆ.

 . ಕೊಡಿಮರ ಬದಲಾವಣೆ - ನೂತನ ಕೊಡಿಮರಕ್ಕೆ ಬೇಕಾದ ಮರ ಈಗಾಗಲೇ ಶ್ರೀ ಕ್ಷೇತ್ರ ತಲುಪಿದ್ದು ( ವೆಚ್ಚ .೬೫ ಲಕ್ಷ) ಮುಂದಿನ ಹಂತಗಳು ಇನ್ನು ಆರಂಭವಾಗಲಿವೆ ( ಒಟ್ಟು ವೆಚ್ಚ - ೨೫ ಲಕ್ಷ - ಅಂದಾಜು)
 . ಸಂಪೂರ್ಣ ವೈರಿಂಗ್ ಮತ್ತು ಹೊಸ ಜನರೇಟರ್ : ದೇವಸ್ಥಾನದ ಪರಿಸರದ ಮುಂದಿನ ಯೋಜನೆಗಳನ್ನು ದ್ರಿಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ವೈರಿಂಗ್ ಬದಲಾಯಿಸಲಾಗಿದ್ದು ಹೊಸ ೩೦ ಕೆ ವಿ ಜನರೇಟರ್ ಒಂದನ್ನು ಖರೀದಿ ಮಾಡಲಾಗಿದೆ ( ಒಟ್ಟು ವೆಚ್ಚ - ಲಕ್ಷ)
 . ಪಾರ್ಕಿಂಗ್ ವ್ಯವಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ನೆಲ ಸಮ ಗೊಳಿಸುವ ಯೋಜನೆ : ಈಗಾಗಲೇ ಸುಮಾರು ೩೫ ಲಕ್ಷ ವೆಚ್ಚದ ಕ್ಷೇತ್ರಕ್ಕೆ ಲಗ್ತಿಯಲ್ಲಿರುವ  ಸ್ಥಳಕ್ಕೆ ಮುಂಗಡ ಲಕ್ಷ ನೀಡಿದ್ದು , ಸಮತಟ್ಟಾಗಿಸಲು ಕ್ಷೇತ್ರ ಶಾಲೆಯ ಸಮೀಪದಿಂದ ಮಣ್ಣು ಸಾಗಿಸುವ ಕಾರ್ಯ ( ಸುಮಾರು ಲಕ್ಷ) ಆರಂಭಿಸಲಾಗಿದೆ - ಒಟ್ಟು ವೆಚ್ಚ ಅಂದಾಜು ೪೫ ಲಕ್ಷ - ( ನೋಂದಾವಣೆ ಸಹಿತ)
 . ಗೋಶಾಲೆ : ಸುಮಾರು ಲಕ್ಷ ವೆಚ್ಚದ ಗೋಶಾಲೆಗೆ ಶಕುಸ್ಥಾಪನೆ ಮಾಡಲಾಗಿದ್ದು ಮುಂದಿನ ವಾರದಿಂದ ಕೆಲಸ ಆರಂಭವಾಗಲಿದೆ.
  ಎಲ್ಲ ಯೋಜನೆಗಳು ಸಾಕಾರಗೊಂಡ ಬಳಿಕ ಇನ್ನುಳಿದ ಯೋಜನೆಗಳನ್ನು ಕೈಗೆತ್ತಿಕೊಂಡು ಶತಮಾನದ ಸಂಭ್ರಮದ ಸಂದರ್ಭದಲ್ಲಿ ನಮ್ಮೆಲ್ಲರ ಆರಾಧ್ಯ ದೇವಿಗೆ ಒಪ್ಪಿಸುವ ಬೃಹತ್ ಕಾರ್ಯ ನಮ್ಮಿಂದ ಆಗಬೇಕಾಗಿದೆ.   ನಿಟ್ಟಿನಲ್ಲಿ ನಾವು ಖಂಡಿತ ಮುಂದಿನ ದಿನಗಳಲ್ಲಿ ಮುಖತಃ ಭೇಟಿಗೆ ಪ್ರಯತ್ನ ಮಾಡಲಿದ್ದೇವೆ.   ಯೋಜನೆಗಳಿಗೆ ನಿಮ್ಮ ಎಲ್ಲ ರೀತಿಯ ಸಹಕಾರ ನಮಗೆ ಅತೀ ಅಗತ್ಯ. ನೀವು ಸೇವಾ ಸಂಘದ ಕೆಳಗೆ ಸೂಚಿಸಿದ ಬ್ಯಾಂಕ್ ಖಾತೆಗೆ ತಮ್ಮ ದೇಣಿಗೆಯನ್ನು ಸಮರ್ಪಿಸಿ, ನಮಗೆ -ಮೇಲ್ rajuppangala@gmail.com  ಮುಖಾಂತರ ತಿಳಿಸಿದಲ್ಲಿ ನಿಮ್ಮ ರಶೀದಿಯನ್ನು ನಿಮಗೆ ಕಳುಹಿಸಿ ಕೊಡಲಾಗುವುದು.
Bank Name : Kerala Gramin Bank , Jayanagara Branch
Account Name : Agalpady Sri Durgaparameshwari Seva Sangha
SB Account No : 40413100002587
IFSC Code: KLGB0040413

ತಮ್ಮ ಸಹಕಾರದ ನಿರೀಕ್ಷೆಯಲ್ಲಿ
 President and members
Seva Sangha Agalpady
 _
Thanks and Regards
Nagaraj Uppangala
M No : 95350 00365
M ID : rajuppangala@gmail.com

SHREE TEMPLE AGALPADY 
SHATAMANADA SAMBHRAMA 2021
A BREIF REPORT ON DEVELOPMENT ACTIVITIES TAKEN-UP

DEAR DEVOTEE,



As informed you earlier,  before “ Shatamanada Sambhrama 2021” there are many development activities which are taken up – the details are as follows:
1. Kodi Mara : The installation of new kodimara , the tree relating to the same has reached the temple ( cost 4.65 Lacs), the future related process has begun. ( Total cost appox – 25 Lacs)
2. Wiring and Generator : keeping in Mind the future development , the entire wiring has been revamped and a 30KVA new generator has been procured . ( The total cost Rs. 7 Lacs)
3. Parking : for the purpose of providing the parking facility we have given advance of Rs. 2 Lacs for 140 Cents of land and the ground filling activity has been taken-up on a war-footing (cost around 5 Lacs) . the total cost of this project is estimated to be 45 Lacs including the transfer of ownership cost.
4. Goshale : we have already laid foundation stone for the new go-shala , the estimated cost is Rs. 8 Lacs. The work would begin in the next week.
All these need to be concluded before we take up the next pending projects and need to be offered to shri durga mata before the year 2021. In the near future we will try to meet you personally. To make all these successful, we need your support. You are requested to send the donations for the purpose to the following account and just a email to “ rajuppangala@gmail.comwith information. We will make sure that you receive the receipt from the temple for the same.
Bank Name : Kerala Gramin Bank , Jayanagara Branch
Account Name : Agalpady Sri Durgaparameshwari Seva Sangha
SB Account No : 40413100002587
IFSC Code: KLGB0040413


President and members
Seva Sangha Agalpady


_
Thanks and Regards
Nagaraj Uppangala
M No : 95350 00365
M ID : rajuppangala@gmail.com



Saturday, 10 February 2018

ವೇದಮೂರ್ತಿ ಬಳ್ಳಪದವು ಮಾಧವ ಉಪಾಧ್ಯ - ಸಾರ್ವಜನಿಕ ಸಮ್ಮಾನ ಸಮಾರಂಭ

ಮಹಾಮಹೋಪಾಧ್ಯಾಯ ಬ್ರಹ್ಮಶ್ರೀ ಬಳ್ಳಪದವು ಮಾಧವ ಉಪಾಧ್ಯಾಯರು.


ಭಾರತೀಯ ಪ್ರಾಚೀನ ಭವ್ಯಪರಂಪರೆಗೆ ಆಧಾರಭೂತವಾದ ಶಾಸ್ತ್ರಗಳನ್ನು ರಕ್ಷಿಸುವಲ್ಲಿ ಇಲ್ಲಿಯ ತನಕ ಬಂದ ವಿದ್ವಾಂಸರ ಪಾಲು ಅತ್ಯಧಿಕವಾಗಿದೆ. ಒಂದು ಜನ್ಮದಲ್ಲಿ ಒಂದೇ ಶಾಸ್ತ್ರ ಎಂಬತಿರುವ ಕಲಿಯುಗದಲ್ಲಿ ಕೇರಳ ಪ್ರಾಂತ್ಯದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದ ವಿದ್ವಾನ್ | ಬಳ್ಳಪದವು ಮಾಧವ ಉಪಾಧ್ಯಾಯರು ಹಲವಾರು ಶಾಸ್ತ್ರಗಳಲ್ಲಿ ಪ್ರೌಢಿಮೆಯನ್ನು ಹೊಂದಿದ್ದಾರೆ. ಶಾಸ್ತ್ರದಲ್ಲಿ ಇವರ ಗತಿಯನ್ನು ಗುರುತಿಸಿದ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠವು ಇಂದು “ಮಹಾಮಹೋಪಾಧ್ಯಾಯ” ಎಂಬ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಕರಾಡ ಸಮಾಜ ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಇವರು ಒರ್ವರಾಗಿದ್ದು ಜೀವನದಲ್ಲಿ ಬಹುಪಾಲು ಅಧ್ಯಯನಕ್ಕೆ ಮೀಸಲಿರಿಸಿ ಸಮಾಜದಲ್ಲಿ ಭೀಷ್ಮತುಲ್ಯರಾಗಿದ್ದಾರೆ.
ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ಉಪಾಧ್ಯಾಯ ಮತ್ತು ಶ್ರೀಮತೀ ದುರ್ಗಾಂಬಾ ಇವರಿಗೆ 14-01-1928 ರಲ್ಲಿ ಅಗಲ್ಪಾಡಿ ಸಮೀಪದ ಬಳ್ಳಪದವು(ಉಬ್ರಂಗಳ) ಕುಟುಂಬದಲ್ಲಿ ಜನಿಸಿದ ಇವರು ಅಗಲ್ಪಾಡಿಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ಅಧ್ಯಯನವನ್ನು ಮೆದ್ರಾಸ್ ಸಂಸ್ಕೃತ ವಿದ್ಯಾಲಯದಲ್ಲಿ ಮುಂದುವರೆಸಿದರು. ಅಲ್ಲಿ ಸಾಹಿತ್ಯಶಿರೋಮಣಿಯನ್ನು ಪಡೆದರು. ಋಗ್ವೇದ ಕ್ರಮಾಂತವನ್ನು ಧಾಳಿ ಶ್ರೀ ಭೀಮಭಟ್ಟ ಘನಪಾಠಿಗಳಲ್ಲಿ ಅಧ್ಯಯನ ಮಾಡಿ ತದನಂತರ ಬೆಂಗಳೂರಿನ ವಿದ್ಯಾಭಿವರ್ಧಿನೀ ಪಾಠಶಾಲೆಯಲ್ಲಿ ಪಂಡಿತಪ್ರಕಾಂಡ ಬ್ರಹ್ಮಶ್ರೀ ರಾಮಚಂದ್ರಶಾಸ್ತ್ರಿಗಳಲ್ಲಿ ಸಂಪೂರ್ಣ ವೇದಾಂತವನ್ನು ಅಧ್ಯಯನ ಮಾಡಿದರು. ಮೀಮಾಂಸಾ ಶಾಸ್ತ್ರವನ್ನು ಶ್ರೀ ಬೋಲೂರು ರಾಮಭಟ್ಟರಲ್ಲಿ ಕಲಿತು ತದನಂತರ ಕೇರಳದ ಪ್ರಸಿದ್ಧ ಆಗಮ ಶಾಸ್ತ್ರಜ್ಞರಾದ ದಿವಾಕರನ್ ನಂಬೂದಿರಿ ಇವರಲ್ಲಿ ಆಗಮಶಾಸ್ತ್ರವನ್ನು ಕಲಿತರು. ಎಂ.ವಿ ವೇಂಕಟೇಶಯ್ಯ ಮತ್ತು ಶೃಂಗೇರಿ ಲಕ್ಷ್ಮಣ ಶಾಸ್ತ್ರೀ ಇವರಲ್ಲಿ ಕರ್ನಾಟಕ ಸಂಗೀತ ಮತ್ತು ವೀಣಾವಾದನ್ನು ಅಭ್ಯಾಸ ಮಾಡಿ ಶ್ರೌತಭಾಸ್ಕರ, ಶ್ರೌತವಿಜ್ಞಾನಾಲಂಕಾರ, ವೇದರತ್ನ ಇತ್ಯಾದಿ ಬಿರುದು ಪಡೆದ ವೇದಬ್ರಹ್ಮ ಶ್ರೀ ಖರೆ ಗಣಪತಿ ಶಾಸ್ತ್ರಿಗಳಲ್ಲಿ ಶ್ರೌತ-ಸ್ಮಾರ್ತ ಅಧ್ಯಯನವನ್ನು ಮಾಡಿ ಡಾ.ಜಿ.ಎನ್ ಭಿಡೆ ಇವರಲ್ಲಿ ಆಯುರ್ವೇದಶಾಸ್ತ್ರವನ್ನು ಮಾಡಿದ್ದಾರೆ. ಹಲವಾರು ಶಾಸ್ತ್ರಗಳಲ್ಲಿ ಪ್ರವೃತ್ತಿಯನ್ನು ಹೊಂದಿರುವ ಇವರು ಅಧ್ಯಾಪನವೃತ್ತಿಯಲ್ಲಿ ತಮ್ಮ ಶಿಷ್ಯರುಗಳಿಗೆ ಅವುಗಳನ್ನು ಧಾರೆ ಎರೆದಿದ್ದಾರೆ. ವೇದ, ವೇದಾಂತ, ಮೀಮಾಂಸಾ, ಸಾಹಿತ್ಯ, ಆಗಮ, ಸಂಗೀತ ಹೀಗೆ ಎಲ್ಲಾ ವಿಭಾಗಗಳಲ್ಲೂ ಶಿಷ್ಯರನ್ನು ಹೊಂದಿದ್ದಾರೆ. ಮಹಾಗಣಪತಿ ಸ್ತುತಿ, ಗೋಪಾಲಕೃಷ್ಣ ಸ್ತುತಿ ಇತ್ಯಾದಿ 35ಕ್ಕೂ ಅಧಿಕ ಸ್ತುತಿಗಳನ್ನು ರಚಿಸಿದ್ದಾರೆ.
ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಅಭಿನವವಿದ್ಯಾತೀರ್ಥ ಮಹಾಸ್ವಾಮಿಗಳಿಂದ “ಪಂಡಿತಪ್ರವರ” ಎನ್ನುವ ಬಿರುದನ್ನು 1957ರಲ್ಲಿ ಪಡೆದಿರುತ್ತಾರೆ. ಹಲವಾರು ಯತಿಗಳಿಂದ ಅದೇ ರೀತಿ ನಾನಾ ಸಂಸ್ಥೆಗಳಿಂದ 30ಕ್ಕೂ ಅಧಿಕ ಪುರಸ್ಕಾರಗಳನ್ನು ಪಡೆದಿದ್ದಾರೆ. ತಮ್ಮ ಇಳಿಯವಯಸ್ಸಿನಲ್ಲಿ ಅಧ್ಯಯನ-ಅಧ್ಯಾಪನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
“ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ” ಎಂಬುದು ಶಾಸ್ತ್ರವಚನ. ಇವರ ವಿದ್ವತ್ ಪಾಂಡಿತ್ಯವನ್ನು ಗಮನಿಸಿದ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠ, ತಿರುಪತಿಯ ಕುಲಪತಿಗಳು ಹಾಗು ವಿದ್ವಾಂಸರುಗಳು “ಮಹಾಮಹೋಪಾಧ್ಯಾಯ” ಎಂಬ ಗೌರವವನ್ನು ನೀಡುತ್ತಿರುವುದು ಸಂಸ್ಕೃತ ಕ್ಷೇತ್ರಕ್ಕೆ ಅದೇ ರೀತಿ ಕರಾಡ ಸಮಾಜಕ್ಕೆ ಹೆಮ್ಮೆಯ ವಿಚಾರ.
#ಆರ್.ಕೆ_ಭಟ್
#ವಿದ್ವಾನ್_ಸರ್ವತ್ರ_ಪೂಜ್ಯತೇ_||