Saturday 13 April 2024

ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ. 28 ರಂದು ಬ್ರಹ್ಮಕಲಶ, ಶಿಖರ ಪ್ರತಿಷ್ಠೆ , ಕುಂಭಾಭಿಷೇಕ ಹಾಗೂ ಶತಚಂಡಿಕಾ ಯಾಗ

















ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ. 28 ರಂದು ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾ ಯಾಗ

ಬಾಯಾರು: ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ. 28 ರಂದು ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾ ಯಾಗದ  ಕಾರ್ಯಕ್ರಮಕ್ಕೆ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ದಿವ್ಯಾಶೀರ್ವಾದ ಸಹಿತ ತತ್ಕರಕಮಲ  ಸಂಜಾತರಾಗಿರುವಂತಹ‌ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಚಿತ್ತೈಸಲಿದ್ದು ಶುಭಾಶೀರ್ವಚನ ನೀಡಲಿದ್ದಾರೆ.

ಏ. 27 ರಂದು ಸಾಯಂ. ಗಂಟೆ 6 ಕ್ಕೆ ಆವಳಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಲಿದ್ದು ಪೂರ್ಣ ಕುಂಭ ಸ್ವಾಗತನೀಡಿ ಬರಮಾಡಿಕೊಳ್ಳಲಾಗುವುದು .ಈ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಮಹಾಮಂಗಳಾರತಿ ನಡೆಯಲಿರುವುದು. 7.30 ಕ್ಕೆ ಧೂಳಿ ಪಾದಪೂಜೆ, ಚಂದ್ರಮೌಳೀಶ್ವರ ಪೂಜೆ ಹಾಗೂ ಪಾದಪೂಜೆ ನಡೆಯಲಿರುವುದು.

28 ರಂದು ಬೆಳಗ್ಗೆ 8.30ಕ್ಕೆ ಮೇಲಿನಪಂಜ ಮೂಲಸ್ಥಾನಕ್ಕೆ  ತೆರಳಲಿದ್ದು ತದನಂತರ 9. 30 ಕ್ಕೆ ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶ ಹಾಗೂ ಶತಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಮಧ್ಯಾಹ್ನ ಗಂಟೆ 12 ಕ್ಕೆ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ಹಾಗೂ ಮಂತ್ರಾಕ್ಷತೆ ನೀಡಲಿದ್ದಾರೆ.

ಸಾಯಂ ಗಂಟೆ 3.30ಕ್ಕೆ ಸಜಂಕಿಲ ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರಕ್ಕೆ ತೆರಳಿ ಅಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಲಿದ್ದಾರೆ.

Friday 5 April 2024

ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ


ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಋಕ್ ಸಂಹಿತಾಯಾಗ ಪೂರ್ಣಾಹುತಿ ಜರುಗಿತು. ಲೋಕ ಕಲ್ಯಾಣಾರ್ಥ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ ಋತ್ವಿಕ್ ಗಣ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸುಸಂಪನ್ನ. 

ಕಾಸರಗೋಡು ಜಿಲ್ಲೆಯ ಉಬ್ರಂಗಳ ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದ ಅಂಗವಾಗಿ ದಿನಾಂಕ 3 ಮಾರ್ಚ್ 2024 ಬುಧವಾರ ಬೆಳಗ್ಗೆ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾ ಪೂರ್ಣಾಹುತಿ, ಮಹಾ ಪೂಜೆ ಜರುಗಿತು. 

ಮುಂಜಾನೆ ಮಂಟಪ ದೇವರ ಪೂಜೆ, ಅರಣೀ ಸೂಕ್ತ ಪಠಣದಲ್ಲಿ, ಅರಣೀ ಮಥನ ದ್ವಾರಾ ಅಗ್ನಿ ಪ್ರಜನನ, ಆವಾಹನ, ಪೂಜನ ಸಹಿತ ಹೋಮ ಕುಂಡಗಳಲ್ಲಿ ಅಗ್ನಿ ಪ್ರತಿಷ್ಠೆ ನಡೆಯಿತು. ಸಪ್ತಶತೀ ಪಠಣ ದ್ವಾರಾ ಸಹಸ್ರ ಚಂಡಿಕಾಯಾಗ ಪ್ರಾರಂಭವಾಯಿತು. ಅದಾಗಲೇ ನೂರು ಜನ ಋತ್ವಿಜರ ಮುಖೇನ ಸಹಸ್ರ ಸಂಖ್ಯೆಯಲ್ಲಿ ಚಂಡೀ ಸಪ್ತಶತೀ ಪಾರಾಯಣ, ಹತ್ತು ಲಕ್ಷ ನವಾವರಣ ಜಪ ಸಂಪನ್ನಗೊಂಡು, ದಶಾಂಶ ಸಂಖ್ಯೆಯಲ್ಲಿ ತರ್ಪಣ, ಒಂದೇ ಸಮಯದಲ್ಲಿ ದಶ ಕುಂಡಗಳಲ್ಲಿ ನೂರು ಜನ ಋತ್ವಿಜರ ಮೂಲಕ ಒಂದು ಲಕ್ಷ ನವಾವರಣ ಮಂತ್ರ ಸಹಿತ ಆಜ್ಯ ಆಹುತಿ ನೀಡಲಾಯಿತು. ಬೆಲ್ಲ, ಅರಸಿನ, ಏಲಕ್ಕಿ , ಜಾಯೀಕಾಯೀ, ತುಪ್ಪ ಸಹಿತವಾಗಿ ಒಂದು ಸಾವಿರದ ಮುನ್ನೂರು ಕೆ.ಜಿ.ಅಕ್ಕಿಯಿಂದ ತಯಾರಿಸಲಾದ ಪಾಯಸವನ್ನು ಎಪ್ಪತ್ತು ಸಾವಿರ ಆಹುತಿಯನ್ನು ಸಪ್ತಶತೀ ಪಠಣ ದ್ವಾರಾ ಅಗ್ನಿಗೆ ಸಮರ್ಪಿಸಿ ಹೋಮ ನೆರವೇರಿತು. 

ತಲಾ ಬುಟ್ಟಿಗಳಂತೆ ತೆಂಗಿನಕಾಯಿ, ಕೊಬ್ಬರಿ, ಬಿಲ್ವದ ಕಾಯಿ, ಇಕ್ಷುದಂಡ, ಬಾಳೇ ಹಣ್ಣು ಗೊನೆಗಳು, ಮಹಾಳುಂಗ ಫಲ ಸಹಿತ ಹಣ್ಣು ಹಂಪಲು, ವಿವಿಧ ಒಣ ಹಣ್ಣುಗಳು, ಶ್ರೀ ಗಂಧ ಕೊರಡು, ಏಲಕ್ಕಿ, ಜಾಯೀಕಾಯೀ, ಲವಂಗ ಇತ್ಯಾದಿ ಸುಗಂಧ ದ್ರವ್ಯಗಳು, ಅರಳು, ಪಂಚಾಮೃತ, ಎಳ್ಳು, ಪಲಾಶ ಪುಷ್ಪ, ವಾಯನ, ವಸ್ತ್ರ, ಅಡಿಕೆ, ವೀಳ್ಯದೆಲೆ, ಹೂ, ಹಿಂಗಾರದೊಂದಿಗೆ ಸಹಸ್ರ ಚಂಡಿಕಾ ಯಾಗದ ಮಹಾ ಪೂರ್ಣಾಹುತಿ, ಆರತೀ, ಚಂಡಿಕಾ ಯಾಗ ಮಂಟಪದಲ್ಲಿ ಪೂಜೆ ನೆರವೇರಿತು. ಕರ್ಮಾಂಗ ಸಮಾಪ್ತಿ ಯಲ್ಲಿ, ಅದಾಗಲೇ ನೂರು ಜನ ಕನ್ನಿಕೆಯರ, ನೂರು ಜನ ಸುವಾಸಿನಿಯರ ಆರಾಧನೆ, ಹತ್ತು ದಂಪತಿ ಪೂಜಾ ಸಂಪನ್ನಗೊಂಡಿತು. 

ಬ್ರಾಹ್ಮಣ ಪೂಜೆ, ದಕ್ಷಿಣಾ ಪ್ರದಾನ, ಮಂತ್ರಾಕ್ಷತೆ, ಆಶೀರ್ವಚನ, ಪ್ರಸಾದ ವಿತರಣೆ ಅವಭೃತ ಸ್ನಾನ ನಡೆದು, ಬ್ರಾಹ್ಮಣ ಸಮಾರಾಧನೆ, ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಭಕ್ತ ಗಣಕ್ಕೆ ಅನ್ನ ಸಂತರ್ಪಣೆ ನಡೆಯಿತು. ಈ ಸುಸಂದರ್ಭದಲ್ಲಿ ಎಡನೀರುಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ದಿವ್ಯ ಸಾನ್ನಿಧ್ಯ ವಹಿಸಿದ್ದರು. 

ಯಾಗದ ಅನುಷ್ಠಾನ ಕರ್ಮಾಂಗದ ನೇತೃತ್ವವನ್ನು ಶ್ರೀ ಸೂರ್ಯನಾರಾಯಣ ಭಟ್ ವಹಿಸಿ, ಪ್ರಧಾನ ಆಚಾರ್ಯತ್ವದಲ್ಲಿ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರು ವಹಿಸಿ, ವೈದಿಕರಾದ ಶ್ರೀ ರಾಮ ಭಾರದ್ವಾಜ್ ತಂಡ, ವಿವಿಧ ರಾಜ್ಯಗಳ ವೈದಿಕರು ಭಾಗವಹಿಸಿ ಕಾರ್ಯಕ್ರಮ ಛಂದಗಾಣಿಸಿದರು. ಹರಿದು ಬಂದ ಜನಸಾಗರ ಊರ ಪರವೂರ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿದ ಜನರು ಬುಧವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಕುಟುಂಬ ಸಹಿತವಾಗಿ, ಮಲಬಾರ್ ದೇವಸ್ವಂ ಬೋರ್ಡ್ ಅಧಿಕಾರಿಗಳು, ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಲೋಕಸಭಾ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಮೊದಲಾದ ಅನೇಕ ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ, ವೇದಮಾತ ಟ್ರಸ್ಟ್ ಹಾಗೂ ಯಾಗ ಸಮಿತಿ ಅಧ್ಯಕ್ಷ ತಲೇಖ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ಆಡಳಿತ ಮೊಕ್ತೇಸರರು ಭಾಗವಹಿಸಿ ಕಾರ್ಯಕ್ರಮ ಸಾಂಗವಾಗಿ ಸುಸಂಪನ್ನಗೊಂಡಿತು. 

ಶ್ರೀ ಕ್ಷೇತ್ರದಲ್ಲಿ ಮಾ.27ರಿಂದ ಏ.3ರ ವರೆಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಮುಕ್ತಾಯಗೊಂಡಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೂರಾರು ವೈದಿಕರ, ಸ್ವಯಂ ಸೇವಕರ ಹಗಲಿರುಳು ಪರಿಶ್ರಮದ ಫಲವಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು - ಎ.ಜಿ.ಶರ್ಮಾ, ಆಡಳಿತ ಮೊಕೇಸರರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ ಇಂದಿಲ್ಲಿ ಹೇಳಿದರು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಋಕ್ ಸಂಹಿತಾ ಯಾಗ ಪೂರ್ಣಾಹುತಿ ಸುಸಂಪನ್ನಗೊಂಡಿತು.

 


ಅಗಲ್ಪಾಡಿ ಕ್ಷೇತ್ರ ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 


ಅಗಲ್ಪಾಡಿ ಕ್ಷೇತ್ರ ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 


ದ್ವಂದ್ವವಯಲಿನ್ ವಾದನ ವಿದ್ವಾನ್ ಸಿ ಎಸ್ ಅನುರೂಪ್ ತ್ರಿಶೂರ್, ವಯಲಿನ್ ವಾದನ ಖ್ಯಾತಿಯ ಗಂಗಾ ಶಶಿಧರ್ ತ್ರಿಶೂರ್

 


Tuesday 2 April 2024

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮಂತ್ರಗಳ ನೀನಾದ, ಯಾಗಗಳ ಪುಂಜ, ಪಾವನವಾಯಿತು ಶ್ರೀ ಸಾನಿಧ್ಯ


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ  ಮಂತ್ರಗಳ ನೀನಾದ, ನೆರವೇರುತ್ತಿವೆ ಯಾಗಗಳ ಪುಂಜ, ಪ್ರವಾಹೋಪಾದಿಯಾಗಿ ಹರಿದು ಬರುತ್ತಿರುವ ಭಕ್ತರು, ಸಹಸ್ರಾರು ಸಂಖ್ಯೆಯ ಅನ್ನದಾನ ಒಟ್ಟಿನಲ್ಲಿ ಪಾವನವಾಯಿತು ಶ್ರೀ ಸಾನಿಧ್ಯ.

5ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆಯಿತು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವೇದಮಾತಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ  ಲೋಕ ಕಲ್ಯಾಣಾರ್ಥವಾಗಿ ವಿವಿಧ ಯಾಗಗಳು ಜರುಗುತ್ತಿರುವ ಸುಸಂದರ್ಭ ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗಕ್ಕಾಗಿ ಸುಮಾರು ನೂರು ಜನ ಋತ್ವಿಜರು ಸೇರೀ ಏಕ ಕಂಠದಲ್ಲಿ ಶ್ರೀ ಚಂಡಿಕಾ ದೇವಿಯನ್ನು ಸ್ತುತಿಸುವ ಸಪ್ತಶತೀ ಪಾರಾಯಣಗಳು ಸಾವಿರ ಸಂಖ್ಯೆಯಲ್ಲಿ ಜರುಗಬೇಕು. ಮಂಟಪ ದೇವತಾ ಆರಾಧನೆ, ದಂಪತಿ ಪೂಜಾ, ಒಟ್ಟು ನೂರು ಸುವಾಸಿನಿಯರ, ನೂರು ಕುಮಾರಿಕೆಯರ ಆರಾಧನೆ ನೆರವೇರಬೇಕು.

ಬ್ರಾಹ್ಮಣ,  ಸುವಾಸಿನಿ, ಕುಮಾರಿಕಾ, ಸಮಾರಾಧನೆ ನಡೆಯಿತು. ದಿನಾಂಕ 31 ಮಾರ್ಚ್ 2024ನೇ , ರವಿವಾರ ಸುಸಂಪನ್ನಗೊಂಡ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಸಹಸ್ರಾರು ಸಂಖ್ಯೆಯಲ್ಲಿ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭ ಆಡಳಿತ ಮೊಕ್ತೇಸರರಾದ  ಕೋಳಿಕ್ಕಜೆ ಅನಂತ ಗೋವಿಂದ ಶರ್ಮಾ, ವೇದಮಾತಾ ಟ್ರಸ್ಟ್ ಅಧ್ಯಕ್ಷರಾದ ತಲೆಕ ಸುಬ್ರಹ್ಮಣ್ಯ ಭಟ್, ಯಾಗ ಸಮಿತಿ ಗೌರವಾಧ್ಯಕ್ಷರಾದ ಉಪ್ಪಂಗಳ ಶ್ರೀ ಕೃಷ್ಣ ಭಟ್, ಕೊಟ್ಟಂಗುಳಿ ಶ್ರೀ ಮಾಧವ ಭಟ್, ಬಲೆಕ್ಕಳ ಶ್ರೀ ಗಿರೀಶ್ ಭಾರದ್ವಾಜ್, ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಪ್ರಸಾದ ಭಟ್ ಪಾರ್ಥ ಕೊಚ್ಚಿ ಇವರುಗಳ ನೇತೃತ್ವದಲ್ಲಿ ಯಾಗದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿವೆ. 

ಸಹಸ್ರ ಚಂಡಿಕಾ ಯಾಗ | ಬೇರೆಲ್ಲೂ ಇಲ್ಲದ ಆಧುನಿಕ ಕಛೇರಿ | ಇತರ ಕಛೇರಿಗಳು | ಅಗಲ್ಪಾಡಿ

 


ಅಗಲ್ಪಾಡಿ ಭೂತಬಲಿ ಉತ್ಸವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ FOX24LIVE NEWS

 


ಕಿಕ್ಕಿರಿದ ಭಗವದ್ಭಕ್ತರು | ಪಾರ್ಕಿಂಗ್, ಅಡುಗೆ ಸೂಪರ್ | ಅಗಲ್ಪಾಡಿ ದೇವಸ್ಥಾನ

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಹರಿದು ಬಂದ ಭಕ್ತಜನ ಸಾಗರ | ಪುಂಗನೂರು ತಳಿಯ ಗೋವು

 


Sunday 31 March 2024

ಅಗಲ್ಪಾಡಿ ಭೂತಬಲಿ ಉತ್ಸವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ FOX24LIVE

 


ಜನಾಕರ್ಷಣೆಯ ಪುಂಗನೂರು ದೇಶೀ ತಳಿ ಮತ್ತು ಸಹಸ್ರ ಚಂಡಿಕಾ ಯಾಗ : ಅಗಲ್ಪಾಡಿ

 


ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆದು, ಧನ್ವಂತರಿ ದೇವರ ಪ್ರೀತ್ಯರ್ಥ ಯಾಗ. 30-03-24


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 4ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆದು, ಧನ್ವಂತರಿ ದೇವರ ಪ್ರೀತ್ಯರ್ಥ ಯಾಗ, ಶ ದೇವರ ಮಹಾಪೂಜೆ, ಮಹಾ ಮಂಗಳಾರತಿ, ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ಗಳೊಂದಿಗೆ ಅನ್ನದಾನ ಜರುಗಿತು.    

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವೇದಮಾತಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಯಾಗಗಳು ಜರುಗುತ್ತಿರುವ ಸುಸಂದರ್ಭ ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗಕ್ಕಾಗಿ ಮಂಟಪ ದೇವತಾ ಆರಾಧನೆ, ದಂಪತಿ ಪೂಜಾ, ಸುವಾಸಿನಿ, ಕುಮಾರಿಕಾ ಆರಾಧನೆ, ಸುಮಾರು ನೂರು ಜನ ಋತ್ವಿಜರು ಸೇರೀ ಸಪ್ತಶತೀ ಪಾರಾಯಣ ನೆರವೇರುತ್ತಿದೆ.

ಧನ್ವಂತರಿ ಯಾಗದ ಬಾಬ್ತು ಗುರು, ಗಣಪತಿ ಪೂಜೆ, ಸಂಕಲ್ಪ, ಸ್ವಸ್ತಿ ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್ ವರಣ, 40 ಸಾವಿರ ಧನ್ವಂತರಿ ಮಂತ್ರ ಪಠಣ ದೊಂದಿಗೆ, ತುಪ್ಪ, ಚರು, ದೂರ್ವೇ, ಅಮೃತ ಬಳ್ಳಿ ಸಂಮಿಧೆಗಳಿಂದ ತಲಾ ಸಹಸ್ರ ಸಂಖ್ಯೆಯಲ್ಲಿ ನಾಲ್ಕು ಸಾವಿರ ಆಹುತಿ ಸಮರ್ಪಣೆಯೊಂದಿಗೆ ಹವನ, ಪೂರ್ಣಾಹುತಿ ಸುಸಂಪನ್ನ.

ದಿನಾಂಕ 30 ಮಾರ್ಚ್ 2024ನೇ , ಶನಿವಾರ ಸುಸಂಪನ್ನಗೊಂಡ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಸಹಸ್ರಾರು ಸಂಖ್ಯೆಯಲ್ಲಿ ಅನ್ನಸಂತರ್ಪಣೆ ಜರುಗಿತು.

ಅಗಲ್ಪಾಡಿ ಕ್ಷೇತ್ರ l ಸಹಸ್ರ ಚಂಡಿಕಾ ಯಾಗ l ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ FOX24LIVE

 


ಅಪೂರ್ವದಲ್ಲಿ ಅಪೂರ್ವ ಈ ಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 3ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿತು.


ಹನ್ನೊಂದು ಜನ ಋತ್ವಿಜರು ರುದ್ರ ಪಠಣ ದೊಂದಿಗೆ ಹೊಮವನ್ನು  ಆಜ್ಯ ಸಮರ್ಪಿಸಿ ಮಾಡಿ,  ರುದ್ರ ಚಮೆ ಪಠಣದೊಂದಿಗೆ ಪೂರ್ಣಾಹುತಿ ನೆರವೇರಿತು. ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗದ ಪ್ರಯುಕ್ತ ಗುರು ಗಣಪತಿ ಪೂಜೆ, ಮಹಾ ಸಂಕಲ್ಪ, ಆಚಾರ್ಯಾದಿ ಋತ್ವಿಕ್ ವರಣ, ಸಪ್ತಶತೀ ಪಾರಾಯಣ ಆರಂಭ,  ಮಂಟಪ ಸಂಸ್ಕಾರ, ಪ್ರಧಾನ ಕಲಶ ಸ್ಥಾಪನೆ ಜರುಗಿತು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಸಂಯುಕ್ತಾಶ್ರಯದಲ್ಲಿ  ಲೋಕ ಕಲ್ಯಾಣಾರ್ಥ ವಾಗಿ   ಸಹಸ್ರ ಚಂಡಿಕಾ ಯಾಗ ಆರಂಭ, ಋಕ್ ಸಂಹಿತಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ನಡೆದು ಶ್ರೀ ದೇವರ ಮಹಾಪೂಜೆ ಭೂತ ಬಲಿ, ಉತ್ಸವ ಜರುಗಿತು. 

ದಿನಾಂಕ 29 ಮಾರ್ಚ್ 2024ನೇ , ಶುಕ್ರವಾರ ಸುಸಂಪನ್ನಗೊಂಡ ಚಂಡಿಕಾ ದೇವಿ ಪ್ರೀತ್ಯರ್ಥ ದಂಪತಿ ಪೂಜನ, ಹದಿನೆಂಟು ಸುವಾಸಿನಿ ಯರ ಪೂಜನದೊಂದಿಗೆ, ಇಪ್ಪತ್ತ ನಾಲ್ಕು ಜನ ಕುಮಾರಿಯರ ಆರಾಧನೆ ನೆರವೇರಿತು.  ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗಿತು.

ಧನ್ವಂತರಿ ಹೋಮ ಪೂರ್ಣಾಹುತಿ | ಸಹಸ್ರಚಂಡಿಕಾಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

 


ಅಗಲ್ಪಾಡಿ ಕ್ಷೇತ್ರ ಮಹಾಪೂಜೆ l ಭಕ್ತ ಜನ ಸಾಗರ l ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 


ವಿಶೇಷ ಉತ್ಸವ, ನೃತ್ಯ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ | ಸಹಸ್ರಚಂಡಿಕಾಯಾಗ

 


ಶ್ರೀದೇವರ ಉತ್ಸವ ಬಲಿ | ಸಹಸ್ರಚಂಡಿಕಾ ಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

 


ಅಗಲ್ಪಾಡಿ ಋಕ್ ಸಂಹಿತಾ ಯಾಗ , ಸಹಸ್ರ ಚಂಡಿಕಾ ಯಾಗ - ಇಂದು ಬೃಹತ್ ಹೊರೆಕಾಣಿಕೆ ಮೆರವಣಿಗೆ

 


Saturday 30 March 2024

ಅಗಲ್ಪಾಡಿಯಲ್ಲಿ ರುದ್ರಹೋಮ | ಸಹಸ್ರಚಂಡಿಕಾ ಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವೇದಮಾತಾ ಟ್ರಸ್ಟ್ (ರಿ.) ಅಗಲ್ಪಾಡಿ ಇವರ ನೇತೃತ್ವದಲ್ಲಿ ಮಾರ್ಚ್ 27 ಬುಧವಾರದಿಂದ ಏಪ್ರಿಲ್ 3 ಬುಧವಾರದ ತನಕ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ಋಕ್ ಸಂಹಿತಾ ಯಾಗ, ಐಕಮತ್ಯ ಹೋಮ, ರುದ್ರಹೋಮ, ಧನ್ವಂತರಿ ಹೋಮ ಮತ್ತು ಸಹಸ್ರಚಂಡಿಕಾ ಯಾಗ ಜರಗಲಿರುವುದು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 2ನೇಯದಿನ ಋಕ್ ಸಂಹಿತಾ ಯಾಗ , ಐಕ್ಯ ಮತ್ಯ ಹೋಮ.


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ  2ನೇಯದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿತು. ಅರಣೀ ಮಥನ ಪೂರ್ವಕ ಅಗ್ನಿ ಪ್ರಜನನ ದೊಂದಿಗೆ ಐಕ್ಯ ಮತ್ಯ ಹೋಮ ಜರುಗಿತು.  ಹೊಮವನ್ನು ಐಕ್ಯ ಮತ್ಯ ಮಂತ್ರ ಪಠಣದೊಂದಿಗೆ ಆಜ್ಯ, ಚರು, ಸಮಿಧೆ ಸಮರ್ಪಿಸಿ,  ಋತ್ವಿಜರು ನೆರವೇರಿಸಿದರು. 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಸಂಯುಕ್ತಾಶ್ರಯದಲ್ಲಿ  ಲೋಕ ಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಜರುಗುತ್ತಿರುವ ಸುಸಂದರ್ಭ ದಿನಾಂಕ 28 ಮಾರ್ಚ್ 2024ನೇ ಗುರುವಾರ ಸುಸಂಪನ್ನಗೊಂಡಿತು. ಪೂರ್ಣಾಹುತಿ ಯೊಂದಿಗೆ ಯಾಗ ಸಂಪನ್ನಗೊಂಡಿತು. 

ಮಧ್ಯಾಹ್ನ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗ ಪೂರ್ಣಾಹುತಿಯೊಂದಿಗೆ ನಡೆಸಲಾಯಿತು. 

ಕ್ಷೇತ್ರದ ಆಡಳಿತ ಮೊತ್ತೇಸರ ಎ.ಜಿ. ಶರ್ಮಾ ಕೋಳಿಕ್ಕಜೆ ಮುತುವರ್ಭಾಜಿಯಿಂದ ಭಾಗ ವಹಿಸಿದ್ದರು. ವೇದಮಾತಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ, ಲೋಕ ಸಭಾ ಸದಸ್ಯರು, ಸಮೀತಿ ಸದಸ್ಯರು , ಭಕ್ತರು ಭಾಗವಹಿಸಿದ್ದರು .

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಷ್ಟೋತ್ತರ ಶತಕಲಶಾಭಿಷೇಕ DAY 4

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಶ್ರೀ ಮಹಾಗಣಪತಿ ಯಾಗ, ಋಕ್ ಸಂಹಿತಾ ಯಾಗ, ಯಾಗ ಸಮುಚ್ಚಯಕ್ಕೆ ಚಾಲನೆ.

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಅಷ್ಟೋತ್ತರ ಸಹಸ್ರ ನಾಳಿಕೇರ ಶ್ರೀ ಮಹಾಗಣಪತಿ ಯಾಗ, ಋಕ್ ಸಂಹಿತಾ ಯಾಗ, ಯಾಗ ಸಮುಚ್ಚಯಕ್ಕೆ ಚಾಲನೆ. 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾ.27ರಂದು ಆರಂಭಗೊಂಡು, ಪ್ರಾತ: ಋತ್ವಿಜರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ಬಳಿಕ ಭಕ್ತರು ಸೇರಿ ದೇವತಾ ಪ್ರಾರ್ಥನೆ, ಗುರು ಗಣಪತಿ, ವರುಣ ಪೂಜನ, ಪುಣ್ಯಾಹ ವಾಚನ, ಋತ್ವಿಕ್ ವರಣ, ಮಧುಪರ್ಕ ಪೂಜೆ ನೆರವೇರಿ, ಅರಣೀ ಮಥನ ಮೂಲಕ ಅಗ್ನಿ ಪ್ರಜನನ, ಪೂಜನ, ಸ್ಥಾಪನ.   ಋಕ್ ಸಂಹಿತಾ ಯಾಗ ಮಂತ್ರ ಪಠಣದೊಂದಿಗೆ ಆಜ್ಯದ ಆಹುತಿ ಸಮರ್ಪಣೆ, ಪೂರ್ಣಾಹುತಿ ನಡೆಯಿತು.

ಕುಂಡ ಮಧ್ಯದಲ್ಲಿ ಅಗ್ನಿ ಸ್ಥಾಪನೆ, ಪೂಜನ, ಆಜ್ಯ, ಅಷ್ಟದ್ರವ್ಯ, ಕೇಪಳ ಹೂ, ದೂರ್ವೆಗಳಿಂದ ಹೋಮ, ಪೂರ್ಣಾಹುತಿ ನಡೆಯಿತು. ನವಗ್ರಹ ಹೊಮವನ್ನು ಆಜ್ಯ, ಚರು, ಸಮಿಧೆ ಸಮರ್ಪಿಸಿ ಪೂರ್ಣಾಹುತಿಯೊಂದಿಗೆ ನಡೆಸಲಾಯಿತು. 

ಕ್ಷೇತ್ರದ ಆಡಳಿತ ಮೊತ್ತೇಸರ ಎ.ಜಿ. ಶರ್ಮಾ ಕೋಳಿಕ್ಕಜೆ ಮುತುವರ್ಭಾಜಿಯಿಂದ ಭಾಗ ವಹಿಸಿದ್ದರು. ವೇದಮಾತಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ, ಲೋಕ ಸಭಾ ಸದಸ್ಯರು, ಸಮೀತಿ ಸದಸ್ಯರು , ಭಕ್ತರು ಭಾಗವಹಿಸಿದ್ದರು .


ಅಗಲ್ಪಾಡಿ ಯಾಗ ಶಾಲೆ, ಪಾಕಶಾಲೆ, ವಸತಿಗೃಹ ಸಾಂಸ್ಕೃತಿಕ ವೇದಿಕೆ ಎಡನೀರು ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿದರು.


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾ.27ರಂದು ಆರಂಭಗೊಳ್ಳಲಿದ್ದು, ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕಾರ್ಯಕ್ರಮದ ಅಂಗವಾಗಿ ಮಾ.26ರಂದು ಬೆಳಗ್ಗೆ ಗಣಪತಿಯಾಗ ಸಂಪನ್ನಗೊಂಡು, ಎಡನೀರು ಸಂಸ್ಥಾನದ ಮಠಾಧೀಶರಾದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಯವರು ಚಿತ್ತೈಸಿ, ಯಾಗ ಶಾಲೆ, ಪಾಕಶಾಲೆ, ವಸತಿಗೃಹ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. 

ಪುಂಗನೂರು ಗೋಮಾತೆ ಯಾಗದ ಸಂದರ್ಭದಲ್ಲಿ ಆಂಧ್ರಪ್ರದೇಶದ ಪುಂಗನೂರು ಗೋವು ಭಗವದ್ಭಕ್ತರನ್ನು ತಳಿಯ ಗೋವಿನಂತೆ ಪುಂಗನೂರು ಗೋವು ಆಕರ್ಷಿಸಲಿದೆ. ಗಿಡ್ಡ ತಳಿಯಾಗಿ ನೋಡಲು ಆಕರ್ಷಕವಾಗಿದೆ. ಇದರ ಹಾಲು ಅತ್ಯಂತ ಶ್ರೇಷ್ಠವಾಗಿದ್ದು ಆರೋಗ್ಯದಾಯಕವಾಗಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಗೋವನ್ನು ಆಂಧ್ರಪ್ರದೇಶದಿಂದ ತರಲಾಗಿದೆ. ಇದು ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಗೋ ಶಾಲೆಯಲ್ಲಿ ಇರಲಿದೆ.

Thursday 28 March 2024

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಗಲ್ಪಾಡಿ | DAY 2

 


ಅಗಲ್ಪಾಡಿ ಕ್ಷೇತ್ರ ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 




ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಗಲ್ಪಾಡಿ | ಮೆರವಣಿಗೆ

 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್(ರಿ) ಅಗಲ್ಪಾಡಿ | ಅಷ್ಟೋತ್ತರ ಶತಕಲಶಾಭಿಷೇಕ


 

Tuesday 26 March 2024

ಅಗಲ್ಪಾಡೀ ಯಾಗಗಳ ಮಹತ್ವದ ಕುರಿತು ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರಿಂದ ಮಾಹಿತಿ.


ಅಷ್ಟೋತ್ತರ ಶತ ಕಲಶಾಭಿಷೇಕ , ಅಷ್ಟೋತ್ತರ ಸಹಸ್ರ ನಾರೀಕೇಳ ಶ್ರೀ ಮಹಾಗಣಪತಿ ಯಾಗ , ಋಕ್ ಸಂಹಿಕಾ ಯಾಗ , ಐಕ್ಯಮತ್ಯ ಹೋಮ , ರುದ್ರ ಹೋಮ ,ಧನ್ವಂತರಿ ಹೋಮ , ಹಾಗೂ ಸಹಸ್ರ ಚಂಡಿಕಾ ಯಾಗ ಗಳು 26 .03. 2024 ನೇ ಬುಧವಾರದಿಂದ ಮೊದಲ್ಗೊಂಡು 03.04.2024 ನೇ ಬುಧವಾರ ತನಕ ವಿಜೃಂಭಣೆಯಿಂದ ನಡೆಯಲಿರುವುದು. 

ಕಾಸರಗೋಡು ಜಿಲ್ಲೆಯ ತಾಲೂಕಿನ ಉಬ್ರಂಗಳ ಅಗಲ್ಪಾಡೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐತಿಹಾಸಿಕವಾಗಿ ಕರಾಡ ಸಮಾಜ ಐಕ್ಯಮತ್ಯವಾಗಿ ಮುನ್ನಡೆಯುವಲ್ಲಿ ಪ್ರೇರಣ ಶಕ್ತಿಯಾಗಿದೆ. 

ಈಗಾಗಲೇ ಆಡಳಿತ ಮೊಕ್ತೇಸರ ಅನಂತ ಗೋವಿಂದ ಶರ್ಮಾ ಕೋಳಿಕ್ಕಜೆ ನೇತೃತ್ವದ ಆಡಳಿತ ಮಂಡಳಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾ ಬಂದಿದೆ. ಈಗಾಗಲೇ ಸುಮಾರು ಹದಿಮೂರು ಎಕರೆ ಜಾಗ ದೇವಳಕ್ಕೆ ಲಭಿಸಿದ್ದು, ನೂತನ ಪಾಕ ಶಾಲೆ, ಅತಿಥಿಗೃಹ, ಸಾಂಸ್ಕೃತಿಕ ವೇದಿಕೆ, ಸಭಾಭವನ, ಅನ್ನ ಛತ್ರ ನಿರ್ಮಾಣ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಸ್ವಯಂಸೇವಕರ, ಪದಾಧಿಕಾರಿಗಳ ತಂಡ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ. 

ಈಗಾಗಲೇ ವಿಶಿಷ್ಟ ರೀತಿಯಲ್ಲಿ ಹತ್ತು ಕುಂಡಗಳಿರುವ ಯಜ್ಞ ಶಾಲೆ ನೂತನವಾಗಿ ನಿರ್ಮಾಣಗೊಳ್ಳುತ್ತಿದೆ. ಸಾಂಸ್ಕೃತಿಕ ವೇದಿಕೆ, ಭವನ ಸಿದ್ಧಗೊಳ್ಳುತ್ತಿದೆ. ಯಾಗದ ದಿನಗಳಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ನಿರೀಕ್ಷೆಯಲ್ಲಿ ಕ್ಷೇತ್ರ ಸಿದ್ಧಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅನ್ನ ಸಂತರ್ಪಣೆ ಚಪ್ಪರ ಅಣಿಗೊಂಡಿದೆ. ವಿಶಾಲವಾದ ವಾಹನ ನಿಲುಗಡೆ ಸ್ಥಳಗಳನ್ನು ಸಿಧ್ಧಗೊಳಿಸಲಾಗಿದೆ. ಅತಿಥಿ ವಸತಿ ಗೃಹಗಳು ಸಿಧ್ಧಗೊಂಡು ಉದ್ಘಾಟನೆಗೆ ಕಾಯುತ್ತಿವೆ. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಆಗಾಗ್ಗೆ ಸಮೀತಿ ಪದಾಧಿಕಾರಿಗಳು, ಭಕ್ತರು ಸೇರಿ ಪೂರ್ವ ಭಾವೀ ಸಭೆ ನಡೆಸಿ ಚರ್ಚಿಸಲಾಗುತ್ತದೆ. 

ಆಡಳಿತ ಮೊಕ್ತೇಸರ ಕೋಳಿಕ್ಕಜೆ ಶ್ರೀ ಅನಂತ ಗೋವಿಂದ ಶರ್ಮಾ ರವರು ಶ್ರೀಯುತ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರನ್ನು ಸ್ವಾಗತಿಸಿ ಬರಮಾಡಿಕೊಳ್ಳುವರು. ಶ್ರೀ ಯುತರು ದೇವಾಲಯ, ಯಾಗ, ಸಮಾಜ, ಮುಂದಿನ ಪೀಳಿಗೆ, ಪರಿಸರ ಕುರಿತಾಗಿ ವಿಶೇಷ ಮಾಹಿತಿಯನ್ನು ನೀಡುತ್ತಾ, ಇಹ ಪರಕ್ಕೆ ಸುಗಮ ಹಾದೀ ವೇದ ವಿದ್ಯೇಯಾಗಿದೆ, ಯಜ್ಞಗಳು ದೇವರಿಗೆ ಹವಿಸ್ಸು ಸಮರ್ಪಣೆಯ ವಿಧಾನ, ಯಜ್ಞಗಳು ಬ್ರಾಹ್ಮಣರ ಆದ್ಯ ಕರ್ತವ್ಯವಾಗಿದೆ ಎಂದರು.

ಋಕ್ ಸಂಹಿತಾ ಯಾಗ & ಸಹಸ್ರ ಚಂಡಿಕಾ ಯಾಗ : ಶ್ರೀ ಕ್ಷೇತ್ರ ಅಗಲ್ಪಾಡಿ (27 Mar 24 - 03 Apr 24) - VIDEO INVITATION

 


Sunday 18 February 2024

ಆಚಾರು ಸುಕ್ಕಲ್ಲೆ ಗ್ರಾಚಾರು : ಕರಾಡ ನಾಟಕ

ಸಾಮಾನ್ಯ ವಿಷಯವೊಂದರ ಸುತ್ತು ಘಟನೆಗಳನ್ನು ಪೋಣಿಸುತ್ತ ಅದಕ್ಕೊಪ್ಪುವ ಪಾತ್ರಗಳು, ಸಹಜ ಸಂಭಾಷಣೆಗಳನ್ನು ಹೆಣೆದು, ಪೂರಕವಾಗಿ ಭಾವೋದ್ದೀಪನಕ್ಕಾಗಿ ಹಾಡುಗಳನ್ನು ಸಮ್ಮಿಳಿತಗೊಳಿಸಿ ವೇದಿಕೆಯಲ್ಲಿ ಅದನ್ನು ಅಭಿವ್ಯಕ್ತಗೊಳಿಸಿದಾಗ ಅದೊಂದು ವಿಶೇಷ ರೀತಿಯ ನಾಟಕದ ರೂಪ ಪಡೆಯುತ್ತದೆ ಎಂಬುದಕ್ಕೆ ಒಂದು ನಿದರ್ಶನಆಚಾರು ಸುಕ್ಕಲ್ಲೆ ಗ್ರಾಚಾರುಎಂಬ ನಾಟಕ, ಕರಾಡ ಮಹಿಳೆಯರೇ ನಿರ್ದೇಶಿಸಿ, ನಟಿಸಿದ ತಂಡದ ಟೀಮ್ ವರ್ಕ್ ನಿಜಕ್ಕೂ ಪ್ರಶಂಸಾರ್ಹ.

ಗ್ರಾಮೀಣ ಕರಾಡ ಕೃಷಿ ಕುಟುಂಬದಲ್ಲಿನ ಘಟನೆಗಳೇ ಕಥಾ ವಸ್ತು. ಅವಿಭಾಜ್ಯ ಕುಟುಂಬದಲ್ಲಿ ತಾಯಿಯೊಂದಿಗೆ ಬದುಕುತ್ತಿರುವ ಇಬ್ಬರು ಗಂಡು ಮಕ್ಕಳ ಮತ್ತವರ ಕುಟುಂಬದ ಚಿತ್ರಣವೊಂದರ ಸುತ್ತ ಹೆಣೆದಿರುವ ಸಾಮಾನ್ಯ ಕಥಾವಸ್ತು. ಕೂಡು ಕುಟುಂಬದ ಇಬ್ಬರು ಸೊಸೆಯಂದಿರ ಅನ್ನೋನ್ಯತೆಮಕ್ಕಳ ಆರೈಕೆ, ಅವರೊಂದಿಗೆ ಬಾಂಧವ್ಯದ ಚಿತ್ರಣ ಶ್ರೀ ಸಿದ್ಧಿವಿನಾಯಕ ಸುಪ್ರಭಾತದಿಂದ  ನಾಂದಿಯಾಗುವ ನಾಟಕದಲ್ಲಿನ ಸಂಭಾಷಣೆ ಸಹಜ ಮತ್ತು ಸ್ವಾಭಾವಿಕವಾದುದು. ಆಂಗಿಕ ಭಾವಾಭಿನಯಕ್ಕೆ ಜೊತೆ ಕೊಡುವ ಸಂಭಾಷಣೆಯ ಪರಿ ಎಲ್ಲ ಪ್ರೇಕ್ಷಕರನ್ನು ನಾಟಕದತ್ತ ಕೊಂಡೊಯ್ಯುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಶಾಲೆ, ಸತ್ಸಂಗಗಳ ಪ್ರಭಾವವನ್ನು ಪರೋಕ್ಷವಾಗಿ ನಾಟಕ ಸಾರಿದೆ. ಬೆಳೆಯುತ್ತಿರುವ ಮಕ್ಕಳು ಮೊಬೈಲ್ ಚಟಕ್ಕೆ ಅಂಟುವುದು, ಮಕ್ಕಳೊಂದಿಗೆ ಹಿರಿಯರು ಮೌಲ್ಯಯುತವಾದ ಸಮಯವನ್ನು ಕಳೆಯದೆ, ಟಿ.ವಿ ವೀಕ್ಷಣೆಯಲ್ಲಿ ಮಗ್ನವಾಗಿರುವ ಚಿತ್ರಣ.... ನಮ್ಮ ಇಂದಿನ ಬದಲಾಗುತ್ತಿರುವ ಬದುಕಿನ ಬಿಂಬದಂತಿದೆ. ನಾಟಕದಲ್ಲಿನ ತಿರುವು ತರುವುದೇ ಬೆಳೆದ ಮಕ್ಕಳ ಪಿಕ್ನಿಕ್ನಲ್ಲಾದ ಅನಾಹುತದಿಂದಾಗಿ ಒಟ್ಟಿಗೆ ಇದ್ದಿದ್ದ  ಕುಟುಂಬಗಳೆರಡೂ ಇಬ್ಬಾಗವಾಗುವ ದುರಂತ ದೃಶ್ಯ ಪ್ರೇಕ್ಷಕನನ್ನು ಇದೇ ವೇಳೆಯಲ್ಲಿ ತಟ್ಟುವುದು 'ಉದ್ಘಾಣು ನಾ ಹಂಗ... ಉದ್ಘಾಣು ನಾ' ಎಂಬ ಹಾಡು. ಅಂತೂ ಮಕ್ಕಳು,  ಮನೆಯವರೊಳಗಿನ ಸುಮಧುರ ಬಾಂಧವ್ಯ ಒಮ್ಮಿಂದೊಮ್ಮೆಲೇ ತುಂಡಾದಾಗ ಪ್ರೀತಿ, ಸ್ನೇಹಸಂಬಂಧವನ್ನು ಬಯಸುವ ಕುಟುಂಬಸ್ಥರಿಗೆ ಭಾಸವಾಗುವುದೇ ಅಂಧಕಾರ, ಅನುಭವವನ್ನು ದಾರುಣವಾಗಿ ಚಿತ್ರಿಸುವಲ್ಲಿಇಲ್ಲಿನ ಪಾತ್ರಗಳು ಗೆದ್ದಿವೆ. ಮುಂದೆ ಮಕ್ಕಳನ್ನು ಹೊರದೇಶಕ್ಕೆ ಕಳುಹಿಸಿ ಒಬ್ಬಂಟಿಯಾಗುವ ವಯೋವೃದ್ಧ ಮಹಿಳೆ, ಅವಳನ್ನು ವೃದ್ಧಾಶ್ರಮಕ್ಕೆ ದೂಡಲು ಮಕ್ಕಳು ಮಾಡಿದ ವ್ಯವಸ್ಥೆ ಇದೇ ವೆಳೆಯಲ್ಲಿ ಚಿಕ್ಕಮ್ಮನನ್ನು ತನ್ನ ಮನೆಗೆ ಕರೆದೊಯ್ದು ಅವಳನ್ನು ಹೆತ್ತ ತಾಯಿಯಂತೆ ಆದರಿಸುವ (ಅಕ್ಕನ ಮಗ) ಮಗ..... ಮತ್ತೆ ಕುಟುಂಬಗಳ ಸಮಾಗಮವಾಗುವಲ್ಲಿ ಕಾರಣರಾಗುತ್ತಾರೆ. ಜೇನು ಗೂಡಿನಂತೆ ನಾವುವೋವಾ ಗೂಡು ಅಮ್ಮಿ..... ಔಂಚ ಸಂಗತ ತುಮ್ಮಿ" ಎಂಬ ನಿಜ ಚಿತ್ರಣವನ್ನು ನೀಡಲಾಗುತ್ತದೆ. ನಾಟಕದ ಬಗ್ಗೆ ಅಂತ್ಯದಲ್ಲಿ ತಿಳಿಸಿದಂತೆ, ಇದೊಂದುಥೀಮ್ಆಧರಿತ ನಾಟಕ ವಸ್ತು. ಕವನ ಒಂದರ ಸಾಲುಗಳ ಸುತ್ತಲೂ ಗೂಡುಕಟ್ಟಿದ ಕಥಾನಕ ವಿಶೇಷವೆಂದರೆ ಇಲ್ಲಿ ಹಾಡೊಂದರಿಂದ ನಾಟಕ ಹುಟ್ಟಿಹುದು. ಸಾಮಾನ್ಯವಾಗಿ ನಾಟಕಗಳನ್ನು ಬಲಯುತಗೊಳಿಸಲು ಅವರ ಲಿಖಿತ Script ಹಾಡುಗಳನ್ನು ಹೆಣೆಯುವುದು). ಯಾವುದೇ ಇಲ್ಲದೆ, ತಮ್ಮದೇ ಆದ ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಿದ ನಾಟಕ ಪ್ರೇಕ್ಷಕರ ಮನದೊಂದಿಗೆ ಮಾತನಾಡಿದೆ. ನಾಟಕ ಕಳೆದು ರಾತ್ರಿ ಸಮಯದಲ್ಲಿ 'ಸದನ' ಹೊರ ಬಂದಾಗ ಸುತ್ತಲೂ ಬೆಳಕಿದ್ದರೂಉದ್ಘಾಡು ನಾ ಹಂಗ ಉದ್ಘಾ ನಾ...” ಮನದ ಮೂಲೆಯಿಂದ ಗುಂಜಿಸುವಂತಾಯಿತು.

SN ಭಟ್, ಸೈಪಂಗಲ್ಲು

Click here to watch : ಆಚಾರು ಸುಕ್ಕಲ್ಲೆ ಗ್ರಾಚಾರು

Sunday 11 February 2024

Rashtriya ePushtakalaya (ರಾಷ್ಟ್ರೀಯ ಈ - ಪುಸ್ತಕಾಲಯ)


Immerse yourself in the Rashtriya ePushtakalaya inaugurated by Sh. Dharmendra Pradhan, Hon'ble Minister of Education, Skill Development and Entrepreneurship, Government of India on 10 February 2024 from Bharat Madapam, Pragati Maidan, New Delhi. 

Dive into a national repository of knowledge and stories, where every page holds a treasure trove of wisdom and insight. Explore, learn, and discover this digital library and access the richness of our heritage today! 

Download Rashtriya ePushtakalaya using following links


For Android Application 

CLICK HERE 


For iOS Mobile App link

CLICK HERE