Saturday 30 March 2024

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಶ್ರೀ ಮಹಾಗಣಪತಿ ಯಾಗ, ಋಕ್ ಸಂಹಿತಾ ಯಾಗ, ಯಾಗ ಸಮುಚ್ಚಯಕ್ಕೆ ಚಾಲನೆ.

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಅಷ್ಟೋತ್ತರ ಸಹಸ್ರ ನಾಳಿಕೇರ ಶ್ರೀ ಮಹಾಗಣಪತಿ ಯಾಗ, ಋಕ್ ಸಂಹಿತಾ ಯಾಗ, ಯಾಗ ಸಮುಚ್ಚಯಕ್ಕೆ ಚಾಲನೆ. 

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾ.27ರಂದು ಆರಂಭಗೊಂಡು, ಪ್ರಾತ: ಋತ್ವಿಜರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ಬಳಿಕ ಭಕ್ತರು ಸೇರಿ ದೇವತಾ ಪ್ರಾರ್ಥನೆ, ಗುರು ಗಣಪತಿ, ವರುಣ ಪೂಜನ, ಪುಣ್ಯಾಹ ವಾಚನ, ಋತ್ವಿಕ್ ವರಣ, ಮಧುಪರ್ಕ ಪೂಜೆ ನೆರವೇರಿ, ಅರಣೀ ಮಥನ ಮೂಲಕ ಅಗ್ನಿ ಪ್ರಜನನ, ಪೂಜನ, ಸ್ಥಾಪನ.   ಋಕ್ ಸಂಹಿತಾ ಯಾಗ ಮಂತ್ರ ಪಠಣದೊಂದಿಗೆ ಆಜ್ಯದ ಆಹುತಿ ಸಮರ್ಪಣೆ, ಪೂರ್ಣಾಹುತಿ ನಡೆಯಿತು.

ಕುಂಡ ಮಧ್ಯದಲ್ಲಿ ಅಗ್ನಿ ಸ್ಥಾಪನೆ, ಪೂಜನ, ಆಜ್ಯ, ಅಷ್ಟದ್ರವ್ಯ, ಕೇಪಳ ಹೂ, ದೂರ್ವೆಗಳಿಂದ ಹೋಮ, ಪೂರ್ಣಾಹುತಿ ನಡೆಯಿತು. ನವಗ್ರಹ ಹೊಮವನ್ನು ಆಜ್ಯ, ಚರು, ಸಮಿಧೆ ಸಮರ್ಪಿಸಿ ಪೂರ್ಣಾಹುತಿಯೊಂದಿಗೆ ನಡೆಸಲಾಯಿತು. 

ಕ್ಷೇತ್ರದ ಆಡಳಿತ ಮೊತ್ತೇಸರ ಎ.ಜಿ. ಶರ್ಮಾ ಕೋಳಿಕ್ಕಜೆ ಮುತುವರ್ಭಾಜಿಯಿಂದ ಭಾಗ ವಹಿಸಿದ್ದರು. ವೇದಮಾತಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ, ಲೋಕ ಸಭಾ ಸದಸ್ಯರು, ಸಮೀತಿ ಸದಸ್ಯರು , ಭಕ್ತರು ಭಾಗವಹಿಸಿದ್ದರು .


No comments:

Post a Comment