IMPORTANT NOTICE

New official website is designed for Karada Community. Please visit www.karadavishwa.com for more details.

Saturday, 30 March 2024

ಅಗಲ್ಪಾಡಿ ಯಾಗ ಶಾಲೆ, ಪಾಕಶಾಲೆ, ವಸತಿಗೃಹ ಸಾಂಸ್ಕೃತಿಕ ವೇದಿಕೆ ಎಡನೀರು ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿದರು.


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾ.27ರಂದು ಆರಂಭಗೊಳ್ಳಲಿದ್ದು, ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕಾರ್ಯಕ್ರಮದ ಅಂಗವಾಗಿ ಮಾ.26ರಂದು ಬೆಳಗ್ಗೆ ಗಣಪತಿಯಾಗ ಸಂಪನ್ನಗೊಂಡು, ಎಡನೀರು ಸಂಸ್ಥಾನದ ಮಠಾಧೀಶರಾದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಯವರು ಚಿತ್ತೈಸಿ, ಯಾಗ ಶಾಲೆ, ಪಾಕಶಾಲೆ, ವಸತಿಗೃಹ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. 

ಪುಂಗನೂರು ಗೋಮಾತೆ ಯಾಗದ ಸಂದರ್ಭದಲ್ಲಿ ಆಂಧ್ರಪ್ರದೇಶದ ಪುಂಗನೂರು ಗೋವು ಭಗವದ್ಭಕ್ತರನ್ನು ತಳಿಯ ಗೋವಿನಂತೆ ಪುಂಗನೂರು ಗೋವು ಆಕರ್ಷಿಸಲಿದೆ. ಗಿಡ್ಡ ತಳಿಯಾಗಿ ನೋಡಲು ಆಕರ್ಷಕವಾಗಿದೆ. ಇದರ ಹಾಲು ಅತ್ಯಂತ ಶ್ರೇಷ್ಠವಾಗಿದ್ದು ಆರೋಗ್ಯದಾಯಕವಾಗಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಗೋವನ್ನು ಆಂಧ್ರಪ್ರದೇಶದಿಂದ ತರಲಾಗಿದೆ. ಇದು ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಗೋ ಶಾಲೆಯಲ್ಲಿ ಇರಲಿದೆ.

No comments:

Post a Comment