ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 4ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆದು, ಧನ್ವಂತರಿ ದೇವರ ಪ್ರೀತ್ಯರ್ಥ ಯಾಗ, ಶ ದೇವರ ಮಹಾಪೂಜೆ, ಮಹಾ ಮಂಗಳಾರತಿ, ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ಗಳೊಂದಿಗೆ ಅನ್ನದಾನ ಜರುಗಿತು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವೇದಮಾತಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಯಾಗಗಳು ಜರುಗುತ್ತಿರುವ ಸುಸಂದರ್ಭ ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗಕ್ಕಾಗಿ ಮಂಟಪ ದೇವತಾ ಆರಾಧನೆ, ದಂಪತಿ ಪೂಜಾ, ಸುವಾಸಿನಿ, ಕುಮಾರಿಕಾ ಆರಾಧನೆ, ಸುಮಾರು ನೂರು ಜನ ಋತ್ವಿಜರು ಸೇರೀ ಸಪ್ತಶತೀ ಪಾರಾಯಣ ನೆರವೇರುತ್ತಿದೆ.
ಧನ್ವಂತರಿ ಯಾಗದ ಬಾಬ್ತು ಗುರು, ಗಣಪತಿ ಪೂಜೆ, ಸಂಕಲ್ಪ, ಸ್ವಸ್ತಿ ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್ ವರಣ, 40 ಸಾವಿರ ಧನ್ವಂತರಿ ಮಂತ್ರ ಪಠಣ ದೊಂದಿಗೆ, ತುಪ್ಪ, ಚರು, ದೂರ್ವೇ, ಅಮೃತ ಬಳ್ಳಿ ಸಂಮಿಧೆಗಳಿಂದ ತಲಾ ಸಹಸ್ರ ಸಂಖ್ಯೆಯಲ್ಲಿ ನಾಲ್ಕು ಸಾವಿರ ಆಹುತಿ ಸಮರ್ಪಣೆಯೊಂದಿಗೆ ಹವನ, ಪೂರ್ಣಾಹುತಿ ಸುಸಂಪನ್ನ.
ದಿನಾಂಕ 30 ಮಾರ್ಚ್ 2024ನೇ , ಶನಿವಾರ ಸುಸಂಪನ್ನಗೊಂಡ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಸಹಸ್ರಾರು ಸಂಖ್ಯೆಯಲ್ಲಿ ಅನ್ನಸಂತರ್ಪಣೆ ಜರುಗಿತು.
No comments:
Post a Comment