IMPORTANT NOTICE

New official website is designed for Karada Community. Please visit www.karadavishwa.com for more details.
Showing posts with label ಅಗಲ್ಪಾಡಿ. Show all posts
Showing posts with label ಅಗಲ್ಪಾಡಿ. Show all posts

Friday, 5 April 2024

ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ


ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಋಕ್ ಸಂಹಿತಾಯಾಗ ಪೂರ್ಣಾಹುತಿ ಜರುಗಿತು. ಲೋಕ ಕಲ್ಯಾಣಾರ್ಥ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ ಋತ್ವಿಕ್ ಗಣ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸುಸಂಪನ್ನ. 

ಕಾಸರಗೋಡು ಜಿಲ್ಲೆಯ ಉಬ್ರಂಗಳ ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದ ಅಂಗವಾಗಿ ದಿನಾಂಕ 3 ಮಾರ್ಚ್ 2024 ಬುಧವಾರ ಬೆಳಗ್ಗೆ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾ ಪೂರ್ಣಾಹುತಿ, ಮಹಾ ಪೂಜೆ ಜರುಗಿತು. 

ಮುಂಜಾನೆ ಮಂಟಪ ದೇವರ ಪೂಜೆ, ಅರಣೀ ಸೂಕ್ತ ಪಠಣದಲ್ಲಿ, ಅರಣೀ ಮಥನ ದ್ವಾರಾ ಅಗ್ನಿ ಪ್ರಜನನ, ಆವಾಹನ, ಪೂಜನ ಸಹಿತ ಹೋಮ ಕುಂಡಗಳಲ್ಲಿ ಅಗ್ನಿ ಪ್ರತಿಷ್ಠೆ ನಡೆಯಿತು. ಸಪ್ತಶತೀ ಪಠಣ ದ್ವಾರಾ ಸಹಸ್ರ ಚಂಡಿಕಾಯಾಗ ಪ್ರಾರಂಭವಾಯಿತು. ಅದಾಗಲೇ ನೂರು ಜನ ಋತ್ವಿಜರ ಮುಖೇನ ಸಹಸ್ರ ಸಂಖ್ಯೆಯಲ್ಲಿ ಚಂಡೀ ಸಪ್ತಶತೀ ಪಾರಾಯಣ, ಹತ್ತು ಲಕ್ಷ ನವಾವರಣ ಜಪ ಸಂಪನ್ನಗೊಂಡು, ದಶಾಂಶ ಸಂಖ್ಯೆಯಲ್ಲಿ ತರ್ಪಣ, ಒಂದೇ ಸಮಯದಲ್ಲಿ ದಶ ಕುಂಡಗಳಲ್ಲಿ ನೂರು ಜನ ಋತ್ವಿಜರ ಮೂಲಕ ಒಂದು ಲಕ್ಷ ನವಾವರಣ ಮಂತ್ರ ಸಹಿತ ಆಜ್ಯ ಆಹುತಿ ನೀಡಲಾಯಿತು. ಬೆಲ್ಲ, ಅರಸಿನ, ಏಲಕ್ಕಿ , ಜಾಯೀಕಾಯೀ, ತುಪ್ಪ ಸಹಿತವಾಗಿ ಒಂದು ಸಾವಿರದ ಮುನ್ನೂರು ಕೆ.ಜಿ.ಅಕ್ಕಿಯಿಂದ ತಯಾರಿಸಲಾದ ಪಾಯಸವನ್ನು ಎಪ್ಪತ್ತು ಸಾವಿರ ಆಹುತಿಯನ್ನು ಸಪ್ತಶತೀ ಪಠಣ ದ್ವಾರಾ ಅಗ್ನಿಗೆ ಸಮರ್ಪಿಸಿ ಹೋಮ ನೆರವೇರಿತು. 

ತಲಾ ಬುಟ್ಟಿಗಳಂತೆ ತೆಂಗಿನಕಾಯಿ, ಕೊಬ್ಬರಿ, ಬಿಲ್ವದ ಕಾಯಿ, ಇಕ್ಷುದಂಡ, ಬಾಳೇ ಹಣ್ಣು ಗೊನೆಗಳು, ಮಹಾಳುಂಗ ಫಲ ಸಹಿತ ಹಣ್ಣು ಹಂಪಲು, ವಿವಿಧ ಒಣ ಹಣ್ಣುಗಳು, ಶ್ರೀ ಗಂಧ ಕೊರಡು, ಏಲಕ್ಕಿ, ಜಾಯೀಕಾಯೀ, ಲವಂಗ ಇತ್ಯಾದಿ ಸುಗಂಧ ದ್ರವ್ಯಗಳು, ಅರಳು, ಪಂಚಾಮೃತ, ಎಳ್ಳು, ಪಲಾಶ ಪುಷ್ಪ, ವಾಯನ, ವಸ್ತ್ರ, ಅಡಿಕೆ, ವೀಳ್ಯದೆಲೆ, ಹೂ, ಹಿಂಗಾರದೊಂದಿಗೆ ಸಹಸ್ರ ಚಂಡಿಕಾ ಯಾಗದ ಮಹಾ ಪೂರ್ಣಾಹುತಿ, ಆರತೀ, ಚಂಡಿಕಾ ಯಾಗ ಮಂಟಪದಲ್ಲಿ ಪೂಜೆ ನೆರವೇರಿತು. ಕರ್ಮಾಂಗ ಸಮಾಪ್ತಿ ಯಲ್ಲಿ, ಅದಾಗಲೇ ನೂರು ಜನ ಕನ್ನಿಕೆಯರ, ನೂರು ಜನ ಸುವಾಸಿನಿಯರ ಆರಾಧನೆ, ಹತ್ತು ದಂಪತಿ ಪೂಜಾ ಸಂಪನ್ನಗೊಂಡಿತು. 

ಬ್ರಾಹ್ಮಣ ಪೂಜೆ, ದಕ್ಷಿಣಾ ಪ್ರದಾನ, ಮಂತ್ರಾಕ್ಷತೆ, ಆಶೀರ್ವಚನ, ಪ್ರಸಾದ ವಿತರಣೆ ಅವಭೃತ ಸ್ನಾನ ನಡೆದು, ಬ್ರಾಹ್ಮಣ ಸಮಾರಾಧನೆ, ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಭಕ್ತ ಗಣಕ್ಕೆ ಅನ್ನ ಸಂತರ್ಪಣೆ ನಡೆಯಿತು. ಈ ಸುಸಂದರ್ಭದಲ್ಲಿ ಎಡನೀರುಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ದಿವ್ಯ ಸಾನ್ನಿಧ್ಯ ವಹಿಸಿದ್ದರು. 

ಯಾಗದ ಅನುಷ್ಠಾನ ಕರ್ಮಾಂಗದ ನೇತೃತ್ವವನ್ನು ಶ್ರೀ ಸೂರ್ಯನಾರಾಯಣ ಭಟ್ ವಹಿಸಿ, ಪ್ರಧಾನ ಆಚಾರ್ಯತ್ವದಲ್ಲಿ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ರವರು ವಹಿಸಿ, ವೈದಿಕರಾದ ಶ್ರೀ ರಾಮ ಭಾರದ್ವಾಜ್ ತಂಡ, ವಿವಿಧ ರಾಜ್ಯಗಳ ವೈದಿಕರು ಭಾಗವಹಿಸಿ ಕಾರ್ಯಕ್ರಮ ಛಂದಗಾಣಿಸಿದರು. ಹರಿದು ಬಂದ ಜನಸಾಗರ ಊರ ಪರವೂರ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿದ ಜನರು ಬುಧವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಕುಟುಂಬ ಸಹಿತವಾಗಿ, ಮಲಬಾರ್ ದೇವಸ್ವಂ ಬೋರ್ಡ್ ಅಧಿಕಾರಿಗಳು, ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಲೋಕಸಭಾ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಮೊದಲಾದ ಅನೇಕ ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ, ವೇದಮಾತ ಟ್ರಸ್ಟ್ ಹಾಗೂ ಯಾಗ ಸಮಿತಿ ಅಧ್ಯಕ್ಷ ತಲೇಖ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ಆಡಳಿತ ಮೊಕ್ತೇಸರರು ಭಾಗವಹಿಸಿ ಕಾರ್ಯಕ್ರಮ ಸಾಂಗವಾಗಿ ಸುಸಂಪನ್ನಗೊಂಡಿತು. 

ಶ್ರೀ ಕ್ಷೇತ್ರದಲ್ಲಿ ಮಾ.27ರಿಂದ ಏ.3ರ ವರೆಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಮುಕ್ತಾಯಗೊಂಡಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೂರಾರು ವೈದಿಕರ, ಸ್ವಯಂ ಸೇವಕರ ಹಗಲಿರುಳು ಪರಿಶ್ರಮದ ಫಲವಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು - ಎ.ಜಿ.ಶರ್ಮಾ, ಆಡಳಿತ ಮೊಕೇಸರರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ ಇಂದಿಲ್ಲಿ ಹೇಳಿದರು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಋಕ್ ಸಂಹಿತಾ ಯಾಗ ಪೂರ್ಣಾಹುತಿ ಸುಸಂಪನ್ನಗೊಂಡಿತು.

 


ಅಗಲ್ಪಾಡಿ ಕ್ಷೇತ್ರ ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 


ಅಗಲ್ಪಾಡಿ ಕ್ಷೇತ್ರ ಅಷ್ಟೋತ್ತರ ಶತಕಲಶಾಭಿಷೇಕ, ಋಕ್‌ಸಂಹಿತಾ ಯಾಗ, ಚಂಡಿಕಾ ಯಾಗ FOX24LIVE

 


Tuesday, 2 April 2024

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮಂತ್ರಗಳ ನೀನಾದ, ಯಾಗಗಳ ಪುಂಜ, ಪಾವನವಾಯಿತು ಶ್ರೀ ಸಾನಿಧ್ಯ


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ  ಮಂತ್ರಗಳ ನೀನಾದ, ನೆರವೇರುತ್ತಿವೆ ಯಾಗಗಳ ಪುಂಜ, ಪ್ರವಾಹೋಪಾದಿಯಾಗಿ ಹರಿದು ಬರುತ್ತಿರುವ ಭಕ್ತರು, ಸಹಸ್ರಾರು ಸಂಖ್ಯೆಯ ಅನ್ನದಾನ ಒಟ್ಟಿನಲ್ಲಿ ಪಾವನವಾಯಿತು ಶ್ರೀ ಸಾನಿಧ್ಯ.

5ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆಯಿತು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವೇದಮಾತಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ  ಲೋಕ ಕಲ್ಯಾಣಾರ್ಥವಾಗಿ ವಿವಿಧ ಯಾಗಗಳು ಜರುಗುತ್ತಿರುವ ಸುಸಂದರ್ಭ ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗಕ್ಕಾಗಿ ಸುಮಾರು ನೂರು ಜನ ಋತ್ವಿಜರು ಸೇರೀ ಏಕ ಕಂಠದಲ್ಲಿ ಶ್ರೀ ಚಂಡಿಕಾ ದೇವಿಯನ್ನು ಸ್ತುತಿಸುವ ಸಪ್ತಶತೀ ಪಾರಾಯಣಗಳು ಸಾವಿರ ಸಂಖ್ಯೆಯಲ್ಲಿ ಜರುಗಬೇಕು. ಮಂಟಪ ದೇವತಾ ಆರಾಧನೆ, ದಂಪತಿ ಪೂಜಾ, ಒಟ್ಟು ನೂರು ಸುವಾಸಿನಿಯರ, ನೂರು ಕುಮಾರಿಕೆಯರ ಆರಾಧನೆ ನೆರವೇರಬೇಕು.

ಬ್ರಾಹ್ಮಣ,  ಸುವಾಸಿನಿ, ಕುಮಾರಿಕಾ, ಸಮಾರಾಧನೆ ನಡೆಯಿತು. ದಿನಾಂಕ 31 ಮಾರ್ಚ್ 2024ನೇ , ರವಿವಾರ ಸುಸಂಪನ್ನಗೊಂಡ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಸಹಸ್ರಾರು ಸಂಖ್ಯೆಯಲ್ಲಿ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭ ಆಡಳಿತ ಮೊಕ್ತೇಸರರಾದ  ಕೋಳಿಕ್ಕಜೆ ಅನಂತ ಗೋವಿಂದ ಶರ್ಮಾ, ವೇದಮಾತಾ ಟ್ರಸ್ಟ್ ಅಧ್ಯಕ್ಷರಾದ ತಲೆಕ ಸುಬ್ರಹ್ಮಣ್ಯ ಭಟ್, ಯಾಗ ಸಮಿತಿ ಗೌರವಾಧ್ಯಕ್ಷರಾದ ಉಪ್ಪಂಗಳ ಶ್ರೀ ಕೃಷ್ಣ ಭಟ್, ಕೊಟ್ಟಂಗುಳಿ ಶ್ರೀ ಮಾಧವ ಭಟ್, ಬಲೆಕ್ಕಳ ಶ್ರೀ ಗಿರೀಶ್ ಭಾರದ್ವಾಜ್, ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಪ್ರಸಾದ ಭಟ್ ಪಾರ್ಥ ಕೊಚ್ಚಿ ಇವರುಗಳ ನೇತೃತ್ವದಲ್ಲಿ ಯಾಗದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿವೆ. 

ಸಹಸ್ರ ಚಂಡಿಕಾ ಯಾಗ | ಬೇರೆಲ್ಲೂ ಇಲ್ಲದ ಆಧುನಿಕ ಕಛೇರಿ | ಇತರ ಕಛೇರಿಗಳು | ಅಗಲ್ಪಾಡಿ

 


ಅಗಲ್ಪಾಡಿ ಭೂತಬಲಿ ಉತ್ಸವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ FOX24LIVE NEWS

 


ಕಿಕ್ಕಿರಿದ ಭಗವದ್ಭಕ್ತರು | ಪಾರ್ಕಿಂಗ್, ಅಡುಗೆ ಸೂಪರ್ | ಅಗಲ್ಪಾಡಿ ದೇವಸ್ಥಾನ

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಹರಿದು ಬಂದ ಭಕ್ತಜನ ಸಾಗರ | ಪುಂಗನೂರು ತಳಿಯ ಗೋವು

 


Sunday, 31 March 2024

ಅಗಲ್ಪಾಡಿ ಭೂತಬಲಿ ಉತ್ಸವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ FOX24LIVE

 


ಜನಾಕರ್ಷಣೆಯ ಪುಂಗನೂರು ದೇಶೀ ತಳಿ ಮತ್ತು ಸಹಸ್ರ ಚಂಡಿಕಾ ಯಾಗ : ಅಗಲ್ಪಾಡಿ

 


ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆದು, ಧನ್ವಂತರಿ ದೇವರ ಪ್ರೀತ್ಯರ್ಥ ಯಾಗ. 30-03-24


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 4ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆದು, ಧನ್ವಂತರಿ ದೇವರ ಪ್ರೀತ್ಯರ್ಥ ಯಾಗ, ಶ ದೇವರ ಮಹಾಪೂಜೆ, ಮಹಾ ಮಂಗಳಾರತಿ, ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ಗಳೊಂದಿಗೆ ಅನ್ನದಾನ ಜರುಗಿತು.    

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವೇದಮಾತಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಯಾಗಗಳು ಜರುಗುತ್ತಿರುವ ಸುಸಂದರ್ಭ ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗಕ್ಕಾಗಿ ಮಂಟಪ ದೇವತಾ ಆರಾಧನೆ, ದಂಪತಿ ಪೂಜಾ, ಸುವಾಸಿನಿ, ಕುಮಾರಿಕಾ ಆರಾಧನೆ, ಸುಮಾರು ನೂರು ಜನ ಋತ್ವಿಜರು ಸೇರೀ ಸಪ್ತಶತೀ ಪಾರಾಯಣ ನೆರವೇರುತ್ತಿದೆ.

ಧನ್ವಂತರಿ ಯಾಗದ ಬಾಬ್ತು ಗುರು, ಗಣಪತಿ ಪೂಜೆ, ಸಂಕಲ್ಪ, ಸ್ವಸ್ತಿ ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್ ವರಣ, 40 ಸಾವಿರ ಧನ್ವಂತರಿ ಮಂತ್ರ ಪಠಣ ದೊಂದಿಗೆ, ತುಪ್ಪ, ಚರು, ದೂರ್ವೇ, ಅಮೃತ ಬಳ್ಳಿ ಸಂಮಿಧೆಗಳಿಂದ ತಲಾ ಸಹಸ್ರ ಸಂಖ್ಯೆಯಲ್ಲಿ ನಾಲ್ಕು ಸಾವಿರ ಆಹುತಿ ಸಮರ್ಪಣೆಯೊಂದಿಗೆ ಹವನ, ಪೂರ್ಣಾಹುತಿ ಸುಸಂಪನ್ನ.

ದಿನಾಂಕ 30 ಮಾರ್ಚ್ 2024ನೇ , ಶನಿವಾರ ಸುಸಂಪನ್ನಗೊಂಡ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಸಹಸ್ರಾರು ಸಂಖ್ಯೆಯಲ್ಲಿ ಅನ್ನಸಂತರ್ಪಣೆ ಜರುಗಿತು.

ಅಗಲ್ಪಾಡಿ ಕ್ಷೇತ್ರ l ಸಹಸ್ರ ಚಂಡಿಕಾ ಯಾಗ l ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ FOX24LIVE

 


ಅಪೂರ್ವದಲ್ಲಿ ಅಪೂರ್ವ ಈ ಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ

 


ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 3ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿತು.


ಹನ್ನೊಂದು ಜನ ಋತ್ವಿಜರು ರುದ್ರ ಪಠಣ ದೊಂದಿಗೆ ಹೊಮವನ್ನು  ಆಜ್ಯ ಸಮರ್ಪಿಸಿ ಮಾಡಿ,  ರುದ್ರ ಚಮೆ ಪಠಣದೊಂದಿಗೆ ಪೂರ್ಣಾಹುತಿ ನೆರವೇರಿತು. ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗದ ಪ್ರಯುಕ್ತ ಗುರು ಗಣಪತಿ ಪೂಜೆ, ಮಹಾ ಸಂಕಲ್ಪ, ಆಚಾರ್ಯಾದಿ ಋತ್ವಿಕ್ ವರಣ, ಸಪ್ತಶತೀ ಪಾರಾಯಣ ಆರಂಭ,  ಮಂಟಪ ಸಂಸ್ಕಾರ, ಪ್ರಧಾನ ಕಲಶ ಸ್ಥಾಪನೆ ಜರುಗಿತು.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಸಂಯುಕ್ತಾಶ್ರಯದಲ್ಲಿ  ಲೋಕ ಕಲ್ಯಾಣಾರ್ಥ ವಾಗಿ   ಸಹಸ್ರ ಚಂಡಿಕಾ ಯಾಗ ಆರಂಭ, ಋಕ್ ಸಂಹಿತಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ನಡೆದು ಶ್ರೀ ದೇವರ ಮಹಾಪೂಜೆ ಭೂತ ಬಲಿ, ಉತ್ಸವ ಜರುಗಿತು. 

ದಿನಾಂಕ 29 ಮಾರ್ಚ್ 2024ನೇ , ಶುಕ್ರವಾರ ಸುಸಂಪನ್ನಗೊಂಡ ಚಂಡಿಕಾ ದೇವಿ ಪ್ರೀತ್ಯರ್ಥ ದಂಪತಿ ಪೂಜನ, ಹದಿನೆಂಟು ಸುವಾಸಿನಿ ಯರ ಪೂಜನದೊಂದಿಗೆ, ಇಪ್ಪತ್ತ ನಾಲ್ಕು ಜನ ಕುಮಾರಿಯರ ಆರಾಧನೆ ನೆರವೇರಿತು.  ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ  ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗಿತು.

ಧನ್ವಂತರಿ ಹೋಮ ಪೂರ್ಣಾಹುತಿ | ಸಹಸ್ರಚಂಡಿಕಾಯಾಗ | ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ