IMPORTANT NOTICE
Tuesday, 10 September 2024
Friday, 26 April 2024
Saturday, 13 April 2024
ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ. 28 ರಂದು ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾ ಯಾಗ
ಬಾಯಾರು: ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ. 28 ರಂದು ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾ ಯಾಗದ ಕಾರ್ಯಕ್ರಮಕ್ಕೆ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ದಿವ್ಯಾಶೀರ್ವಾದ ಸಹಿತ ತತ್ಕರಕಮಲ ಸಂಜಾತರಾಗಿರುವಂತಹ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಚಿತ್ತೈಸಲಿದ್ದು ಶುಭಾಶೀರ್ವಚನ ನೀಡಲಿದ್ದಾರೆ.
ಏ. 27 ರಂದು ಸಾಯಂ. ಗಂಟೆ 6 ಕ್ಕೆ ಆವಳಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಲಿದ್ದು ಪೂರ್ಣ ಕುಂಭ ಸ್ವಾಗತನೀಡಿ ಬರಮಾಡಿಕೊಳ್ಳಲಾಗುವುದು .ಈ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಮಹಾಮಂಗಳಾರತಿ ನಡೆಯಲಿರುವುದು. 7.30 ಕ್ಕೆ ಧೂಳಿ ಪಾದಪೂಜೆ, ಚಂದ್ರಮೌಳೀಶ್ವರ ಪೂಜೆ ಹಾಗೂ ಪಾದಪೂಜೆ ನಡೆಯಲಿರುವುದು.
28 ರಂದು ಬೆಳಗ್ಗೆ 8.30ಕ್ಕೆ ಮೇಲಿನಪಂಜ ಮೂಲಸ್ಥಾನಕ್ಕೆ ತೆರಳಲಿದ್ದು ತದನಂತರ 9. 30 ಕ್ಕೆ ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶ ಹಾಗೂ ಶತಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಮಧ್ಯಾಹ್ನ ಗಂಟೆ 12 ಕ್ಕೆ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ಹಾಗೂ ಮಂತ್ರಾಕ್ಷತೆ ನೀಡಲಿದ್ದಾರೆ.
ಸಾಯಂ ಗಂಟೆ 3.30ಕ್ಕೆ ಸಜಂಕಿಲ ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರಕ್ಕೆ ತೆರಳಿ ಅಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಲಿದ್ದಾರೆ.