IMPORTANT NOTICE

New official website is designed for Karada Community. Please visit www.karadavishwa.com for more details.

Sunday, 18 August 2024

ಋಗುಪಾಕರ್ಮ : ಶ್ರೀ ಕ್ಷೇತ್ರ ಅಗಲ್ಪಾಡಿ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ನಡೆಯುವ ಸಾಮೂಹಿಕ ಋಗುಪಾಕರ್ಮ(ನೂತನ ವಟುಗಳಿಗೆ ಸೇರಿ) ತಾರೀಕು 19.08.2024 ನೇ ಸೋಮವಾರ ನಡೆಯಲಿರುವುದು. ಈ ಸಂದರ್ಭದಲ್ಲಿ ಹೊಸ ವಟುಗಳು ತರಬೇಕಾದ ಸಾಮಗ್ರಿಗಳು :

1)ಬೆಳ್ತಿಗೆ ಅಕ್ಕಿ - 5 ಕುಡ್ತೆ 

2)ತೆoಗಿನ ಕಾಯಿ - 2

3)ತುಪ್ಪ - 1 ಕುಡ್ತೆ 

4)ಜನಿವಾರ -5

5)ನಾಣ್ಯಗಳು - 25

6)ಗೋಪಿಚಂದನ 

7)ಕೃಷ್ಣಾಜಿನ, ದಂಡಕಾಷ್ಟಕ, ಮೌoಜಿ 

(ಹಳೆ ಕೃಷ್ಣಾಜಿನ, ಮೌoಜಿ, ದಂಡಕಾಷ್ಟಕವನ್ನೂ ತರಬೇಕು)

8)ಹೊಸ ವಸ್ತ್ರ, ಶಾಲು.

ಎಲ್ಲಾ ವಟುಗಳು  ಬೆಳಗ್ಗೆ 8 ಗಂಟೆಗೆ ಹಾಜರಿರತಕ್ಕದ್ದು.

 ಇತಿ,

 ಆಡಳಿತ ಮಂಡಳಿ

ಋಗುಪಾಕರ್ಮ : ಕರಾಡ ಬ್ರಾಹ್ಮಣ ಸಮಾಜ, ಧ್ಯಾನ ಮಂದಿರ, ಶಕ್ತಿ ನಗರ

ಸಮಾಜ ಬಾಂಧವರೇ,

ಪ್ರತಿವರ್ಷದಂತೆ ಈ ವರ್ಷವೂ ಋಗುಪಾಕರ್ಮ ಕಾರ್ಯಕ್ರಮವು ನಮ್ಮ ಕರಾಡ ಸಮಾಜದ ಧ್ಯಾನ ಮಂದಿರದಲ್ಲಿ ಪುರೋಹಿತರಾದ ಅಣ್ಣಯ್ಯಣ್ಣ ಅವರ ನೇತೃತ್ವದಲ್ಲಿ ನಡೆಯಲಿದೆ.ಅರ್ಹ ಬಾಂಧವರು ಇದರ ಪ್ರಯೋಜನ ಪಡೆಯಬೇಕಾಗಿ  ವಿನಂತಿಸುತ್ತೇವೆ.

ತಾ: 19/8/24 ನೇ ಸೋಮವಾರ 

ಸಮಯ: ಬೆಳಿಗ್ಗೆ 6=30

ತರಬೇಕಾದ ವಸ್ತುಗಳು: ಹರಿವಾಣ,ತಂಬಿಗೆ,ಕವಳಿಗೆ, ಉದ್ಧರಣೆ.

ಸ್ವಲ್ಪ ಹೂ, ತುಳಸಿ, ಗರಿಕೆ.

ಅಡಿಕೆ, ವೀಳ್ಯದೆಲೆ.

ಸ್ವಲ್ಪ ಚಿಲ್ಲರೆ , ದುಡ್ಡು 

6 ಜನಿವಾರ 

ನೂತನ ಉಪಾಕರ್ಮದ ವಟುಗಳಿದ್ದಲ್ಲಿ ಪುರೋಹಿತರನ್ನು ಸಂಪರ್ಕಿಸುವುದು. (ಮೊಬೈಲ್ 94499 54689)

ಉಪಾಕರ್ಮ : ಬೆಂಗಳೂರು

ದಿನಾಂಕ : 19,ಆಗಸ್ಟ್ 2024 ಸೋಮವಾರ, ಮುಂಜಾನೆ 5.00 ರಿಂದ 7.30

ಸ್ಥಳ : ಉಪ್ಪಂಗಳ, 369,7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ, ಹೆಬ್ಬಾಳ, ಬೆಂಗಳೂರು 

ಕಾರ್ಯಕ್ರಮ : ಬೆಳಗ್ಗೆ 5 ಕ್ಕೆ ಪ್ರಾರಂಭ.   ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ, ಋಷಿ ಪೂಜೆ,  ಉಪಾಕರ್ಮ, ವೇದಾರಂಭ.

ಭಾಗವಹಿಸುವ ನೀವು ತರಬೇಕಾದ ಸಾಮಗ್ರಿ 

ಪಂಚಪಾತ್ರೆ ಉದ್ಧರಣೆ, ನೀರಿಗೆ ತಂಬಿಗೆ , ಹರಿವಾಣ, ಜನಿವಾರ ದಾನಕ್ಕೆ ಮತ್ತು ಧಾರಣೆಗೆ,  ದಾನಕ್ಕೆ ದಕ್ಷಿಣೆ.

7.30 ರಿಂದ ಉಪಾಹಾರ 

ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿವುದಾದರೆ ತಮ್ಮ ಹೆಸರನ್ನು : ನಾಗರಾಜ ಉಪ್ಪಂಗಳ -9535000365, ಇವರಿಗೆ ಮುಂಚಿತವಾಗಿ ಕೊಡಿ ( ವ್ಯವಸ್ಥೆ ದೃಷ್ಟಿಯಲ್ಲಿ )

ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಆಶ್ರಯದಲ್ಲಿ ನಡೆಯುವ ಉಪಾಕರ್ಮವು ಪದ್ಮನಾಭ ನಗರದ ಲಕ್ಷ್ಮೀಕಾಂತ ದೇವಸ್ಥಾನದ ಆವರಣದಲ್ಲಿನ ಮಂಟಪದಲ್ಲಿ ಜರುಗಲಿದೆ

19-08-2024 ಸೋಮವಾರ  ಬೆಳಗ್ಗೆ 6.00ರಿಂದ 9.00ರ ವರೆಗೆ ನಡೆಯಲಿದೆ.

ತಮ್ಮ ಅನುಕೂಲ ನೋಡಿಕೊಂಡು ಭಾಗವಹಿಸಿ