IMPORTANT NOTICE

New official website is designed for Karada Community. Please visit www.karadavishwa.com for more details.

Thursday, 26 January 2017

ಗಣರಾಜ್ಯ ದಿವಸ

ವಂದೇ ಮಾತರಂ…
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ
ವಂದೇ ಮಾತರಂ….
“ಗಣರಾಜ್ಯೋತ್ಸವದ  ಹಾರ್ದಿಕ ಶುಭಾಷಯಗಳು”
ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ ನಿಮಗಾಗಿ ಇಲ್ಲಿ…(Wikipedia ದಿಂದ ಕದ್ದಿದ್ದು)
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತ ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರ೦ದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು೦ಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಪೇರಿ ನಡೆಯುತ್ತದೆ.
ಇತಿಹಾಸ
ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು. ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.
ಏನಿದು ಗಣರಾಜ್ಯ? ಎಂದು ಪೂರ್ತಿ ದಿನ ತಲೆ ಕೆಡೆಸಿಕೊಂಡು ಕೊನೆಗೆ ಗೂಗಲ್ ದೇವರ ಮೊರೆ ಹೋದೆ. ಭಾರತದ ಸಂವಿಧಾನ (the Covnstitution of India) ಅಸ್ತಿತ್ವಕ್ಕೆ ಬಂದ ಸಲುವಾಗಿ ಭಾರತೀಯರು ಕಳೆದ ೬೭ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ರಾಷ್ಟ್ರೀಯ ಹಬ್ಬ ಜನವರಿ ೨೬ ಗಣರಾಜ್ಯೋತ್ಸವ ನಮಗೆಲ್ಲರಿಗೂ ತಿಳಿದಿರುವಂಥಹುದೇ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ ಸಾರ್ವಜನಿಕ ಆಡಳಿತ/ ರಾಜ್ಯಶಾಸ್ತ್ರದ ಗಣರಾಜ್ಯ ಪದದ ನಿಜವಾದ ಅರ್ಥ ಅಷ್ಟಾಗಿ ಇಲ್ಲ. ಆ ಕುತೂಹಲದಿಂದಲೇ ಸ್ವಲ್ಪ ಸಮಯ ಹೊಂದಿಸಿಕೊಂಡು ವಿಕಿಯಾದಿಯಾಗಿ ಗೂಗಲಿಸಿ ಒಂದಿಷ್ಟು ಮಾಹಿತಿ ಕಲೆ ಹಾಕಿದೆ, ಅವುಗಳನ್ನೇ ಇಲ್ಲಿ ರಾಶಿ ಹಾಕಲು ಹೊರಟಿರುವೆನು.
          ಅಮೇರಿಕಾದ ಎರಡು ರಾಜಕೀಯ ಪಕ್ಷಗಳೆಂದರೆ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳು. ಅವೆರಡರ ತತ್ವ ಸಿದ್ಧಾಂತಗಳು ತದ್ವಿರುದ್ಧವಾದವುಗಳೇ. ಆದರೆ ನಮ್ಮ ಭಾರತ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ರಾಷ್ಟ್ರ (ಪ್ರಜಾಪ್ರಭುತ್ವ ಮತ್ತು ಗಣರಾಜ್ಯ). ಪ್ರಜಾಪ್ರಭುತ್ವವೆಂದರೆ ಎಲ್ಲರಿಗೂ ತಿಳಿದಿರುವಂತೆ " ಜನರಿಂದ, ಜನರಿಗಾಗಿ, ಜನರಿಂದಲೇ ನಡೆಯುವ ಸರ್ಕಾರ", ಅಂದರೆ ಜನರ ಒಳಿತಿಗಾಗಿ ಶ್ರಮಿಸುವ ಚುನಾಯಿತ ಪ್ರತಿನಿಧಿಗಳ ಆಡಳಿತ ಮತ್ತು ಯಾವುದೇ ಸಂದರ್ಭದಲ್ಲಿ ಚುನಾಯಿಸಿದ ಮತದಾರರಿಗೆ ತಮ್ಮ ಪ್ರತಿನಿಧಿಯನ್ನು ವಿರೋಧಿಸುವ / ಜನಪ್ರತಿನಿಧಿಯು ಜಾರಿಗೆ ತಂದ ಕಾನೂನುಗಳನ್ನು ತಡೆಹಿಡಿಯುವ ಅಧಿಕಾರವಿರುತ್ತದೆ. ಸರಕಾರ ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಹೊರತಾಗಿ ಜನರನ್ನು ತಮ್ಮ ಇಷ್ಟಾರ್ಥಕ್ಕಾಗಿ ಬಳಸಿಕೊಳ್ಳುವುದು ಡೆಮಾಕ್ರೆಸಿಯ ಅಪಹಾಸ್ಯವೇ ಸರಿ. ಗಣರಾಜ್ಯವೆಂದರೆ ಒಂದು ಸಂವಿಧಾನ ಅಥವಾ ಆಳ್ವಿಕೆಗೆ (ಸರಕಾರಕ್ಕೆ) ಒಳಪಟ್ಟೆರುವಂಥದ್ದು ಆಡಳಿತ ವಂಶ ಪಾರಂಪರ್ಯವಾಗಿರದೆ ಅಧಿಕಾರ ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಮತ್ತವರ ಆಯ್ಕೆಯಿಂದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ (ಸಂವಿಧಾನದ ಒಡೆಯ) ಚುನಾವಣೆ. (A republic is a form of government in which the country is considered a "public matter" (Latin: res publica), not the private concern or property of the rulers, and where offices of state are subsequently directly or indirectly elected or appointed rather than inherited ). ಆದರೆ ಸದ್ಯದ/ ಮುಂದಿನ ಪರಿಸ್ಥಿತಿಗಳನ್ನು ಗಮನಿಸಿದರೆ ಎರಡೂ ಪದಗಳು ತಮ್ಮ ನಿಜಾರ್ಥಗಳನ್ನು ಕಳೆದುಕೊಂಡು ಸಂವಿಧಾನದ ಪರಿಭಾಷೆಯನ್ನೇ ಬದಲಿಸಲು ಹೊರಟಿರುವುದು ಭಾರತ ಸಂವಿಧಾನದ ದುರಂತವೇ ಸರಿ.
ಆಗಷ್ಟ್ ೧೫-೧೯೪೭ರ್ಂದು ಪಾಕಿಸ್ಥಾನವೆಂಬ ದಾಯಾದಿಯೊಂದಿಗೆ ಭಾರತ ಸ್ವತಂತ್ರ ದೇಶವಾಗಿ ರೂಪ ತಾಳಿತಾದರೂ, ಭಾರತ ಸರ್ಕಾರದ ಕಾಯಿದೆಯೊಂದಿಗೆ ಪಂಡಿತ್ ಜವಹರಲಾಲ್ ನೆಹರು ನೇತೃತ್ವದಲ್ಲಿ ಆಡಳಿತ ನಡೆಸುವ ಅನಿವಾರ್ಯತೆ ಎದುರಾಗಿತ್ತು. ದೇಶ ಸ್ವತಂತ್ರವಾಗಿದ್ದರೂ ಬ್ರಿಟಿಷರ ಕಾಯಿದೆ ಕಾನೂನುಗಳು ಜಾರಿಯಲ್ಲಿದ್ದವು. ಅಂದಿನವರೆಗೂ ಭಾರತ ಕಿಂಗ್ ಜಾರ್ಜ್ ೬ ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ರ ಅಡಿಯಾಳಾಗಿತ್ತು. ಅದಕ್ಕಾಗಿ ಆಗಷ್ಟ್ ೨೮-೧೯೪೭ರಂದು ಡಾ. ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಕರಡು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ನವೆಂಬರ್ ೪-೧೯೪೭ರಂದೇ ಭಾರತದ ಸ0ಸತ್ತಿನಲ್ಲಿ ಕರಡು ಸಂವಿಧಾನವನ್ನು ಮಂಡಿಸಲಾಯಿತು.
ಆದರೂ ಅಸೆಂಬ್ಲಿಯ ೩೦೮ ಸದಸ್ಯರ ಸುಮಾರು ೧೬೬ ದಿನಗಳ ಚರ್ಚೆಯ ಅನಂತರ ಅನೇಕ ಬದಲಾವಣೆ, ಸೇರ್ಪಡೆಗಳ ನಂತರ ಅಂದರೆ ೨ ವರ್ಷ ೧೧ ತಿಂಗಳು ೧೮ ದಿನಗಳ ತರುವಾಯ ನವೆಂಬರ್ ೨೬-೧೯೪೯ರಂದು ಎರಡು ಭಾಷೆಗಳಲ್ಲಿ ಭಾರತೀಯ ಸಂವಿಧಾನ (Constitution of India) ಸರ್ವಸಮ್ಮತವಾಗಿ ಅನುಮೋದಿಸಲ್ಪಟ್ಟಿತು. ೧೯೩೦ ಜನವರಿ ೨೬ ರ ಲಾಹೋರಿನ ಸಂಪೂರ್ಣ ಸ್ವರಾಜ್ಯದ ಸವಿ ನೆನಪಿಗಾಗಿ ಇನ್ನೆರಡು ತಿಂಗಳುಗಳ ನಂತರ ಭಾರತ ತನ್ನದೇ ಆದ ಸ್ವಂತ ಸಂವಿಧಾನದೊಂದಿಗೆ ಭಾರತ ಗಣರಾಜ್ಯವಾಗಿ ಕರೆಯಲ್ಪಟ್ಟಿತು.
ಈ ಸಂವಿಧಾನವು ಬೇರೆ ಬೇರೆ ರಾಷ್ಟ್ರ‍ಗಳ ಸಂವಿಧಾನಗಳ ಕೂಲಂಕಷ ಅಧ್ಯಯನದ ಫಲವಾಗಿ ರಚಿಸಲ್ಪಟ್ಟ ವಿಶ್ವದ ಅತಿ ದೊಡ್ಡ ಅತ್ಯುತ್ತಮ ಕಾಯಿದೆಗಳ ಭಂಡಾರವಾಗಿದ್ದು, ಇದರಲ್ಲಿ ೩೯೭ ಆರ್ಟಿಕಲ್ಸ್ ಮತ್ತು ೧೨ ಶೆಡ್ಯೂಲ್ಸ್ ಗಳು ಪ್ರತಿಯೋರ್ವ ಭಾರತೀಯನ ಸ್ವಾತಂತ್ರ್ಯದ ರಕ್ಷಣೆಗೆ ಕಟಿ ಬದ್ಧವಾದವುಗಳು. ಬ್ರಿಟನ್ನಿನ "ಸಂಸತ್ ಸ್ವರೂಪದ ಸರಕಾರ", ಅಮೇರಿಕಾದ "ಸರ್ವೋಚ್ಛ ನ್ಯಾಯಾಂಗ  ವ್ಯವಸ್ಥೆ", ಕೆನೆಡಾದ "ಕೇಂದ್ರೀಕೃತ ಫೆಡೆರಲ್ ರಾಜ್ಯ ಸ್ವರೂಪದ ಸರಕಾರ", ಐರ್ಲೆಂಡಿನ "ನಿರ್ದೇಶಾತ್ಮಕ ತತ್ವಗಳು (directive principles of state policy), ಆಸ್ಟ್ರೇಲಿಯಾದ "ಸಮಕಾಲೀನ ಮತ್ತು ಪರಸ್ಪರ ಸಹಕಾರದ ಆಡಳಿತ ಹಂಚಿಕೆ", ಜಪಾನಿನ "ನ್ಯಾಯ ಬದ್ಧ ಪೋಲೀಸ್ ವ್ಯವಸ್ಥೆ" ಮುಂತಾದ ಅಂಶಗಳು ಭಾರತದ ಸಂವಿಧಾನದ ವಿಶ್ವರೂಪದ ಅಂಗವಾಗಿವೆ. ಹೀಗೆ ಬೇರೆ ಬೇರೆ ಸಂವಿಧಾನಗಳ ಒಳ್ಳೆಯ ಅಂಶಗಳೆಲ್ಲವನ್ನೂ ತನ್ನಲ್ಲಿ ಅಡಕ ಮಾಡಿಕೊಂಡಿರುವ ಈ ಸಂಗ್ರಹವು ಎಲ್ಲಾ ಮಾನವೀಯ ನಾಗರೀಕ ನೀತಿ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಎಂದಿಗೂ ಹಿಂದೇಟು ಹಾಕಿಲ್ಲ.
ಸಂವಿಧಾನದೊಂದಿಗೇ ಭಾರತೀಯರಿಗೆ ಉಡುಗೊರೆಯಾಗಿ ದೊರೆತದ್ದು ತಮ್ಮ ಹಕ್ಕು ಮತ್ತು ಕರ್ತವ್ಯಗಳು. ಇಂದಿಗೂ ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ತನ್ನ ದೇಶ ಮತ್ತು ತನ್ನ ಜನಗಳ ಬಗ್ಗೆ ಮಮಕಾರ ಉಳಿದಿದ್ದರೆ ಅದು ಕೇವಲ ಮೇಲಿನ ಮೂರು ಅಂಶಗಳಿಂದಲೇ ಎನ್ನಬಹುದು. ಭಾರತ ಸಂವಿಧಾನ ದೇಶದ ಆಡಳಿತವನ್ನು ಕೇಂದ್ರೀಕೃತ ರಾಜ್ಯ ಸರಕಾರವೆಂಬ ವ್ಯವಸ್ಥೆಯನ್ನು ಕೊಡುಗೆಯಾಗಿ ಸುಲಲಿತ ಆಡಳಿತವನ್ನು ಗುರಿಯಾಗಿರಿಸಿ ಅಳವಡಿಸಿದೆ. ( federal in structure with certain unitary features ). ಅದಕ್ಕಾಗಿಯೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂದು ಮೂರು ವಿಭಾಗಗಳು ಸಂವಿದಾನವೆಂಬ ಆಟೋ ರಿಕ್ಷಾದ ಮೂರು ಚಕ್ರಗಳಿವೆ.  ಅಲ್ಲದೆ ಶಾಸಕಾಂಗದಲ್ಲಿಯೂ ಕೇಂದ್ರದಲ್ಲಿ ರಾಜ್ಯಸಭೆ (Council of States ) ಮತ್ತು ಲೋಕಸಭೆ(House of the People )ಯೆಂಬ ಮನೆಗಳೂ, ಪ್ರಧಾನ ಮಂತ್ರಿಯು ಲೋಕಸಭೆ, ಸರಕಾರದ ಮುಖ್ಯಸ್ಥರಾಗಿಯೂ ಪ್ರತಿ ರಾಜ್ಯದಲ್ಲಿ ವಿಧಾನ ಸಭೆ (Legislative Assembly), ಕೆಲವು ರಾಜ್ಯಗಳು ವಿಧಾನ ಪರಿಷತ್ (State Legislative Council), ರಾಜ್ಯ ಸರಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಯು ತನ್ನ ಮಂತ್ರಿಮಂಡಲದ ಸಹಕಾರದಿಂದ ಆಡಳಿತ ನಡೆಸತಕ್ಕುದು. ರಾಷ್ಟ್ರಪತಿಯು ಕೇಂದ್ರ ಕಾರ್ಯಾಂಗದ ಮುಖ್ಯಸ್ಥನಷ್ಟೇ ಅಲ್ಲದೆ ಭಾರತ ಗಣರಾಜ್ಯದ ಸೇನಾ ದಂಡನಾಯಕನಾಗಿರುತ್ತಾನೆ, ಅದೇ ರೀತಿ ರಾಜ್ಯಪಾಲ ರಾಜ್ಯದ ಆಗು ಹೋಗುಗಳ ವೀಕ್ಷಕ, ನಿಯಂತ್ರಕನಾಗಿರುತ್ತಾನೆ.
ಸತ್ಯಮೇವ ಜಯತೆಯೆಂಬ ಧ್ಯೇಯ ವಾಕ್ಯ, ಕೇಸರಿ (ಧೈರ್ಯ ಮತ್ತು ತ್ಯಾಗದ ಪ್ರತೀಕ) ಬಿಳಿ (ಸತ್ಯ ಮತ್ತು ಶಾಂತಿಯ ಪ್ರತೀಕ) ಹಸಿರು(ನಂಬಿಕೆ ಮತ್ತು ಸಂಮೃದ್ಧಿಯ ಪ್ರತೀಕ)  ಬಣ್ಣಗಳಿಂದ ರಾರಾಜಿಸುವ ತ್ರಿವರ್ಣ ಧ್ವಜ ದೇಶದ ಪ್ರಗತಿಯ ಅಶೋಕ ಚಕ್ರವನ್ನು ಒಳಗೊಂಡಿದೆ. ಆದರೆ ಇಂದು ಆ ತ್ರಿವರ್ಣವೂ ತನ್ನ ನಿಜದ ಅರ್ಥಗಳನ್ನು ಕಳೆದುಕೊಂಡು ರಾಜಕೀಯ ಪಕ್ಷಗಳ ಧರ್ಮಾಧಾರಿತ ಅರ್ಥಗಳನ್ನು ಪಡೆದುಕೊಂಡು, ಕೇಸರೀಕರಣ- ಬೆಳಗುವಿಕೆ- ಹಸಿರೀಕರಣ ಎಂಬಲ್ಲಾ ಪದಗಳು ದೇಶದ ಐಕ್ಯತೆ, ಸಾಮರಸ್ಯಗಳಿಗೆ ತೊಡಕಾಗಿವೆ. ಜಾತ್ಯಾತೀತತೆಯಂಥಾ ಅರ್ಥ ವಿಹೀನ ಪದಗಳು, ಪ್ರಾದೇಶಿಕತೆಯ ಕೂಗುಗಳು, ಪ್ರತ್ಯೇಕತೆಯ ಹಟಗಳು, ನದಿ ನೀರಿಗಾಗಿ, ಭಾಷಾವಾರು ಪ್ರಾಂತ್ಯರಚನೆಯಂಥ ಅಂತರ್ರಾಜ್ಯ ವಿವಾದಗಳು, ಗ್ರಾಮೀಣಾಭಿವೃದ್ಧಿಯ ಸುಳ್ಳು ನಾಟಕಗಳು, ದಿನನಿತ್ಯ ಏರುತ್ತಿರುವ ಹಣದುಬ್ಬರ, ತೈಲ ಅನಿಲ ಬೆಲೆಗಳು, ದೇಶದ ಅವಿಭಾಜ್ಯ ಅಂಗವೇ ಆಗಿರುವ ಭೃಷ್ಟಾಚಾರ, ದೇಶದ ಆಡಳಿತ ಸಂಸ್ಥೆಗಳ ದುರ್ಬಳಕೆ ಇತ್ಯಾದಿಗಳು ದೇಶ ಎದುರಿಸುತ್ತಿರುವ ಸಮಸ್ಯೆಗಳ ಸೈನ್ಯದ ಸೇನಾನಿಗಳು. ಇವಾವುದರ ಅರಿವೇ ಇಲ್ಲದಂತಹ ದುರಾಡಳಿತ, ಸಮಯ ಸಾಧನೆ, ಜನರ ಕಣ್ಣೊರೆಸುವ ನಾಟಕಗಳಲ್ಲಿ ವ್ಯಸ್ಥರಾಗಿರುವ ಜನಪ್ರತಿನಿಧಿಗಳು, ಅವರ ಹಿಡಿತದಲ್ಲಿ ನರಳುತ್ತಿರುವ ನ್ಯಾಯಾಂಗ, ಕಾರ್ಯಾಂಗ , ಸಿ.ಬಿ.ಐ., ಲೋಕಾಯುಕ್ತದಂಥ ವಿಚಾರಣಾ ಸಂಸ್ಥೆಗಳು ಮತ್ತು ಪೋಲೀಸ್ ವ್ಯವಸ್ಥೆ, ಇವೆಲ್ಲವೂ ೬೪ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿಯೂ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತಕ್ಕೆ ಹಿಡಿದ ಕೈಗನ್ನಡಿಗಳು. ಏನೇ ಆಗಲಿ ನಾವು  ನಿಜವಾದ ಸತ್ಪ್ರಜೆಗಳು, ಎಚ್ಚೆತ್ತು ಕೊಳ್ಳುತ್ತಿರುವ ಭಾರತೀಯರು. ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಕಾಪಾಡಿದ ಕಾಯುತ್ತಿರುವ ಭೂಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯ ಎಲ್ಲಾ ಸೈನಿಕರಿಗೂ, ದೇಶವನ್ನು ಅಭಿವೃದ್ದಿಯ ಪಥದೆಡೆಗೆ ಕೊಂಡುಯ್ಯುತ್ತಿರುವ ಎಲ್ಲಾ ವಿಜ್ಞಾನಿ, ತಂತ್ರಜ್ಞರಿಗೂ, ದೇಶದ ಸವೆಯುತ್ತಿರುವ ಬೆನ್ನೆಲುಬು ರೈತವರ್ಗಕ್ಕೂ ಸದಾ ಋಣಿಯಾಗಿರುತ್ತಾ, ನಮಿಸುತ್ತಾ, ನೆನೆಯುತ್ತಾ, ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಆಶಿಸುತ್ತಾ ಉಪಸಂಹಾರಕ್ಕೆ ಮುನ್ನ,
ಕೊನೆಯಲ್ಲಿ ಗಣರಾಜ್ಯವೆಂದರೆ
ಸರಕಾರದ ಅಧಿಕಾರ ಜನರ ಹಿಡಿತದಲ್ಲಿರಬೇಕು ( The power of government is held by the people).
ಜನರು ಸೂಕ್ತ ಪ್ರತಿನಿಧಿಗಳಿಗೆ ತಮ್ಮ ಪರವಾಗಿ ದೇಶದ ಒಳಿತಿಗೆ ಆಡಳಿತ ನಡೆಸುವ ಪರಮಾಧಿಕಾರ ನೀಡಿರುತ್ತಾರೆ ( The people give power to leaders they elect to represent them and serve their interests).
ಚುನಾಯಿತ ಜನಪ್ರತಿನಿಧಿಗಳು ದೇಶದ ಸರ್ವ ಜನರ ಹಿತಕ್ಕಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ಬದ್ಧರಾಗಿರಬೇಕು (The representatives are responsible for helping all the people in the country, not just a few people).

No comments:

Post a Comment