IMPORTANT NOTICE
Sunday, 19 July 2020
CONGRATULATIONS VAISHNAVI
Thursday, 16 July 2020
CONGRATULATIONS ROHITH PARADKAR
Wednesday, 15 July 2020
ಬಹಳ ಅನುರೂಪ ನಮ್ಮ ಅನೂಪ : ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್ ಗಳಿಸಿದ ಬಹುಮುಖಿ ಪ್ರತಿಭೆ: ಗಡಿನಾಡ ಕನ್ನಡಿಗರ ಕಣ್ಮಣಿ ಈತ ಅನೂಪ್ ಸ್ವರ್ಗ
ಕಾಸರಗೋಡು, ಜು.14: ಭಾಗವತ, ಮದ್ದಳೆಗಾರ, ಚೆಂಡೆವಾದಕ. ಹೀಗೆ ಕಲಾ ವಲಯದಲ್ಲಿ ಸರ್ವಾಂಗೀಣವಾಗಿ ತೊಡಗಿಕೊಂಡು, ಸಂಘಟಕ, ವಾಗ್ಮಿ....ಮೊದಲಾಗಿಯೂ ಕಾಣಿಸಿಕೊಂಡು ಜನಮಾನಸದಲ್ಲಿ ಶಾಶ್ವತ ಸ್ಥಾನಪಡೆಯುತ್ತಿರುವ ಅನೂಪ್ ಸ್ವರ್ಗ ಈಗ ಶಿಕ್ಷಣ ಕ್ಷೇತ್ರದಲ್ಲೂ ಅತ್ಯುನ್ನತ ಸಾಧನೆ ನಡೆಸಿ ಗಡಿನಾಡು ಕಾಸರಗೋಡಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲೇ ಇವರು 8 ನೇ ರಾ ಯಂಕ್ ಪಡೆದಿದ್ದಾರೆ.
ಇವರುಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ. ಪೆರ್ಲ ಬಳಿಯ ಸ್ವರ್ಗ ಪ್ರದೇಶದ ಸುಸಂಸ್ಕೃತ ಕುಟುಂಬದಲ್ಲಿ , ಕಲಾವಿದ, ಸಂಘಟಕ ವಿವೇಕ ಸ್ವರ್ಗ ದಂಪತಿಯ ಪುತ್ರರಾಗಿ ಜನಿಸಿರುವ ಅನೂಪ್ ಎಳವೆಯಿಂದಲೇ ಕಲೆ ಮತ್ತು ಕಲಿಕೆಗಳಲ್ಲಿ ಸದಾ ಮುಂದು. ಚಿಕ್ಕ ಪ್ರಾಯದಲ್ಲೇ ಮದ್ದಳೆಚೆಂಡೆ ವಾದಕರಾಗಿ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಅನೂಪ್ ಕ್ರಮೇಣ ಭಾಗವತಿಕೆಯನ್ನೂ ಅಭ್ಯಸಿಸಿ ಈ ರಂಗದಲ್ಲಿ ಯತ್ನ ಮುಂದುವರಿಸುತ್ತಿದ್ದಾರೆ. ಈ ಹಂತದಲ್ಲಿ ಹಿರಿಯ ಸಾಧಕ ಡಾ.ಸತೀಶ ಪುಣಿಂಚತ್ತಾಯ ಪೆರ್ಲ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಪಳಗಿರುವ ಈ ಪ್ರತಿಭೆ ಅನೇಕ ಆಟಕೂಟ- ಗಾನವೈಭವಗಳಲ್ಲಿ ಹಿಮ್ಮೇಳ ವಾದಕರಾಗಿ ಮಿಂಚಿದವರು. ತೆಂಕು ತಿಟ್ಟಿನ ಬಹುತೇಕ ಹಿರಿಯ ಭಾಗವತರಿಗೆ ಸಾಥಿ ನೀಡುವಷ್ಟು ಪಳಗಿದವರು. ವಿನೂತನ ಸಾಧನೆಯಾಗಿರುವ "ಏಕವ್ಯಕ್ತಿ ಯಕ್ಷಗಾನ ಹಿಮ್ಮೇಳ"ವನ್ನು ನಡೆಸುವ ಮೂಲಕ ಈ ಕ್ಷೇತ್ರಕ್ಕೊಂದು ಹೊಸ ಬೆಳಕನ್ನು ನೀಡಿದ ಇವರು ಆ ಸಾಧನೆಯಲ್ಲೂ ಸತತ ಪ್ರಯತ್ನದಲ್ಲಿ ತೊಡಗಿಕೊಂಡವರು. ಯಕ್ಷಗಾನದ ಇಂದು ಮತ್ತು ನಾಳೆಗೆ ಭದ್ರಭವಿಷ್ಯವಾಗಿ ಬೆಳೆಯುತ್ತಿದ್ದಾರೆ.
ಯಕ್ಷಗಾನೀಯ ಸಂಘಟನೆಗಳಾದ ಯಕ್ಷ ಸ್ನೇಹಿ ಬಳಗೆ ಪೆರ್ಲ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ (ರಿ) ಕಾಸರಗೋಡು ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಅವಿಆಭಾವದ ದುಡಿಮೆ ನಡೆಸುತ್ತಿದ್ದಾರೆ. ವಿನೂತನ ಡಿಜಿಟಲ್ ಮಾಧ್ಯಮಗಳಾದ "ಯಕ್ಷಾಂತರಂಗ" ಯೂಟ್ಯೂಬ್ ಚಾನೆಲ್ ಮತ್ತು "ನ್ಯೂಸ್ ಕಾಸರಗೋಡು 247" ಆರಂಭಗೊಂಡ ಹಂತದಲ್ಲೂ ಸಕ್ರಿ ಸಮಕ್ಷ ಹೊಂದಿದ್ದಾರೆ.
ಎಲ್ಲವನ್ನೂ ಮೀರಿ ಯಕ್ಷಗಾನ ವಲಯದಲ್ಲಿ ಆಸಕ್ತಿ ಹೊಂದಿದರೆ ನಮ್ಮ ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುವರೋ ಎಂದು ಕೆಲವು ಹೆತ್ತವರು ಆತಂಕ ತಳೆಯುವುದು ಕೆಲವೆಡೆ ಕಂಡುಬರುತ್ತಿದೆ. ಅದಕ್ಕೆ ಕ್ರಿಯಾತ್ಮಕ ಉತ್ತರವಾಗಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಲ್ಲೂ ಮುನ್ನಡೆ ಸಾಧಿಸಿ, ಯಕ್ಷಾನದಲ್ಲೂ ಭರವಸೆ ನೀಡಿರುವ ನಿದರ್ಶನಗಳು ನಮ್ಮ ನಾಡಿನಲ್ಲೇ ಇದೆ. ಆ ಸಾಲಿಗೆ ಸಮರ್ಥವಾಗಿ ಅನೂಪ್ ಸೇರಿದ್ದಾರೆ. ತಮ್ಮ ಶೈಕ್ಷಣಿಕ ಸಾಧನೆ ಮೂಲಕ ಕಾಸರಗೋಡೂ ಸೇರಿದಂತೆ ಕನ್ನಡ ನಾಡಿಗೆ ಅನೂಪ್ ಸ್ವರ್ಗ ನಿಜ ಸ್ವರ್ಗ ಸುಖವನ್ನು ನೀಡಿದ್ದಾರೆ.
ಅನೂಪ್ ನ ಈ ಸಾಧನೆಯಲ್ಲಿ "ನ್ಯೂಸ್ ಕಾಸರಗೋಡು 247" ಪ್ರಿಯ ಓದುಗರೊಂದಿಗೆ ಈ ಸಂತೋಷವನ್ನು ಹಂಚಿಕೊಳ್ಳುತ್ತಿದೆ. ಅನೂಪ್ ರಿಗೆ ಪ್ರೀತಿಯ ಶುಭ ಹಾರೈಕೆಗಳು. ಅನೂಪ್ನ ಸಾಧನೆಯ ಹಿಂದಿನ ಶಕ್ತಿಯಾದ ಆತನ ಹೆತ್ತವರಿಗೆ ಸಾಷ್ಟಾಂಗ ಪ್ರಣಾಮ.
Source: http://www.newskasaragod247.com/2020/07/8.html