IMPORTANT NOTICE
Sunday, 14 November 2021
Sunday, 26 September 2021
ತೂಗು ಸೇತುವೆಯ ಹರಿಕಾರ ಗಿರೀಶ್ ಭಾರಧ್ವಾಜ್‌ಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ
ಉಡುಪಿ: ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದಿಂದ ಕೊಡಮಾಡುವ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಿರೀಶ್ ಭಾರದ್ವಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್.ಶೆಣೈ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ ಕಾರಂತರ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಳೆದ 16 ವರ್ಷಗಳಿಂದ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಲಾಗುತ್ತಿದೆ.
ಸಾಧಕರಾದ ವೀರಪ್ಪ ಮೊಯ್ಲಿ, ಎಂ.ಎನ್.ವೆಂಕಟಾಚಲಯ್ಯ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಬಿ. ಜಯಶ್ರೀ, ಮೋಹನ ಆಳ್ವ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ. ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರಾ, ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2021ನೇ ಸಾಲಿನ ಪ್ರಶಸ್ತಿಯನ್ನು ಗಿರೀಶ್ ಭಾರದ್ವಾಜ್ ಅವರಿಗೆ ನೀಡಲಾಗುತ್ತಿದೆ ಎಂದರು.
ಶಿವರಾಮ ಕಾರಂತರ ಜನ್ಮದಿನವಾದ ಅ.10 ರಂದು ಮಧ್ಯಾಹ್ನ 3 ಗಂಟೆಗೆ ಕೋಟದ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರಂತರ ಜನ್ಮ ದಿನದ ಅಂಗವಾಗಿ ಅ.1ರಿಂದ 10ರವರೆಗೆ ಸಾಂಸ್ಕೃತಿಕ- ಸಾಹಿತ್ಯಿಕ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ನಡೆಯಲಿವೆ. ಆಸಕ್ತರು ಕಾರಂತ ಥೀಂ ಪಾರ್ಕ್‌ನ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಪುಟಗಳಲ್ಲಿ ವೀಕ್ಷಿಸಬಹುದು ಎಂದರು.
ಸೇತುಬಂಧು ಗಿರೀಶ್ ಭಾರದ್ವಾಜ್ ಗ್ರಾಮೀಣ ಪ್ರದೇಶಗಳಲ್ಲಿ 130 ತೂಗು ಸೇತುವೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ ಎಂದರು.
Sunday, 12 September 2021
ನಮ್ಮೂರಿನ ಸಂಗೀತ ಕಲಾ ಪ್ರತಿಭೆ ಅಶ್ವಿನಿ ಕೋಳಿಕ್ಕಜೆ
ಮೈಸೂರು ವಿಶ್ವವಿದ್ಯಾಲಯದ 101ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಇದೇ ಸೆಪ್ಟೆಂಬರ್ 7 ರಂದು ನಡೆದ ಸಂಗೀತ ಪದವಿ ಪ್ರದಾನ ಸಮಾರಂಭದಲ್ಲಿ(B- music 2017-2020)ವಿಶ್ವವಿದ್ಯಾಲಯಕ್ಕೇ ಪ್ರಥಮ ಶ್ರೇಣಿಯನ್ನು ಕೇರಳ ರಾಜ್ಯದ ಕಾಸರಗೋಡಿನ ಮುಳ್ಳೇರಿಯ ಸಮೀಪದ ಕುಮಾರಿ ಅಶ್ವಿನಿ ಕೋಳಿಕ್ಕಜೆ ಅವರಿಗೆ ಕೊಡಮಾಡಲಾಯಿತು.ಈ ಸಮಯದಲ್ಲಿ ಇವರು ಬಾಚಿಕ್ಕೊಂಡ ಚಿನ್ನದ ಪದಕಗಳು 6 ಮತ್ತು ನಗದು ಪುರಸ್ಕಾರಗಳು 3.
ಅಶ್ವಿನಿ ಕೋಳಿಕ್ಕಜೆ ಅವರು ಈ ಮೊದಲು ಪ್ರಸಿದ್ಧ ಆಕಾಶವಾಣಿ ಕಲಾವಿದರಾಗಿದ್ದ(1960-1980 ರ ಅವಧಿಯಲ್ಲಿ)ದಿವಂಗತ ಕೋಳಿಕ್ಕಜೆ ವಿಷ್ಣು ಭಟ್ ಅವರ ಮೊಮ್ಮಗಳು,ಸಂಗೀತ ಕಲಾವಿದ ಹಾಗೂ ಶಿಕ್ಷಕ ಶೀಯುತ ಬಾಲಸುಬ್ರಹ್ಮಣ್ಯ ಭಟ್ ಮತ್ತು ಶೀಮತಿ ಶುಭಾ ದಂಪತಿಗಳ ಸುಪುತ್ರಿ.
ಅಶ್ವಿನಿ ಯಲ್ಲಿನ ರಕ್ತಗತ ಸಂಗೀತ ಕಲಾ ಜಾಗೃತಿ ಅವಳ 4ನೆಯ ವಯಸ್ಸಿನಲ್ಲಿ,ಸಾರ್ವಜನಿಕ ಶಾರದೊತ್ಸವದ ಸಂದರ್ಭದಲ್ಲಿ ಮಕ್ಕಳು ಹಾಡಿದ ದೇವರ ಕೀರ್ತನೆಗಳನ್ನು ತಾನೂ ಹಾಡಬೇಕೆಂಬ ಹಂಬಲದೊಂದಿಗೆ ಚಿಗುರೊಡೆಯಿತು.ಇವಳ ಸುಪ್ತ ಪ್ರತಿಭೆಗೆ ತಂದೆಯವರಾದ ಬಾಲಸುಬ್ರಹ್ಮಣ್ಯ ಭಟ್ ಅವರು ನೀರೆರೆಯಲು ಶುರುವಿಟ್ಟರು. ಇದರಿಂದಾಗಿ ಪ್ರಪ್ರಥಮವಾಗಿ ನಾಲ್ಕನೇ ತರಗತಿಯಲ್ಲಿದ್ದಾಗಲೇ ಪ್ರಸಿದ್ಧ ಮಲಯಾಳಂ ಸಂಗೀತ ನಿರ್ದೇಶಕರಾದ ಸುದರ್ಶನ್ ಪಯ್ಯನ್ನೂರ್ ಅವರ "ಮತ್ತಪ್ಪ ಪ್ರಸಾದಂ" ಎಂಬ ಧ್ವನಿ ಸುರುಳಿಯಲ್ಲಿ ಈಕೆಯ ಕಂಠ ಸಿರಿಯು ಅನಾವರಣಗೊಂಡಿತು.ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಸ್ವತಃ ತಂದೆಯವರಿಂದ ಕಲಿತು ನಂತರ ಅದನ್ನು KOVILADI R KALA ಮೈಸೂರು ಇಲ್ಲಿ ಮುಂದುವೆಸಿದಳು.ಡಾಕ್ಟರ್ ಶಂಕರ್ ರಾಜ್ ಅವರ ಅಧ್ಯಕ್ಷತೆಯಲ್ಲಿ ಹುಟ್ಟು ಹಾಕಿದ "ರಾಗಸುಧಾರಸ"ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೀಯುತ ಗೋವಿಂದ ಭಟ್ ಕೊಚ್ಚಿ,ಶ್ರೀಯುತ ಬಾಲರಾಜ್ ಬೆದ್ರಡಿ,ಶ್ರೀಯುತ ಶ್ರೀಧರ ಭಟ್ ಬಡ್ಕೇಕರೆ,ಶ್ರೀಯುತ ಪ್ರಭಾಕರ ಕುಂಜಾರು ಮೊದಲಾದವರ ಶ್ರಮದಿಂದ ಮುಳ್ಳೆರಿಯ ಶ್ರೀ ಗಣೇಶ ಕಲಾಮಂದಿರದಲ್ಲಿ ಹಲವು ವರ್ಷಗಳಿಂದ ನಡೆಸಿದ ಸಂಗೀತ ಶಿಬಿರದಿಂದ ಲಾಗಿ ಕಲೈ ಮಾಮಣಿ ಶ್ರೀಯುತ ವಿಠ್ಠಲ್ ಮೂರ್ತಿ ಚೆನ್ನೈ ಇವರ ಮಾರ್ಗದರ್ಶನ ಅಶ್ವಿನಿ ಗೆ ಸಂಗೀತದ ಆಳ ಮತ್ತು ಹಿರಿಮೆಯ ಅರಿವಿಗೆ ಒಂದು ಕಾರಣವಾಯಿತು. ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ,ಪದವಿಪೂರ್ವ ಶಿಕ್ಷಣವನ್ನು ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಅಗಲ್ಪಾಡಿ ಹಾಗೂ ಸಂಗೀತ ಪದವಿಯನ್ನು(B-music) ಮಾನಸಗಂಗೋತ್ರಿ ಮೈಸೂರು ಇಲ್ಲಿ ಪೂರೈಸಿರುತ್ತಾಳೆ.
ಅಶ್ವಿನಿ ಯ ಈ ವರೆಗಿನ ಸಾಧನೆಗಳನ್ನು ಪಟ್ಟಿ ಮಾಡಿದಲ್ಲಿ
೧. 100 ಕ್ಕಿಂತಲೂ ಹೆಚ್ಚಿನ ಕಲಾಮೇಳ ಗಳಲ್ಲಿ ಪ್ರಥಮ ಶ್ರೇಣಿ.
೨. ಶ್ರೀ ಶಂಕರ ಸೂಪರ್ ಸಿಂಗರ್ ವಿನ್ನರ್ 2020 ಇದರಲ್ಲಿ ಪ್ರಥಮ ಶ್ರೇಣಿ ಯೊಂದಿಗೆ ಒಂದು ಲಕ್ಷ ರೂ ಗಳ ನಗದು ಪುರಸ್ಕಾರ.
೩. ಅಖಿಲ ಭಾರತ ಸಂಗೀತ ವಿಶ್ವ ವಿದ್ಯಾಲಯಗಳ ಸಂಗೀತ ಸ್ಪರ್ಧೆಯಲ್ಲಿ ಸತತ 2 ಬಾರಿ (2019ಮತ್ತು2020) ಪ್ರಥಮ ಸ್ಥಾನ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.
೪. ಪ್ರಕೃತ ಅಶ್ವಿನಿ ಮಾನಸಗಂಗೋತ್ರಿ ಮೈಸೂರು ಇಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು(M-music) ಮುಂದುವರಿಸುತ್ತಿದ್ದಾರೆ.
೫. ಪ್ರಸ್ತುತ ಈಕೆ ಅನಿವಾಸಿ ಭಾರತೀಯರಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.
೬. ರಜಾದಿನಗಳಲ್ಲಿ ಈಕೆ ಕೋಳಿಕ್ಕಜೆ ಯ ಸ್ವಾವಲಂಬನಾ ತಂಡ "ಶ್ರಮದಾನ ಕೋಳಿಕ್ಕಜೆ" ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ,ಶ್ರೀ ಅನ್ನಪೂರ್ಣೆಶ್ವರಿ ಹೈಯರ್ ಸೆಕೆಂಡರಿ ಶಾಲೆ ಇವುಗಳ ಆಡಳಿತ ಹಾಗೂ ಬೋಧಕ ವರ್ಗ ಹಾಗೂ ಊರ - ಪರವೂರ ಸಂಗೀತ ಅಭಿಮಾನಿಗಳು ಈಕೆಯ ಸಾಧನೆಗೆ ಹರ್ಷವನ್ನುವಕ್ತಪಡಿಸಿರುತ್ತಾರೆ.
✍️Dr ಕಾರ್ತಿಕ್ ಕೋಳಿಕ್ಕಜೆ.
Saturday, 28 August 2021
ಹರಿತಾಲಿಕಾ ಪೂಜಾ ಪುಸ್ತಕಗಳು ಸೆಪ್ಟಂಬರ್ 1 ರಿಂದ ಲಭ್ಯವಿವೆ
ಹರಿತಾಲಿಕಾ ಪೂಜಾ ಪುಸ್ತಕಗಳು ಸೆಪ್ಟಂಬರ್ 1 ರಿಂದ ಹಲವೆಡೆಗಳಲ್ಲಿ ಲಭ್ಯವಿವೆ.
ಪ್ರತಿಗಳಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು
ಪುಸ್ತಕದ ಬೆಲೆ: ರೂಪಾಯಿ 100.00 ಮಾತ್ರ
ಪಡ್ರೆ - ಕಾಟುಕುಕ್ಕೆ ವಲಯ
1) ಶ್ರೀನಿವಾಸ ಪ್ರಸಾದ , ಶಿರಂತಡ್ಕ
Phone: 9447653382, 8848863159
2)ಗುರುಕುಲ ಗ್ರಾಫಿಕ್ಸ್, ಪೆರ್ಲ
Phone: 9447211239
3)ಶ್ರೀಧರ ಭಟ್, ಸಜಂಗದ್ದೆ
Phone: 9447653810
9048371938
ಅಗಲ್ಪಾಡಿ ವಲಯ
1)ಅಗಲ್ಪಾಡಿ ದೇವಸ್ಥಾನ
Phone: 8547084250
8848716862
2) ದುರ್ಗಾ ಸ್ಟೋರ್, ಮುಳ್ಳೇರಿಯ
Phone: 9745386864
ಬಾಯಾರು ವಲಯ
1) ಸೂರ್ಯನಾರಾಯಣ ಭಟ್, ಆವಳ ಮಠ
Phone: 8547264006
9048613006
ನಿಡ್ಪಳ್ಳಿ ವಲಯ
1)ಬಾಲಕೃಷ್ಣ ಭಟ್, ಖಂಡೇರಿ-ಕಕ್ಕೂರು
Phone: 9447653384
9663353441
2) ವಿಷ್ಣು ಪ್ರಸಾದ್, ಪಳ್ಳು
Phone: 7259858030
ಮಂಗಳೂರು ವಲಯ
1) ವೇಣು ಶರ್ಮ, ಉಪ್ಪಂಗಳ - ಮಂಗಳೂರು
Phone:9844123232
2)ರಾಧಾಕೃಷ್ಣ ದೇವಸ್ಥಾನ, ಮಂಗಳೂರು
Phone: 9845083573
ಮೈಸೂರು ವಲಯ
1) ಸತ್ಯನಾರಾಯಣ ಭಟ್, ಆನೆಮಜಲು - ಮೈಸೂರು
Phone: 9480191610
ಬೆಂಗಳೂರು ವಲಯ
1) ನಾಗರಾಜ್, ಉಪ್ಪಂಗಳ
Phone: 9535000365
2) ಪಾಂಡುರಂಗ ಗುರ್ಜರ್
Phone: 93422 81752
ಬೆಳ್ತಂಗಡಿ - ಉಜಿರೆ ವಲಯ
1)ನಾಗೇಶ್ ಪಂಜರಿಕೆ - ಉಜಿರೆ
Phone: 9731188200
ಸುಳ್ಯ ವಲಯ
ಶ್ರೀ ಗಣೇಶ್ ಹೋಟೆಲ್ ಜಾಲಸೂರು 6363151607
Tuesday, 24 August 2021
Sunday, 22 August 2021
ಆ.22- ಹರಿತಾಲಿಕಾ ಪೂಜಾ ಪುಸ್ತಕ ಬಿಡುಗಡೆ
ಬದಿಯಡ್ಕ: ಶ್ರೀನಿವಾಸ ಪ್ರಸಾದ ಶಿರಂತಡ್ಕ- ನೆಲ್ಲಿಕುಂಜೆ ಅವರು ಸಂಗ್ರಹಿಸಿದ ಹರಿತಾಲಿಕಾ (ಗೌರೀ ಪೂಜೆ) ಪೂಜಾ ಪುಸ್ತಕದ ಬಿಡುಗಡೆ ಸಮಾರಂಭ ಭಾನುವಾರ (ಆ.22) ಸಂಜೆ 5 ಗಂಟೆಗೆ ಗೂಗಲ್ ಮೀಟರ್ ವೇದಿಕೆಯಲ್ಲಿ ನಡೆಯಲಿದೆ.
ಬೆಂಗಳೂರು ನಿವಾಸಿ ನಾಗರಾಜ ಉಪ್ಪಂಗಳ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಅಗಲ್ಪಾಡಿಯ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕಾಯರ್ಗದ್ದೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀಮತಿ ವಜಯಾ ಭಟ್ ಮಠದಮೂಲೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಅಶೋಕ ಮುಂಡಕಾನ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಡಾ| ಬಳ್ಳಪದವು ಮಾಧವ ಉಪಾಧ್ಯಾಯರು, ಪುರೋಹಿತರಾದ ಬೇಂಗ್ರೋಡ ಮಾಧವ ಭಟ್, ಶ್ರೀಧರ ಭಟ್ ಸಜಂಗದ್ದೆ- ಪಡ್ರೆ, ಸುಬ್ರಹ್ಮಣ್ಯ ಭಟ್ ಎರ್ಪಲೆ- ಗುಂಡ್ಯಡ್ಕ, ಸತ್ಯಕೃಷ್ಣ ಭಟ್, ರಾಧಾಕೃಷ್ಣ ದೇವಸ್ಥಾನ ಮಂಗಳೂರು, ವೆಂಕಟೇಶ ಭಟ್ ಪೈರುಪುಣಿ ಅವರು ಶುಭಾಶಂಸನೆ ಮಾಡಲಿದ್ದಾರೆ.
ಶ್ರೀಮತಿ ಸುಗುಣಾ ಅವರಿಂದ ಪ್ರಾರ್ಥನೆ, ನಳಿನಿ ಸೈಪಂಗಲ್ಲು ಅವರಿಂದ ಸ್ವಾಗತ, ಜಯಶ್ರೀ ಭಟ್, ಮೈಕಾನ ಅವರು ಧನ್ಯವಾದ ಸಮರ್ಪಿಸಲಿದ್ದಾರೆ. ರವಿ ಸಜಂಗದ್ದೆ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಗೂಗಲ್ ಮೀಟ್ ಲಿಂಕ್: https://meet.google.com/usq-rziq-cpr
(ಉಪಯುಕ್ತ ನ್ಯೂಸ್) :
https://local.upayuktha.com/2021/08/Harithalika-pooja-book-release-on-sunday.html?m=1Saturday, 21 August 2021
ಪುಸ್ತಕ ಬಿಡುಗಡೆ - gowree pooje on 22nd Aug 2021 on google meet
Thursday, 15 July 2021
Congratulations Inchara SB
ಕರ್ನಾಟಕ ಗಮಕ ಕಲಾ ಪರಿಷತ್ ಇವರ ವಾಚನ ಪರೀಕ್ಷೆ ಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಇಂಚರ ಎಸ್ ಬಿ, ದ್ವಿತೀಯ ರಾಂಕ್ ಪಡೆದ ಕವನ ಎ ಸ್ ಬಿ, ಕರಾಡ ಸಮಾಜದ ಬಾಲ ಕಲಾವಿದರು ಎಂದು ತಿಳಿಸಲು ಹರ್ಷ ಆಗುತ್ತಿದೆ
ಶುಭಾಶಯಗಳು 💐💐
Monday, 8 February 2021
Monday, 25 January 2021
ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಶ್ರೀದೇವಿ ಕೆ
ಉಪ್ಪಳ: ಕರ್ನಾಟಕ ಫ್ರೌಢಶಿಕ್ಷಣ ಮಂಡಳಿಯು 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಬಾಯಾರಿನ ಶ್ರೀದೇವಿ ಕೆ. ಶೇ.86 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುವಳು. ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಅವರ ನಾಟ್ಯಾಲಯ ಪುತ್ತೂರು ಸಂಸ್ಥೆಯ ಬಾಯಾರು ಶಾಖಾ ವಿದ್ಯಾರ್ಥಿನಿಯಾಗಿದ್ದು, ಸಜಂಕಿಲ ಶ್ರೀದುರ್ಗಾಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲಾ ಸಿಬ್ಬಂದಿ ಶ್ರೀಧರ ಕೆ.ಆವಳ ಕೆದುಕೋಡಿ-ಶ್ರೀವಿದ್ಯಾ ಎಡಮಲೆ ದಂಪತಿಯ ಸುಪುತ್ರಿ. ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪ್ರಥಮ ಪದವಿಪೂರ್ವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.
ಪಂಚಕರ್ಮ ವಿಭಾಗದಲ್ಲಿ ಪಡ್ರೆಯ ಡಾ.ರಮ್ಯಶ್ರೀ ಗೆ ಪ್ರಥಮ ರಾಂಕ್
Thursday, 7 January 2021
ಕಾಸರಗೋಡಿನ ಅಶ್ವಿನಿ ಕೋಳಿಕ್ಕಜೆ- ಶ್ರೀ ಶಂಕರ ಸೂಪರ್ ಸಿಂಗರ್ ರಿಯಾಲಿಟಿ ಶೋ ದ ವಿನ್ನರ್
ಮುಳ್ಳೇರಿಯಾ: ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ಕೋಳಿಕ್ಕಜೆಯ ಅಶ್ವಿನಿ ಕೆ ಇವರು ಶ್ರೀಶಂಕರ ಟಿವಿಯ ಸೂಪರ್ ಸಿಂಗರ್ ರಿಯಾಲಿಟಿ ಶೋದ ಸೀಸನ್ 3ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಕೋಳಿಕ್ಕಜೆಯ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಶುಭಾ ದಂಪತಿಗಳ ಪುತ್ರಿ ಅಶ್ವಿನಿ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 12 ವರ್ಷ ವ್ಯಾಸಂಗ ನಡೆಸಿದ ಬಳಿಕ 2 ವರ್ಷ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಬಳಿಕ ಇದೀಗ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಪದವಿ ಪರೀಕ್ಷೆ ಮುಗಿಸಿದ್ದಾರೆ.
ಸಂಗೀತದಲ್ಲಿ ಈಕೆಗೆ ತಂದೆಯೇ ಮೊದಲ ಗುರು. ಪ್ರಾಥಮಿಕ ಶಿಕ್ಷಣವನ್ನು ಅವರಿಂದಲೇ ಪಡೆದು ಮೈಸೂರಿನ ಖ್ಯಾತ ಕಲಾವಿದೆ ವಿದುಷಿ ಶ್ರೀಮತಿ ಕೋವಿಲಡಿ ಕಲಾ ಇವರ ಶಿಷ್ಯೆಯಾಗಿ ಈಗ ಸಂಗೀತ ಶಿಕ್ಷಣ ಮುಂದುವರಿಸುತ್ತಿದ್ದಾರೆ.
‘ರಾಗಸುಧಾರಸ’ ಕಾಸರಗೋಡು ಸಂಸ್ಥೆಯವರು ಹಲವು ಬಾರಿ ಏರ್ಪಡಿಸಿದ್ದ ಸಂಗೀತ ಶಿಬಿರಗಳಲ್ಲಿ ಭಾಗವಹಿಸಿ ವಿದ್ವಾನ್ ಶ್ರೀ ವಿಠಲ ರಾಮ ಮೂರ್ತಿ, ಚೆನ್ನೈ ಇವರ ಮಾರ್ಗದರ್ಶನ ಪಡೆದಿದ್ದಾರೆ.
ಶ್ರೀಶಂಕರ ಟಿವಿಯ ಸೂಪರ್ ಸಿಂಗರ್ ಸೀಸನ್ 3 ಯಲ್ಲಿ ಡಿ.12ರಂದು ಅಶ್ವಿನಿ ಅವರ ಫೈನಲ್ ಕಾರ್ಯಕ್ರಮ ಪ್ರಸಾರವಾಯಿತು. 7 ಸ್ಪರ್ಧಾಳುಗಳು ಫೈನಲ್‌ನಲ್ಲಿ ಸ್ಪರ್ಧಿಸಿದ್ದರು.
3 ಹಂತಗಳನ್ನು ದಾಟಿ ಫೈನಲ್‌ಗೆ ತಲುಪಿದ ಅಶ್ವಿನಿ ಕೆ ಸೀಮಹೇಂದ್ರ ಮಧ್ಯಮ ರಾಗದ ‘ಕಾಮಾಕ್ಷಿ’ ಎಂಬ ದೀಕ್ಷಿತರ ಕೃತಿಯನ್ನು ಆಯ್ಕೆ ಮಾಡಿದ್ದರು. ಪ್ರತಿದಿನ 3 ಗಂಟೆಗಳ ಕಾಲ ನಿರಂತರ ಸಾಧನೆ ಮಾಡಿದ ಈ ಕೃತಿಯನ್ನು ತೀರ್ಪುಗಾರರಾದ ವಿದ್ವಾನ್ ಶ್ರೀ ಓ.ಎಸ್ ತ್ಯಾಗರಾಜನ್, ಶ್ರೀ ಪಿ.ವಿ ಪ್ರಸನ್ನ, ಶ್ರೀಮತಿ ಮಹತಿ ಎಸ್, ಶ್ರೀ ಮಹೇಶ್ ವಿನಾಯಕರಾಂ ಹಾಗೂ ಶ್ರೀಮತಿ ಶಾಂತಿ ಮುಂತಾದ ಗಣ್ಯರು ಅಶ್ವಿನಿಯ ಸಾಧನೆ ಹಾಗೂ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(ಉಪಯುಕ್ತ ನ್ಯೂಸ್)