Sunday, 2 October 2022

ಅಗಲ್ಪಾಡಿ ದೇವಸ್ಥಾನದಲ್ಲಿ ಧಾರ್ಮಿಕ ಚಿಂತನಾ ಸತ್ರ

ವಿಷಯ: ಅಂತ್ಯೇಷ್ಟಿ (ಆಶ್ವಲಾಯನ ಸೂತ್ರಾನುಸಾರಿ)

ಬದಿಯಡ್ಕ: ಬೆಂಗಳೂರಿನ ಜನಸೇವಾ ಚಾರಿಟೆಬಲ್ ಅಸೋಸಿಯೇಷನ್ (ರಿ.) ಆಶ್ರಯದಲ್ಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ, ವೇದ ಮಾತಾ ಟ್ರಸ್ಟ್ (ರಿ.) ಅಗಲ್ಪಾಡಿ, ಕರಾಡ ವೈದಿಕ ಸಭಾ ಅಗಲ್ಪಾಡಿ ಮತ್ತು ಕರಾಡ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಚಿಂತನಾ ಸತ್ರವನ್ನು ಆಯೋಜಿಸಲು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.


ಮುಂದಿನ ಜನವರಿ 8ರಂದು (08-01-2023) ಭಾನುವಾರ ಬೆಳಗ್ಗೆ 9:00ರಿಂದ ಸಂಜೆ 5:00ರ ವರೆಗೆ ಈ ಚಿಂತನಾ ಸತ್ರವನ್ನು ಆಯೋಜಿಸಲಾಗುತ್ತದೆ. ಸ್ಥಳ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ. ಪ್ರಧಾನ ವಿಷಯ- ಅಂತ್ಯೇಷ್ಟಿ (ಆಶ್ವಲಾಯನ ಸೂತ್ರಾನುಸಾರಿ).


ಧರ್ಮ-ಕರ್ಮಗಳ ಕುರಿತು ಅಪಾರ ಜ್ಞಾನ ಹೊಂದಿರುವ ಶ್ರೇಷ್ಠ ವೈದಿಕ ವಿದ್ವಾಂಸರಾದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ, ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು, ಡಾ| ಸತ್ಯನಾರಾಯಣ ಆಚಾರ್ಯ, ಬೆಂಗಳೂರು, ಬೇಂಗ್ರೋಡಿ ಮಾಧವ ಭಟ್, ಬೆಳ್ಳೆಚ್ಚಾಲು ಬಾಲಸುಬ್ರಹ್ಮಣ್ಯ ಭಟ್ ಮತ್ತು ಬೋಳೂರು ವಿದ್ಯಾಶಂಕರ ಭಟ್ ಈ ಚಿಂತನಾ ಸತ್ರದಲ್ಲಿ ಭಾಗವಹಿಸಲಿದ್ದಾರೆ.


ಮಂಡನೀಯ ವಿಚಾರಗಳು:

1. ಔರ್ಧ್ವದೇಹಿಕ ಕ್ರಿಯಾಭಾಗಗಳ ಪ್ರಸ್ತುತತೆ.

2. ಮರಣಕಾಲದ ಕರ್ತವ್ಯಗಳು.

3. ಅಗ್ನಿ ಸಂಸ್ಕಾರ, ದಶಾಹಕೃತ್ಯಗಳು, ಧರ್ಮೋದಕ, ಏಕೋದ್ದಿಷ್ಟಾದಿ ವೈಕುಂಠ ಸಮಾರಾಧನಾ ಪರ್ಯಂತ ಕಾರ್ಯಗಳು ಮತ್ತು ಆಚರಣೆ. 

4. ಮಾಸಿಕ - ಸಾಂವತ್ಸರಿಕ ಶ್ರಾದ್ಧ ಚಿಂತನೆ.

5. ದೇಶಾಚಾರ - ಕಾಲಾಚಾರಗಳ ವಿಮರ್ಶೆ


ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:


ಸೂರ್ಯನಾರಾಯಣ ಭಟ್ ಕಶೆಕೋಡಿ (ಕಲಾಶ್ರಯ) - 8105437183


ನಾಗರಾಜ ಉಪ್ಪಂಗಳ, ಬೆಂಗಳೂರು (ಅಧ್ಯಕ್ಷರು, ಜನಸೇವಾ ಚಾರಿಟೇಬಲ್ ಅಸೋಸಿಯೇಷನ್) - 9535000365


https://www.upayuktha.com/2022/09/Meeting-of-A-religious-think-tank-at-Agalpady-Temple-on-January-2023.html

KARHADA SAMMILANA 2022 - INVITATION







 

KARHADA SAMMILANA 2022


 

Congratulations Dr Radhakrishna B


 

Saturday, 11 June 2022

ಶೃಂಗೇರಿ ಜಗದ್ಗುರುಗಳ ದರ್ಶನ 12/6/2022 ಬೆಂಗಳೂರು ಶಂಕರ ಮಠ

 ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವಿನಂತಿ ಮೇರೆಗೆ ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ದಿನಾಂಕ 12ನೇ ಜೂನ್ ಭಾನುವಾರ ಬೆಳಗ್ಗೆ 9.00ಘಂಟೆಗೆ ಪಾದಪೂಜೆಗೆ ಸಮ್ಮತಿ ನೀಡಿದ್ದಾರೆ.


ಸ್ಥಳ : ಶ್ರೀ ಶಂಕರ ಮಠ ಪರಿಸರ, ಬಸವನ ಗುಡಿ, ಬೆಂಗಳೂರು


ಕಾರ್ಯಕ್ರಮ ಈ ರೀತಿ ಇದೆ.

9.00ಘಂಟೆಯಿಂದ ಪಾದಪೂಜೆ

11ಘಂಟೆಗಯಿಂದ ಗುರುಗಳ ಆಶೀರ್ವಚನ

12ಘಂಟೆಯಿಂದ ಪ್ರಸಾದ ಭೋಜನ.
ಪಾದಪೂಜೆ ₹1000 /   ಭಿಕ್ಷಾವಂದನೆ ₹500 / ವಿಶೇಷ ಪಾದಪೂಜೆ ₹2000

ಪಾದಪೂಜೆ ಮಾಡಿಸುವ ಭಕ್ತಾದಿಗಳು ತಮ್ಮ ಹೆಸರು,ಹಣ, mobile ನಂಬರ್ ಅನ್ನು 11ನೇ ತಾರೀಕು 10ಘಂಟೆಯ ಒಳಗೆ ಶ್ರೀ ಅಶೋಕ ಮುಂಡಕಾನ -98450-95460ತಲುಪಿಸಿದರೆ ಮರುದಿನ 9ಘಂಟೆಗೆ ಬಂದ ಕೂಡಲೇ ರಶೀದಿ ಪಡೆದು ಸಮಯದ ಉಳಿತಾಯ ಮಾಡಬಹುದು.

ಕರಾಡ ಬಂಧುಗಳು ನೂರಕ್ಕೆ ಕಡಿಮೆ ಆಗದಂತೆ ಪಾದಪೂಜೆ ಮಾಡಿಸಿ ಶಾರದಾಂಬೆಯ, ಶ್ರೀ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಪರವಾಗಿ ಮನವಿ.

ವಿಶೇಷ ಸೂಚನೆ :
1. ಶ್ರೀ ಮಠಕ್ಕೆ ಬರುವಾಗ ಫಲತಾಂಬೂಲದೊಂದಿಗೆ ಬರುವುದು.
2. ಮಠದಲ್ಲಿ ವಸ್ತ್ರಸಂಹಿತೆ ಪುರುಷರು ಪಂಚೆ,ಶಲ್ಯ ಮಹಿಳೆಯರು ಸೀರೆ