Wednesday, 27 June 2018
Tuesday, 29 May 2018
ಶ್ರೀ ಕ್ಷೇತ್ರ ಅಗಲ್ಪಾಡಿ - ಶತಮಾನದ ಸಂಭ್ರಮ 2021- ವಿವಿಧ ಅಭಿವೃದ್ಧಿ ಕಾರ್ಯಗಳ ವಿವರ
ಆತ್ಮೀಯ ಬಂಧುಗಳೇ..
ನಿಮಗೆಲ್ಲ ತಿಳಿದಂತೆ ಶ್ರೀ ಕ್ಷೇತ್ರ ಶತಮಾನದ ಸಂಭ್ರಮ ಇನ್ನೇನು ಮೂರು ವರ್ಷಗಳಲ್ಲಿ ಆಚರಿಸಲಿದೆ, ಈ ಸಂಭ್ರಮಾಚರಣೆಗೆ ಪೂರ್ವ ಭಾವಿಯಾಗಿ ಹಲವು ಯೋಜನೆಗಳನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಸೇವಾ ಸಂಘದ ,ಭಗವದ್ಭಕ್ತರಾದ ನಿಮ್ಮ ಹಾಗೂ ನಿಮ್ಮ ಕುಟುಂಬದ ಸಹಕಾರದೊಂದಿಗೆ ಕೈಗೆತ್ತಿಕೊಂಡಿದೆ. ಹಲವು ಯೋಜನೆಗಳಲ್ಲಿ ಕೆಲವನ್ನು ಈ ಕೆಳಗೆ ತಮ್ಮ ಅವಗಾಹನೆಗೆ ಸೂಚಿಸುತ್ತಿದ್ದೇವೆ.

೧. ನೂತನ ಧ್ವಜ ಸ್ತoಬ : ಬೇಕಾದ ಮರವನ್ನು ಈಗಾಗಲೇ ಕ್ಷೇತ್ರದಲ್ಲಿ ಓರ್ವ ಭಕ್ತರ ದಾನದೊಂದಿಗೆ ತರಲಾಗಿದೆ . ಇನ್ನು ತೈಲಾಧಿವಾಸ ಹಾಗೂ ಮುಂದಿನ ಪ್ರಕ್ರಿಯೆಗಳು ಆರಂಭವಾಗಬೇಕಾಗಿವೆ
೨. ಜನರೇಟರ್ ಮತ್ತು ವೈರಿಂಗ್ : ಸುಮಾರು ಆರು ಲಕ್ಷದ ವೆಚ್ಚದಲ್ಲಿ ಈ ಯೋಜನೆ ಸಂಪೂರ್ಣಗೊಂಡಿದೆ
೩. ಗೋ ಶಾಲೆ : ಸುಮಾರು ಎಂಟು ಲಕ್ಷದ ಈ ಯೋಜನೆಗೆ ಈಗಾಗಲೇ ಒಂದು ಕುಟುಂಬ ತಮ್ಮ ಸಮ್ಮತಿ ಸೂಚಿಸಿದೆ
೪. ಸೇವಾ ಕೌಂಟರ್ ನವೀಕರಣ : ಸುಮಾರು ಮೂವತ್ತೈದು ಸಾವಿರ ವೆಚ್ಚದ್ದ ಈ ಯೋಜನೆಗೆ ಓರ್ವ ದಾನಿಗಳು ಈಗಾಗಲೇ ತಮ್ಮ ಉದಾರ ದಾನ ಕಳುಹಿಸಿ ಕೊಟ್ಟಿದ್ದಾರೆ
೫. ದೇವಸ್ಥಾನದ ಮುಂಭಾಗದ ಮೆಟ್ಟಿಲುಗಳ ಎರಡೂ ಕಡೆ ಹುಲ್ಲುಹಾಸುವ ಯೋಜನೆ : ಸುಮಾರು ಇಪ್ಪತ್ತು ಸಾವಿರ ಖರ್ಚಿನ ಯೋಜನೆಗೆ ಓರ್ವ ಭಕ್ತರು ಸ್ಥಳದಲ್ಲೇ ತಮ್ಮ ಸಹಕಾರ ಕೊಟ್ಟಿದ್ದಾರೆ
೬. ಫೇವರ್ ಬ್ಲಾಕ್ ಹಾಸುವ ಕೆಲಸ : ವಾಹನಗಳ ಸುಗಮ ಸಂಚಾರ ಹಾಗೂ ಯಾತ್ರಿಕರ ಸೌಕರ್ಯಕ್ಕಾಗಿ ಸುಮಾರು ನಾಲ್ಕು ಲಕ್ಷದ ಯೋಜನೆ ಪ್ರಗತಿಯಲ್ಲಿದೆ
೭. ೧೪೦ ಸೆಂಟ್ಸ್ ಜಾಗ ಖರೀದಿ : ವಾಹನ ಪಾರ್ಕಿಂಗ್ ಮತ್ತು ಇತರ ಆವಶ್ಯಕತೆಗಳ ದೃಷ್ಟಿಯಿಂದ ಶ್ರೀ ಕ್ಷೇತ್ರಕ್ಕೆ ಸಮೀಪ ಇರುವ ಜಾಗ ಖರೀದಿಗೆ ಮುಂಗಡ ನೀಡಿದ್ದೇವೆ - ಒಟ್ಟು ಖರ್ಚು ನಲ್ವತ್ತು ಲಕ್ಷ
ಇನ್ನುಳಿದ ಯೋಜನೆಗಳ ವಿವರ ಸಂಬಂಧಿತ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಂಡ ಬಳಿಕ ನಿಮ್ಮ ಮುಂದೆ ಇಡುವ ಭರವಸೆ ನಮ್ಮದು
ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಮುಂದಿನ ಮೂರು ವರ್ಷಗಳ ಒಳಗಾಗಿ ಆಗಬೇಕಿದೆ.
ನಿಮ್ಮಲ್ಲಿ ನಮ್ಮ ಅರಿಕೆ:
ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ, ನಡೆಯುವ ಯೋಜನೆಗಳ ವೀಕ್ಷಣೆ , ತಮ್ಮ ಸಲಹೆಗಳನ್ನು ನಮ್ಮೊಂದಿಗೆ ಹಂಚಿಕ್ಕೊಂದು , ತಮ್ಮ ಸಹಕಾರ ಯಾವ ರೀತಿಯಲ್ಲಿ ಕೊಡುತ್ತೀರಿ ಎಂದು ತಿಳಿಸಿ
ಇಂತಿ
ಆಡಳಿತ ಮಂಡಳಿ ಹಾಗೂ ಸೇವಾ ಸಂಘದ ಪದಾಧಿಕಾರಿಗಳ ಪರವಾಗಿ
Subscribe to:
Posts (Atom)