Wednesday, 27 June 2018

ಸಂಭಾಷಣೆ
ಗೆಳತಿ....
ಹೊತ್ತಲ್ಲದ ಹೊತ್ತಲ್ಲಿ ಹತ್ತಿರ ಬಂದು
ಗೊತ್ತಿಲ್ಲದ ಗುಟ್ಟು ಗೊತ್ತಾಗದಂತೆ ಕಿವಿಯಲ್ಲಿ ಪಿಸು ನುಡಿದದ್ದು ನೆನಪಿದೆ....    ಮಸ್ತಕದೊಳಗೆ ಹೊಕ್ಕಂತಿತ್ತು...
ಗುಟ್ಟು ಗೊತ್ತಾಗಲಿಲ್ಲ.....

ಗೆಳೆಯ....
ಏಕಾಂತದಲ್ಲಿ ಕೊಂಚ ದೂರ ಸರಿದು...
ನಿನ್ನ ಮನದೊಳಗೂ ಪ್ರತಿಧ್ವನಿಸುವಂತೆ.....
ಕೂಗಿ ಹೇಳಿದ್ದೆ ಆ ಗುಟ್ಟು...
ಆ ಕ್ಷಣ ಸರಿಯಾಗಿಯೇ ಇತ್ತು....
ನನ್ನ ಗುಟ್ಟಿನ ಗುಟ್ಟು ತಿಳಿಯಲಿಲ್ಲವೇನೋ.....
ನಾನಷ್ಟು ಕೂಗಿದರೂ ಅರ್ಥವಾಗದ ಭಾವ ....
ಭಾಸವಾಗುತ್ತಿತ್ತು... ನಿನ್ನ ಮುಖ ನೋಡಿ  ...
ನಾ ಸುಮ್ಮನಾಗಿದ್ದೆ....

ಹೌದು ಗೆಳತೀ...
ಅಂದು ಆ ಕ್ಷಣದಲ್ಲಿ ನಿನ್ನ ಗುಟ್ಟಿನ
ಜೊತೆ  ಹುಟ್ಟಿದ್ದ ಆಲೋಚನೆಯನ್ನು ಅಂದೇ ವಿಚಾರ ಮಾಡಬೇಕಿತ್ತು.....
ಮತ್ತೆ ಮುತ್ತಿನ ಮತ್ತಲ್ಲಿ ಮರೆತುಬಿಟ್ಟೆ...
ಕಡೆಗೂ ಆ ರೂಪ ಚೌಕಟ್ಟು ಗುಟ್ಟು ರಟ್ಟಾಗಲಿಲ್ಲ.....

ಗೆಳೆಯಾ....
ಅದು ಬರಿಯ ಕನಸಾಯಿತು....
ಎಲ್ಲಿಯ ಮುತ್ತು?.... ಯಾವ ಮತ್ತು?....
ಕಿವುಡು ಕಿವಿಗಳಿಗೆ... ಕಲ್ಪನೆಯ ಮಾತುಗಳು ಕೇಳಿಸವು....
ಗುಟ್ಟು ರಟ್ಟಾಗದು ..... ನನ್ನ ಚೌಕಟ್ಟಿನೊಳಗೆ......

ಗೆಳತೀ...
ಇದೊಂದು ಈ ಬಾರಿ....
ದಿನಚರಿಮುಗಿದ ಮೇಲೆ ಇನ್ನೊಮ್ಮೆ ಸಮಯ ಹೊಂದಿಸಿ....
ನಿನ್ನ ಹೊಟ್ಟೆಯೊಳಗಿಟ್ಟು ಮರೆತ ...
ಗುಟ್ಟು ನೆನಪಿಸು ಮತ್ತೆ....
ನನಗೂ ಅರ್ಥವಾಗುವಂತೆ...
ಹರೆಯದ ಹಯ ಸಮಯಕ್ಕೆ ಮರುಳಾಗಿ....
ಮರೆಯದಿರುವಂತೆ ಕಟ್ಟಿ ಬಿಡು ದಾರದೊಲವಿನಲ್ಲಿ.....ದೂರಾಗದಂತೆ...

ಗೆಳೆಯಾ...
ದಿನಚರಿಯಲ್ಲಿ ಸಮಯವೆಲ್ಲಿ..
 ನಿನಗೆ ಹೊಂದಿಸಿಕೊಳ್ಳಲು?
ಕರಗಿ ಹೋಗಿರಬಹುದು ಹೊಟ್ಟೆಯೊಳಗಿಟ್ಟ ಗುಟ್ಟು....
ನೆನಪಾಗದು.... ಹೊಸ ಪದ ಹೊಸ ಅರ್ಥ......
ಏತರ ಬಂಧನ ಎಲ್ಲಿದೆ ಗೆಲುವು?
ಸವಿನೆನಪುಗಳ ಪೋಣಿಸಿದ ದಾರ ಕಡಿದಿದೆಯಲ್ಲ.....
ಗುಟ್ಟು ರಟ್ಟು ನನ್ನೊಳಗೇ.... ನಿನಗೆ ತಿಳಿದಿಲ್ಲ....

ಗೆಳತೀ....
ಗೊಂದಲ ಬೇಕಿಲ್ಲ ... ಹಗಲು ಹಗಲಂತೆ ಇರಬಹುದು ನಿಮ್ಮ ಕಡೆ....
ನನ್ನೊಳಗಿನ ಮೌನ  ಮತ್ತು ಕತ್ತಲೆಗಳೆರಡೂ..
ತೆರೆದುಕೊಂಡಿದೆ ಈಗ ಬೆಳಕಿನೆಡೆಗೆ....
ಹೊರಡೋಣವೇ ಮತ್ತೆ ನಿರಂತರ... ಅನಂತದೆಡೆಗೆ???

ಗೆಳೆಯ...
ಸರಿ ಬಿಡು...
ಪ್ರಾಂಜಲ ಶುಭ್ರ ಮನಸ್ಸು ...
ಇತ್ತೀಚೆಗೆ ನನಗೂ....
ಹಗಲು ಹಗಲೇ ಇಲ್ಲಿ....
ಕತ್ತಲೆ ಕಳೆದು ಬೆಳಕು ಮೂಡುವ ಕಾಲ
ಬಂದಿರಬೇಕು ನಿಮ್ಮಲ್ಲಿ....
ಜೊತೆಗೆ ಬರುವೆ...
ನಿನದೇ ದಾರಿ ಬದುಕು ನಡೆದಂತೆ....
ಸೋಲದಿರಲಿ ....
ನಿನ್ನ ಛಲ....
ಗುಟ್ಟು ರಟ್ಟುಗಳ ಮುಚ್ಚಿಬಿಡು....
ಸಮಯಕ್ಕೆ ನೆನಪಿಸುವೆ.... ಸಾರಾಂಶವನು....
ಹಾಗೆ  ಮತ್ತೊಮ್ಮೆ
ಕಾಲುಗಳು  ಸೋತರೂ ನನ್ನ ಹೆಜ್ಜೆಗಳು
ಬರುವವು ನಿನ್ನೊಂದಿಗೆ....
ಹೊಸ ಗುರಿಯ.... ಹೊಸ ಹಾದಿಯೆಡೆಗೆ....

---ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು
Address:
Shrikrishna C N
H.No. 9-T-120/3 (1) "Shrinilaya"
Kuntalpady B/H Shasthavu Bhajana Mandir ,
Shakthinagar P.O 
Mangalore-  575016
Mob: +91-9739975363

SHATACHANDIKA YAGA at Shri Temple Agalpady from 10th Aug 2018





Tuesday, 29 May 2018

ಶ್ರೀ ಕ್ಷೇತ್ರ ಅಗಲ್ಪಾಡಿ - ಶತಮಾನದ ಸಂಭ್ರಮ 2021- ವಿವಿಧ ಅಭಿವೃದ್ಧಿ ಕಾರ್ಯಗಳ ವಿವರ

ಆತ್ಮೀಯ ಬಂಧುಗಳೇ..

ನಿಮಗೆಲ್ಲ ತಿಳಿದಂತೆ ಶ್ರೀ ಕ್ಷೇತ್ರ ಶತಮಾನದ ಸಂಭ್ರಮ ಇನ್ನೇನು ಮೂರು ವರ್ಷಗಳಲ್ಲಿ ಆಚರಿಸಲಿದೆ, ಈ ಸಂಭ್ರಮಾಚರಣೆಗೆ ಪೂರ್ವ ಭಾವಿಯಾಗಿ ಹಲವು ಯೋಜನೆಗಳನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಸೇವಾ ಸಂಘದ ,​ಭಗವದ್ಭಕ್ತರಾದ ನಿಮ್ಮ ಹಾಗೂ ನಿಮ್ಮ ಕುಟುಂಬದ ಸಹಕಾರದೊಂದಿಗೆ ಕೈಗೆತ್ತಿಕೊಂಡಿದೆ. ಹಲವು ಯೋಜನೆಗಳಲ್ಲಿ ಕೆಲವನ್ನು ಈ ಕೆಳಗೆ ತಮ್ಮ ಅವಗಾಹನೆಗೆ ಸೂಚಿಸುತ್ತಿದ್ದೇವೆ.

೧. ನೂತನ ಧ್ವಜ ಸ್ತoಬ : ಬೇಕಾದ ಮರವನ್ನು ಈಗಾಗಲೇ ಕ್ಷೇತ್ರದಲ್ಲಿ ಓರ್ವ ​​ಭಕ್ತರ ದಾನದೊಂದಿಗೆ ತರಲಾಗಿದೆ . ಇನ್ನು ತೈಲಾಧಿವಾಸ ಹಾಗೂ ಮುಂದಿನ ಪ್ರಕ್ರಿಯೆಗಳು ಆರಂಭವಾಗಬೇಕಾಗಿವೆ
೨. ಜನರೇಟರ್ ಮತ್ತು ವೈರಿಂಗ್ : ಸುಮಾರು ಆರು ಲಕ್ಷದ ವೆಚ್ಚದಲ್ಲಿ ಈ ಯೋಜನೆ ಸಂಪೂರ್ಣಗೊಂಡಿದೆ
೩. ಗೋ ಶಾಲೆ : ಸುಮಾರು ಎಂಟು ಲಕ್ಷದ ಈ ಯೋಜನೆಗೆ ಈಗಾಗಲೇ ಒಂದು ಕುಟುಂಬ ತಮ್ಮ ಸಮ್ಮತಿ ಸೂಚಿಸಿದೆ
೪. ಸೇವಾ ಕೌಂಟರ್ ನವೀಕರಣ : ಸುಮಾರು ಮೂವತ್ತೈದು ಸಾವಿರ ವೆಚ್ಚದ್ದ ಈ ಯೋಜನೆಗೆ ಓರ್ವ ದಾನಿಗಳು ಈಗಾಗಲೇ ತಮ್ಮ ಉದಾರ ದಾನ ಕಳುಹಿಸಿ ಕೊಟ್ಟಿದ್ದಾರೆ
೫. ದೇವಸ್ಥಾನದ ಮುಂಭಾಗದ ಮೆಟ್ಟಿಲುಗಳ ಎರಡೂ ಕಡೆ  ಹುಲ್ಲುಹಾಸುವ ಯೋಜನೆ : ಸುಮಾರು ಇಪ್ಪತ್ತು ಸಾವಿರ ಖರ್ಚಿನ ಯೋಜನೆಗೆ ಓರ್ವ ಭಕ್ತರು ಸ್ಥಳದಲ್ಲೇ ತಮ್ಮ ಸಹಕಾರ ಕೊಟ್ಟಿದ್ದಾರೆ
೬. ಫೇವರ್ ಬ್ಲಾಕ್ ಹಾಸುವ ಕೆಲಸ : ವಾಹನಗಳ ಸುಗಮ ಸಂಚಾರ ಹಾಗೂ ಯಾತ್ರಿಕರ ಸೌಕರ್ಯಕ್ಕಾಗಿ ಸುಮಾರು ನಾಲ್ಕು ಲಕ್ಷದ ಯೋಜನೆ ಪ್ರಗತಿಯಲ್ಲಿದೆ
೭. ೧೪೦ ಸೆಂಟ್ಸ್ ಜಾಗ ಖರೀದಿ : ವಾಹನ ಪಾರ್ಕಿಂಗ್ ಮತ್ತು ಇತರ ಆವಶ್ಯಕತೆಗಳ ದೃಷ್ಟಿಯಿಂದ ಶ್ರೀ ಕ್ಷೇತ್ರಕ್ಕೆ ಸಮೀಪ ಇರುವ ಜಾಗ ಖರೀದಿಗೆ ಮುಂಗಡ ನೀಡಿದ್ದೇವೆ - ಒಟ್ಟು ಖರ್ಚು ನಲ್ವತ್ತು ಲಕ್ಷ 



ಇನ್ನುಳಿದ ಯೋಜನೆಗಳ ವಿವರ ಸಂಬಂಧಿತ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಂಡ ಬಳಿಕ ನಿಮ್ಮ ಮುಂದೆ ಇಡುವ ಭರವಸೆ ನಮ್ಮದು

ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಮುಂದಿನ ಮೂರು ವರ್ಷಗಳ ಒಳಗಾಗಿ ಆಗಬೇಕಿದೆ.

ನಿಮ್ಮಲ್ಲಿ ನಮ್ಮ ಅರಿಕೆ:
ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ, ನಡೆಯುವ ಯೋಜನೆಗಳ ವೀಕ್ಷಣೆ , ತಮ್ಮ ಸಲಹೆಗಳನ್ನು ನಮ್ಮೊಂದಿಗೆ ಹಂಚಿಕ್ಕೊಂದು , ತಮ್ಮ ಸಹಕಾರ ಯಾವ ರೀತಿಯಲ್ಲಿ ಕೊಡುತ್ತೀರಿ ಎಂದು ತಿಳಿಸಿ

ಇಂತಿ
ಆಡಳಿತ ಮಂಡಳಿ ಹಾಗೂ ಸೇವಾ ಸಂಘದ ಪದಾಧಿಕಾರಿಗಳ ಪರವಾಗಿ

Nagaraj Uppangala                                            95350 00365