IMPORTANT NOTICE

New official website designed for Karada Community. Please visit www.karadavishwa.com for more details.

Sunday, 22 August 2021

ಆ.22- ಹರಿತಾಲಿಕಾ ಪೂಜಾ ಪುಸ್ತಕ ಬಿಡುಗಡೆ

 


ಬದಿಯಡ್ಕ: ಶ್ರೀನಿವಾಸ ಪ್ರಸಾದ ಶಿರಂತಡ್ಕ- ನೆಲ್ಲಿಕುಂಜೆ ಅವರು ಸಂಗ್ರಹಿಸಿದ ಹರಿತಾಲಿಕಾ (ಗೌರೀ ಪೂಜೆ) ಪೂಜಾ ಪುಸ್ತಕದ ಬಿಡುಗಡೆ ಸಮಾರಂಭ ಭಾನುವಾರ (ಆ.22) ಸಂಜೆ 5 ಗಂಟೆಗೆ ಗೂಗಲ್ ಮೀಟರ್ ವೇದಿಕೆಯಲ್ಲಿ ನಡೆಯಲಿದೆ.


ಬೆಂಗಳೂರು ನಿವಾಸಿ ನಾಗರಾಜ ಉಪ್ಪಂಗಳ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಅಗಲ್ಪಾಡಿಯ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕಾಯರ್ಗದ್ದೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ಶ್ರೀಮತಿ ವಜಯಾ ಭಟ್ ಮಠದಮೂಲೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಅಶೋಕ ಮುಂಡಕಾನ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಡಾ| ಬಳ್ಳಪದವು ಮಾಧವ ಉಪಾಧ್ಯಾಯರು, ಪುರೋಹಿತರಾದ ಬೇಂಗ್ರೋಡ ಮಾಧವ ಭಟ್, ಶ್ರೀಧರ ಭಟ್‌ ಸಜಂಗದ್ದೆ- ಪಡ್ರೆ, ಸುಬ್ರಹ್ಮಣ್ಯ ಭಟ್ ಎರ್ಪಲೆ- ಗುಂಡ್ಯಡ್ಕ, ಸತ್ಯಕೃಷ್ಣ ಭಟ್‌, ರಾಧಾಕೃಷ್ಣ ದೇವಸ್ಥಾನ ಮಂಗಳೂರು, ವೆಂಕಟೇಶ ಭಟ್ ಪೈರುಪುಣಿ ಅವರು ಶುಭಾಶಂಸನೆ ಮಾಡಲಿದ್ದಾರೆ.


ಶ್ರೀಮತಿ ಸುಗುಣಾ ಅವರಿಂದ ಪ್ರಾರ್ಥನೆ, ನಳಿನಿ ಸೈಪಂಗಲ್ಲು ಅವರಿಂದ ಸ್ವಾಗತ, ಜಯಶ್ರೀ ಭಟ್‌, ಮೈಕಾನ ಅವರು ಧನ್ಯವಾದ ಸಮರ್ಪಿಸಲಿದ್ದಾರೆ. ರವಿ ಸಜಂಗದ್ದೆ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.


ಗೂಗಲ್ ಮೀಟ್ ಲಿಂಕ್: https://meet.google.com/usq-rziq-cpr


(ಉಪಯುಕ್ತ ನ್ಯೂಸ್) : 

https://local.upayuktha.com/2021/08/Harithalika-pooja-book-release-on-sunday.html?m=1