Sunday, 31 March 2024
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 3ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿತು.
ಹನ್ನೊಂದು ಜನ ಋತ್ವಿಜರು ರುದ್ರ ಪಠಣ ದೊಂದಿಗೆ ಹೊಮವನ್ನು ಆಜ್ಯ ಸಮರ್ಪಿಸಿ ಮಾಡಿ, ರುದ್ರ ಚಮೆ ಪಠಣದೊಂದಿಗೆ ಪೂರ್ಣಾಹುತಿ ನೆರವೇರಿತು. ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗದ ಪ್ರಯುಕ್ತ ಗುರು ಗಣಪತಿ ಪೂಜೆ, ಮಹಾ ಸಂಕಲ್ಪ, ಆಚಾರ್ಯಾದಿ ಋತ್ವಿಕ್ ವರಣ, ಸಪ್ತಶತೀ ಪಾರಾಯಣ ಆರಂಭ, ಮಂಟಪ ಸಂಸ್ಕಾರ, ಪ್ರಧಾನ ಕಲಶ ಸ್ಥಾಪನೆ ಜರುಗಿತು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣಾರ್ಥ ವಾಗಿ ಸಹಸ್ರ ಚಂಡಿಕಾ ಯಾಗ ಆರಂಭ, ಋಕ್ ಸಂಹಿತಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ನಡೆದು ಶ್ರೀ ದೇವರ ಮಹಾಪೂಜೆ ಭೂತ ಬಲಿ, ಉತ್ಸವ ಜರುಗಿತು.
ದಿನಾಂಕ 29 ಮಾರ್ಚ್ 2024ನೇ , ಶುಕ್ರವಾರ ಸುಸಂಪನ್ನಗೊಂಡ ಚಂಡಿಕಾ ದೇವಿ ಪ್ರೀತ್ಯರ್ಥ ದಂಪತಿ ಪೂಜನ, ಹದಿನೆಂಟು ಸುವಾಸಿನಿ ಯರ ಪೂಜನದೊಂದಿಗೆ, ಇಪ್ಪತ್ತ ನಾಲ್ಕು ಜನ ಕುಮಾರಿಯರ ಆರಾಧನೆ ನೆರವೇರಿತು. ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗಿತು.