ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮಂತ್ರಗಳ ನೀನಾದ, ನೆರವೇರುತ್ತಿವೆ ಯಾಗಗಳ ಪುಂಜ, ಪ್ರವಾಹೋಪಾದಿಯಾಗಿ ಹರಿದು ಬರುತ್ತಿರುವ ಭಕ್ತರು, ಸಹಸ್ರಾರು ಸಂಖ್ಯೆಯ ಅನ್ನದಾನ ಒಟ್ಟಿನಲ್ಲಿ ಪಾವನವಾಯಿತು ಶ್ರೀ ಸಾನಿಧ್ಯ.
5ನೇಯ ದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿ, ಸಹಸ್ರ ಚಂಡಿಕಾ ಯಾಗದ ಸಪ್ತಶತೀ ಪಾರಾಯಣ ಮುಂದುವರೆಯಿತು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವೇದಮಾತಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿವಿಧ ಯಾಗಗಳು ಜರುಗುತ್ತಿರುವ ಸುಸಂದರ್ಭ ಯಾಗ ಶಾಲೆಯಲ್ಲಿ ಸಹಸ್ರ ಚಂಡಿಕಾ ಯಾಗಕ್ಕಾಗಿ ಸುಮಾರು ನೂರು ಜನ ಋತ್ವಿಜರು ಸೇರೀ ಏಕ ಕಂಠದಲ್ಲಿ ಶ್ರೀ ಚಂಡಿಕಾ ದೇವಿಯನ್ನು ಸ್ತುತಿಸುವ ಸಪ್ತಶತೀ ಪಾರಾಯಣಗಳು ಸಾವಿರ ಸಂಖ್ಯೆಯಲ್ಲಿ ಜರುಗಬೇಕು. ಮಂಟಪ ದೇವತಾ ಆರಾಧನೆ, ದಂಪತಿ ಪೂಜಾ, ಒಟ್ಟು ನೂರು ಸುವಾಸಿನಿಯರ, ನೂರು ಕುಮಾರಿಕೆಯರ ಆರಾಧನೆ ನೆರವೇರಬೇಕು.
ಬ್ರಾಹ್ಮಣ, ಸುವಾಸಿನಿ, ಕುಮಾರಿಕಾ, ಸಮಾರಾಧನೆ ನಡೆಯಿತು. ದಿನಾಂಕ 31 ಮಾರ್ಚ್ 2024ನೇ , ರವಿವಾರ ಸುಸಂಪನ್ನಗೊಂಡ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಸಹಸ್ರಾರು ಸಂಖ್ಯೆಯಲ್ಲಿ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭ ಆಡಳಿತ ಮೊಕ್ತೇಸರರಾದ ಕೋಳಿಕ್ಕಜೆ ಅನಂತ ಗೋವಿಂದ ಶರ್ಮಾ, ವೇದಮಾತಾ ಟ್ರಸ್ಟ್ ಅಧ್ಯಕ್ಷರಾದ ತಲೆಕ ಸುಬ್ರಹ್ಮಣ್ಯ ಭಟ್, ಯಾಗ ಸಮಿತಿ ಗೌರವಾಧ್ಯಕ್ಷರಾದ ಉಪ್ಪಂಗಳ ಶ್ರೀ ಕೃಷ್ಣ ಭಟ್, ಕೊಟ್ಟಂಗುಳಿ ಶ್ರೀ ಮಾಧವ ಭಟ್, ಬಲೆಕ್ಕಳ ಶ್ರೀ ಗಿರೀಶ್ ಭಾರದ್ವಾಜ್, ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಪ್ರಸಾದ ಭಟ್ ಪಾರ್ಥ ಕೊಚ್ಚಿ ಇವರುಗಳ ನೇತೃತ್ವದಲ್ಲಿ ಯಾಗದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿವೆ.