Monday, 28 September 2015
Friday, 25 September 2015
KARADA PLUS ANDROID APP
KARADA BRAHMANA SANGHA (KA.BRA.SA) in the name of KARADA PLUS Android app is really required or not? Please suggest.
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!
ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು
ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ,
ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರಾಗಿದ್ದೇವೆಂದು
ಭಾವಿಸುತ್ತಾರೆ.
ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ?
ನಮ್ಮ ತೊಂದರೆಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ, ಒಂದಷ್ಟು ರಿಲೀಫ್ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. ಹೆಚ್ಚೆಂದರೆ ಹಣಕಾಸಿನ ನೆರವನ್ನೂ ನೀಡಬಹುದು. ಕೆಲವೊಮ್ಮೆ ಮನಸ್ಸಿನಲ್ಲಿಯೇ ಇಟ್ಟುಕೊಂಡು ಎಲ್ಲವನ್ನೂ ನುಂಗಿಕೊಂಡು ಒಳಗೊಳಗೇ ಪರಿತಪಿಸುವ ಬದಲು ನಾಲ್ಕು ಜನರ ಮುಂದೆ ಹೇಳಿಕೊಂಡಾಗ ಸಾಂತ್ವನ ಸಿಗುವುದು ಸುಳ್ಳಲ್ಲ.
ಇಲ್ಲಿ ಬಹಳ ಮುಖ್ಯವಾದ ಸಂಗತಿಯೇನೆಂದರೆ ನೀವು ನಿಮ್ಮ ಕಷ್ಟಗಳನ್ನು, ವೈಯಕ್ತಿಕ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದೀರಿ ಎಂಬುದು. ಆತನೋ, ಆಕೆಯೋ, ನಿಮ್ಮ ಸಮಸ್ಯೆಗಳನ್ನು ಕಾಪಾಡುವಷ್ಟು ನಿಯತ್ತು ಉಳ್ಳವರಾಗಿರಬೇಕು. ನಿಮಗೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ, ಸಾಂತ್ವನ, ಸಮಾಧಾನ ಹೇಳುವಷ್ಟು ಪ್ರಬುದ್ಧರಾಗಿರಬೇಕು. ಅವರ ಸಲಹೆ-ಸಾಂತ್ವನಗಳು ಆ ಕ್ಷಣದಲ್ಲಿ ನಿಮಗೆ ನೆಮ್ಮದಿ ಸಿಗುವಂತಿರಬೇಕು. ಅಲ್ಲದೇ ಅಗತ್ಯ ಬಿದ್ದರೆ ನಿಮಗೆ ಹಣಕಾಸಿನ ನೆರವು ನೀಡಲು ಹಿಂದೇಟು ಹಾಕುವವರಾಗಿರಬಾರದು. ವೈದ್ಯರ ಮುಂದೆ ತನ್ನ ರೋಗಗಳ ಮಾಹಿತಿಯೆಲ್ಲವನ್ನೂ ಹೇಳಿಕೊಳ್ಳುತ್ತಾನಲ್ಲ, ಹಾಗೆ ಹೇಳಿಕೊಂಡಾಗ ವೈದ್ಯ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಪ್ರವೃತ್ತನಾಗುತ್ತಾನಲ್ಲ, ಅಂಥ ಸಾಂತ್ವನವಾದರೂ ಕೊಡುವವರ ಮುಂದೆ ತಮ್ಮ ಗೋಳು, ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.
ನಿಮ್ಮ ವೈಯಕ್ತಿಕ ಅಥವಾ ಖಾಸಗಿ ಸಂಗತಿಗಳನ್ನು ಬೇರೆಯವರ ಮುಂದೆ ಹಂಚಿಕೊಳ್ಳುವುದೆಂದರೆ, ನಿಮ್ಮ ವ್ಯಕ್ತಿತ್ವದ ರಹಸ್ಯದ ತಿಜೋರಿ ಬೀಗದ ಕೈಯನ್ನು ಬೇರೆಯವರಿಗೆ ಕೊಟ್ಟ ಹಾಗೆ. ನಿಮ್ಮ ಕುರಿತಾದ ಆ ಮಾಹಿತಿಯನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಅಲ್ಲಿಯವರೆಗೆ ನೀವು ಕಾಪಾಡಿಕೊಂಡು ಬಂದ ನಿಮ್ಮ ಖಾಸಗಿ ಅಂಶಗಳೆಲ್ಲ ಬಹಿರಂಗವಾಗಬಹುದು. ಆ ಮೂಲಕ ನಿಮ್ಮ ಚಾರಿತ್ರ್ಯಹರಣವಾಗಬಹುದು. ನೀವೇ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬರಬಹುದು. ನಿಮ್ಮೆಲ್ಲ ಗುಟ್ಟುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತೀರೋ ಅವರು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಈ ಅಂಜಿಕೆಯಿಂದ ನೀವು ಅವರಿಗೆ ಸದಾ ಗೊಡ್ಡು ಸಲಾಮು ಹೊಡೆಯುತ್ತಾ ಇರಬೇಕಾದ ಪರಿಸ್ಥಿತಿಗೆ ನಿಮ್ಮನ್ನೇ ನೀವು ನೂಕಿಕೊಳ್ಳಬಹುದು.
ಬೇರೆಯವರ ಮುಂದೆ ನಿಮ್ಮ ‘ಪುರಾಣ’ ಹೇಳಿಕೊಳ್ಳುವುದರಿಂದ ಸಮಸ್ಯೆ ಖಂಡಿತ ಬಗೆಹರಿಯುವುದಿಲ್ಲ, ಕಡಿಮೆಯೂ ಆಗುವುದಿಲ್ಲ. ಅದರ ಬದಲು ಜಿಛಿ ಛ್ಛ್ಛಿಛ್ಚಿಠಿ ಹೆಚ್ಚುತ್ತಾ ಹೋಗುತ್ತದೆ. ನಿಮ್ಮನ್ನು ಗೌರವಿಸುತ್ತಿದ್ದವರು, ಇಷ್ಟಪಡುತ್ತಿದ್ದವರು ನಿಮ್ಮ ಪರಿಸ್ಥಿತಿ ನೋಡಿ ಕ್ರಮೇಣ ದೂರವಾಗಬಹುದು. ಅಂತರ ಕಾಪಾಡಬಹುದು, ನಿಕೃಷ್ಟವಾಗಿಯೂ ಕಾಣಬಹುದು, ಲಘುವಾಗಿ ಪರಿಗಣಿಸಬಹುದು.
ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ. ನಿಮಗೆ ನಿಮಗಿಂತ ಉತ್ತಮ ಸ್ನೇಹಿತ, ಹಿತ ಚಿಂತಕ, ಮಾರ್ಗದರ್ಶಕ ಮತ್ತೊಬ್ಬರಿಲ್ಲ. ಅವನ ಹೊರತಾಗಿ ಬೇರೆಲ್ಲೂ ಸಾಧ್ಯವಾದಷ್ಟು ಮಟ್ಟಿಗೆ ಹೇಳಿಕೊಳ್ಳಬೇಡಿ.
– ವಿಶ್ವೇಶ್ವರ ಭಟ್ . (‘ನೂರೆಂಟು ಮಾತು’)
Collected from: ( http://vbhat.in/breaking-news/guide_101114/)

Subscribe to:
Posts (Atom)