Friday 6 March 2015

My Gal

ನನ್ನ ಹುಡುಗಿ ಐಶ್ವರ್ಯಾಳಂತೆ ವಿಶ್ವಸುಂದರಿಯಾಗಿರಬೇಕೆಂದೇನಿಲ್ಲಾ;
ಆಕೆಯ ಆಂತರಿಕ ಸೌಂದರ್ಯ ನನಗಾಗಿ ತುಡಿಯುತ್ತಿದ್ದರೆ ನನಗದಷ್ಟೇ ಸಾಕು…
ನನ್ನ ಹುಡುಗಿ ಕೋಟ್ಯಾಧೀಶ್ವರನ ಒಬ್ಬಳೇ ಮಗಳಾಗಿರಬೇಕೆಂದೇನಿಲ್ಲಾ;
ನನ್ನ ಸಂತಸದ ಬಗ್ಗೆ ಆಕೆ ಸದಾ ಲಕ್ಷ್ಯ ಕೊಟ್ಟರೆ ನನಗದಷ್ಟೇ ಸಾಕು…
ನನ್ನ ಹುಡುಗಿ ಪಾಕ ಪ್ರವೀಣೆಯಾಗಿರಬೇಕೆಂದೇನಿಲ್ಲಾ;
ನನಗಾಗಿ ಸದಾ ಪ್ರೀತಿಯನ್ನುಣಬಡಿಸಿದರೆ ನನಗದಷ್ಟೇ ಸಾಕು…
ನನ್ನ ಹುಡುಗಿ ಸದಾ ನನ್ನ ಅಡಿಯಾಳಾಗಿ ಇರಬೇಕೆಂದೇನಿಲ್ಲಾ;
ಆಕೆ ಸದಾ ನನ್ನ 'ಕೇರ್ ಟೇಕರ್' ಆಗಿದ್ದರೆ ನನಗದಷ್ಟೇ ಸಾಕು...
ನನ್ನ ಹುಡುಗಿ ನಾ ವಿರಮಿಸುವಾಗ ಕಾಲೋತ್ತಿ ಸೇವೆ ಮಾಡಬೇಕೆಂದೇನಿಲ್ಲಾ;
ನಾನು ತಲೆನೋವೆಂದು ಮಲಗಿರುವಾಗ ಹಣೆ ನೇವರಿಸಿದರೆ ನನಗದಷ್ಟೇ ಸಾಕು…
ನನ್ನ ಹುಡುಗಿ ನನ್ನ ದಾರಿ ನೋಡುತ್ತಾ ದಿನಾ ನನಗಾಗಿ ಕಾಯಬೇಕೆಂದೇನಿಲ್ಲಾ;
ನಾನು ಸುಸ್ತಾಗಿ ಬಂದಾಗ ನಗುಮೊಗದಿಂದ ಬರಮಾಡಿಕೊಂಡರೆ ನನಗದಷ್ಟೇ ಸಾಕು...
ನನ್ನ ಹುಡುಗಿ ನಾ ಗದರಿಸಿದಾಗ ಗದರಿ ಕುಳಿತುಕೊಳ್ಳಬೇಕೆಂದೇನಿಲ್ಲಾ;
ನನ್ನ ಪ್ರೇಮಕೆ ಸದಾ ಪ್ರೀತಿಯ ಮಳೆಗರೆದರೆ ನನಗದಷ್ಟೇ ಸಾಕು…
ನನ್ನ ಹುಡುಗಿ 'ಮಾಸ್ಟರ್ಸ್ ಡಿಗ್ರಿ' ಕಲಿತಿರಬೇಕೆಂದೇನಿಲ್ಲಾ;
ಆಕೆ ನನ್ನೊಂದಿಗೆ ಸುಂದರ ಜೀವನ ನಡೆಸಲು ಕಲಿತಿದ್ದರೆ ನನಗದಷ್ಟೇ ಸಾಕು…
ನನ್ನ ಹುಡುಗಿ ಸೀತೆಯಂತೆ ಪತಿವ್ರತೆ ಆಗಿರಬೇಕೆಂದೇನಿಲ್ಲಾ;
ಆಕೆ ಸದಾ ನನ್ನನ್ನು ಪತಿದೇವರೆಂದು ಪರಿಗಣಿಸಿದರೆ ನನಗದಷ್ಟೇ ಸಾಕು…
ನನ್ನ ಹುಡುಗಿ ಲವ-ಕುಶರಂಥಾ ಅಸಾಮಾನ್ಯ ಮಕ್ಕಳಿಗೆ ಜನ್ಮ ನೀಡಬೇಕೆಂದೇನಿಲ್ಲಾ;
ಆಕೆ ನಮ್ಮ ಮಗುವನ್ನು ದೇಶದ ಉತ್ತಮ ಪ್ರಜೆಯಾಗಿ ನಿರ್ಮಿಸಿದರೆ ನನಗದಷ್ಟೇ ಸಾಕು….

Wednesday 4 March 2015

  ಭ್ರಮಾಲೋಕದಲಿ ಮಿಂದು...

                          ನಾನು ನಾನಲ್ಲ..
                          ನನ್ನೊಳಗಿನ ನೀನೇ ಅಂದುಕೊಂಡೆ..
                          ನೀನಿಲ್ಲದೇ ಎನಗಾರಿಲ್ಲವೆಂದು 
                          ಭ್ರಮಾ ಲೋಕದಲ್ಲೇ ದಿನವೂ ಮಿಂದೇಳುತಿದ್ದೆ..
                          ಸತ್ಯ ಮಿಥ್ಯಗಳ ನಡುವೆ
                          ಬೆಂದು,ನಾ ತೊಳಲಾಡುತಲಿದ್ದೆ...
                          ಜಗದೊಳಗಣ ನೀನು ನೀನಲ್ಲವೆಂಬುದ
                          ತಡವಾಗಿ ತಿಳಿದೆ..
                          ಈಗಲೂ ನಿನ್ನ ನಾ ಹೇಗೆ ಪ್ರೀತಿಸಲಿ ಹೇಳು..?!

Admin Request

Hai to all,

This is official Karada Blog... Please select www.blogger.com in which get registered with your gmail and search for Karada Brahmana Sangha..

Thank you.