IMPORTANT NOTICE
Monday, 29 February 2016
Saturday, 27 February 2016
Wednesday, 24 February 2016
INDOOR SPORTS DAY : BANGALORE REGION
Dear Karada Member
The indoor sports day would be held at the residence of Shri
Ashoka and Aravinda Mundakana on 28th Feb 2016 from 9.30 AM and the
address is given below:
Cell: 98450 95460, 99805 36158
Ashumun2001@Yahoo.Co.In, Aravinda.Mundakana@gmail.com
|
Ashoka & Aravinda Mundakana
# 3/1, 'Abhilasha', Krishob Garden, 11Th 'B' Main, Padmanabha Nagar, Bangalore -560 061 |
The
event would include: Carom (Singles and Doubles) and Chess
There
would be separate sections for ladies, children and gents.
Please enroll for the
event before 26th Feb 2016 with Shri Nityananda Kedukody on
9980375031 or Panduranga Gurjar on 9342281752
Special
Request: Members who have the carom and chess boards are requested to inform
our secretary so that we can complete the games early on the day.
Simple
lunch is organized on the event day.
Management committee Meeting: At the same venue we will be conducting the management
committee meeting on the same day at 4.28PM onwards. We
request all our members to be part of this event and make it a grand success.
Saturday, 20 February 2016
ಕಾಲಜ್ಞಾನ
ನಮಸ್ಕಾರಗಳು
ಕಾಲ ಜ್ಞಾನದ ಬಗ್ಗೆ ಕಿರುಮಾಹಿತಿ :-
👉 ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.
👉 ನಮ್ಮ ವಿಜ್ಞಾನದ ಪ್ರಕಾರ.ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು 5 ಗಂಟೆ, 56 ನಿಮಿಷಗಳು, 45 ಸೆಕಂಡ ,51 ಮಿಲಿ ಸೆಕೆಂಡ .

👉 ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ
ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು
ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ
ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ
ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್
ಕ್ಯಾಲೆಂಡರ್ ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).
🙏 ಭಾರತೀಯರ ಕಾಲ ಜ್ಞಾನ/ ಸನಾತನ ಜೋತ್ಯಿಷ ಶಾಸ್ತ್ರ:-
15ನಿಮೇಷ = 1 ಕಾಷ್ಠಾ
30 ಕಾಷ್ಠಾ = 1ಕಲ
30 ಕಲ = 1 ಕ್ಷಣ
12 ಕ್ಷಣ. = 1 ಮುಹೂರ್ತ (48 ನಿಮಿಷಗಳು).
30 ಮುಹೂರ್ತ = 1ದಿನ ( ಅಹೋರಾತ್ರಿ) = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ, = 1 ಮಾಸ ( ತಿಂಗಳು)
2ಮಾಸ = 1ಋತು.
6 ಋತು = 12 ಮಾಸ = 1ವರ್ಷ ( ಮನುಷ್ಯ ವರ್ಷ) = 1 ಸಂವತ್ಸರ.
1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.
1,200 ದೇವ ವರ್ಷ = 4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.
2,400 ದೇವ ವರ್ಷಗಳು = 8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
3,600 ದೇವ ವರ್ಷಗಳು = 12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
4,800 ದೇವ ವರ್ಷ = 17,28,000 ಮನುಷ್ಯ ವರ್ಷ = ಕೃತಯುಗ ಅವಧಿ.

ಒಟ್ಟಾರೆ 12,000 ದೇವ ವರ್ಷ = 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ /ವ್ಯಾಪ್ತಿ.
71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ = 85,881,60,000 ಮನುಷ್ಯ ವರ್ಷಗಳು.
360 ಬ್ರಹ್ಮ. ದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.

ಹೀಗೆ ಮುಂದುವರಿಯುತ್ತದೆ ನಮ್ಮ ಹಿರಿಯರ ಜ್ಞಾನ.
ಇದರಿಂದ ನಮಗೆ ಸ್ಪಷ್ಟವಾಗುತ್ತೆ ಈ ಅವ್ಯಜ್ಞಾನಿಕ ಗ್ರೆಗೋರಿಯನ್
ಕ್ಯಾಲೆಂಡರ್ ಎಷ್ಟೇ ತಿಣುಕಾಡಿದರು ಸಮಯವನ್ನು ನಿಖರವಾಗಿ ಅಳೆಯಲು
ಸಾಧ್ಯವಾಗುವುದಿಲ್ಲವೆಂದು ಆದರೆ ನಮ್ಮ ಜೋತಿಷ್ಯ ವಿಜ್ಞಾನ ಸ್ಪಷ್ಟವಾಗಿ ನಿಖರವಾಗಿ
ಕಾಲವನ್ನು ಸೂಚಿಸುತ್ತದೆ.
ಹೊಸ ವರ್ಷದ ಆಚರಣೆಯ ವ್ಯತ್ಯಾಸಗಳು ಈ ರೀತಿ ಇರುತ್ತವೆ -
👉 ಪಾಶ್ಚತ್ಯಅಂಧಾನುಕರಣೆಯಿಂದ ಇಂದು ಡಿಸೆಂಬರ್ 31 ರ ಮದ್ಯರಾತ್ರಿ ನಡುಬಿದಿಯಲ್ಲಿ ಮಧ್ಯಪಾನಿಗಳಾಗಿ , ಧೂಮಪಾನಿಗಳಾಗಿ ( ಮಾದಕ ವಸ್ತುಗಳಿಗೆ ಬಲಿಯಾಗಿ) ಅಸಭ್ಯವಾಗಿ ನರ್ತಿಸುವುದು ಒಂದು ಕಡೆಯಾದರೆ.

🌸 ಭಾರತೀಯ ಸನಾತನದ ಹೊಸ ವರ್ಷ ವಾದ ಚಾಂದ್ರಮಾನ ಯುಗಾದಿ ಚೈತ್ರ ಶು ೧
ರಂದು ಬೇವು, ಬೆಲ್ಲ ಸವಿದು ದೇಹಕ್ಕೆ ಆರೋಗ್ಯ , ಮನಸ್ಸಿಗೆ ಶಾಂತಿಯಿಂದ ಶ್ರಾದ್ದ
ಭಕ್ತಿಯಿಂದ ಶಾಸ್ತ್ರ ಬದ್ಧವಾಗಿ ಆಚರಿಸುವದು.( ಮತ್ತು ಭಾರತದ ಕೆಲವು ಕಡೆ ವಿಶೇಷವಾಗಿ
ತಮಿಳುನಾಡು, ಕೇರಳ ಗಳಲ್ಲಿ ಸೌರಮಾನ ಪಂಚಾಂಗ ದ ಪ್ರಕಾರ ಸೌರಮಾನ ಯುಗಾದಿ/ ಓಣಂ ,
ಸಂಕ್ರಾಂತಿ ಎಂದು ಹೊಸ ವರ್ಷ ಆಚರಣೆ)
Friday, 5 February 2016
Wednesday, 3 February 2016
ಮದುವೆಯ ಜಗತ್ತು ಸುಂದರ
ಮದುವೆಯಂಥ ಬಂಧ, ಸಂಬಂಧ, ಅನುಬಂಧ ಮತ್ತೊಂದಿಲ್ಲ. ಅದನ್ನು ಒಂದು institution
ಅಂತ ಕರೆಯುವುದುಂಟು. ಹಾಗೆ ಕರೆಯುವುದಿದ್ದರೆ university(ಅದೂ ಒಂದು
institution ಬಿಡಿ) ಎಂದು ಕರೆಯಬಹುದಲ್ಲ ಎಂಬುದು ಒಂದು ವಾದ. ಮದುವೆಯಾಗದವರು
ಜೀವನದಲ್ಲಿ ಅಪೂರ್ಣರಂತೆ.
ಮದುವೆಯಾದವರು finished (ಕಥೆ ಮುಗಿಯಿತು ಅಂತಾನೂ ಅರ್ಥ, ಪರಿಪೂರ್ಣರು ಎಂದೂ ಅರ್ಥ) ಅಂತೆ. ಸಂತಸವಾಗಿರುವುದೊಂದೇ ಜೀವನದ ಉದ್ದೇಶ ಅಲ್ಲವಂತೆ. ಅದಕ್ಕಾಗಿ ಮದುವೆಯಾಗಬೇಕು ಎಂದು ಹೇಳುವವರೂ ಇದ್ದಾರೆ. ಕೆಲವರು ಎಲ್ಲ ಅನಿಷ್ಟಗಳಿಗೂ ಸರ್ಕಾರವನ್ನೇ ದೂರುತ್ತಾ ಇರುತ್ತಾರೆ. ಅಂಥವರು ಮದುವೆಯಾಗಬೇಕು ಎಂಬ ವಕ್ರತುಂಡೋಕ್ತಿಯೂ ಹಳೆಯದೇ.
ಮದುವೆಯಲ್ಲಿ ಸುಖವಿಲ್ಲ ಎಂಬುದು ಎಲ್ಲ ವಿವಾಹಿತರ ಒಕ್ಕೊರಲ ಅಭಿಪ್ರಾಯ. ಈ ಮಾತನ್ನು ಅವಿವಾಹಿತನ ಮುಂದೆ ಹೇಳಿನೋಡಿ. ಜಪ್ಪಯ್ಯ ಅಂದರೂ ಆತ ಕೇಳುವುದಿಲ್ಲ. ಕೇಳಿದರೂ ನಿಜ ಎಂದು ನಂಬುವುದಿಲ್ಲ. ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿದ ನಂತರವೇ ಈ ಮಾತಿನ ಮರ್ಮ, ಮಹತ್ವ, ಮಜಕೂರು ಅರ್ಥವಾಗೋದು. ಆದರೆ, ಅಷ್ಟೊತ್ತಿಗೆ ಸಮಯ ಮೀರಿರುತ್ತದೆ. ಎಲ್ಲ ವಿವಾಹಿತರಿಗೂ ಜೀವನದಲ್ಲಿ correction (ತಪ್ಪನ್ನು ತಿದ್ದಿಕೊಳ್ಳಲು) ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಅವರು ಮಾಡಿದ ತಪ್ಪನ್ನೇ ಮಾಡುತ್ತಾರೆ.
ನಟಿ ಎಲಿಜಬೆತ್ ಟೇಲರ್ ಎಷ್ಟು ಸಲ ಮದುವೆಯಾದಳೆಂದು ಅವಳಿಗೇ ಮರೆತುಹೋಗಿತ್ತು. ಆಕೆಯಿಂದ ವಿಚ್ಛೇದನ ಪಡೆದ ಗಂಡರಿಂದಾಗಿ ಗೊತ್ತಾಯಿತು. ಆದರೆ ಪ್ರತಿಸಲ ಮದುವೆಯಾಗುವಾಗಲೂ ಅವಳಲ್ಲಿ ಸಂಸಾರದ ಬಗ್ಗೆ ಉತ್ತಮ ಭಾವವೇ ಮೂಡುತ್ತಿತ್ತಂತೆ. ಇಲ್ಲದಿದ್ದರೆ ಯಾರೂ ಮದುವೆಯಾಗುತ್ತಿರಲಿಲ್ಲವೇನೋ? ಮದುವೆಯಲ್ಲಿ ಸಂತಸವಿದೆಯೋ, ವಿರಸವಿದೆಯೋ, ಸುಖವಿದೆಯೋ, ದುಃಖವಿದೆಯೋ ಎಂಬುದನ್ನು ತಿಳಿಯಲು ಯಾರನ್ನೂ ಕೇಳಬೇಕಿಲ್ಲ, ಓದಬೇಕಿಲ್ಲ. ಅವರವರ ತಂದೆ- ತಾಯಿಗಳು ಹಾಗೂ ನೆರೆಮನೆಯ ಗಂಡ- ಹೆಂಡತಿಯರನ್ನು ನೋಡಿದರೆ ಸಾಕು. ಆದರೆ ಯಾರೂ ಇದರಿಂದ ಪಾಠ ಕಲಿಯುವುದಿಲ್ಲ.
ಮಗುವಿಗೆ ‘ಬೆಂಕಿಯನ್ನು ಮುಟ್ಟಬೇಡ’ ಅಂದ್ರೆ ಕೇಳುವುದಿಲ್ಲ. ಬೆಂಕಿಯನ್ನು ಮುಟ್ಟುತ್ತದೆ. ಕೈಸುಟ್ಟುಕೊಂಡಾಗಲೇ ಅದಕ್ಕೆ ಗೊತ್ತಾಗುತ್ತದೆ. ಈ ಮಾತನ್ನು ಮದುವೆಗೂ ಅನ್ವಯಿಸಬಹುದು. ಸಂಸಾರದ ತಾಪತ್ರಯಗಳ ಬಗ್ಗೆ ವರ್ಷಗಟ್ಟಲೆ ಹೇಳಿದರೂ ಯಾವ ಅವಿವಾಹಿತನಿಗೂ ಅರ್ಥವಾಗುವುದಿಲ್ಲ. ಸುಟ್ಟುಕೊಂಡಾಗಲೇ ಗೊತ್ತಾಗೋದು. ಅವಿವಾಹಿತರೆಲ್ಲ ಮದುವೆಯೆಂಬ institution ಒಳಗೆ ಹೋಗಲು ಹವಣಿಸುತ್ತಿರುತ್ತಾರಂತೆ. ವಿವಾಹಿತರೆಲ್ಲ ಅಲ್ಲಿಂದ ಹೊರಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುತ್ತಾರಂತೆ. ತಮಾಷೆ ಅಂದ್ರೆ ಆ ‘ಸಂಸ್ಥೆ’ಯ ಒಳಗಿದ್ದವರು ಹಾಗೂ ಹೊರನಡೆದವರು ಭೇಟಿಯಾಗುವುದೇ ಇಲ್ಲ. ಭೇಟಿಯಾದರೂ ಒಬ್ಬರ ಅನುಭವವನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಒಂದು ವೇಳೆ ಒಪ್ಪಿದರೂ ಬಹುಬೇಗ ಮರೆತುಬಿಡುತ್ತಾರೆ.
ಇದನ್ನು ಗಂಭೀರ ಅಂದ್ರೆ ಗಂಭೀರವಾಗಿ ತೆಗೆದುಕೊಳ್ಳಬಹುದು. ತಮಾಷೆ ಅಂದ್ರೆ ತಮಾಷೆಯಾಗಿಯೂ ಪರಿಗಣಿಸಬಹುದು. ಕಾರಣ ಅವಿವಾಹಿತರಿಗೆ ಮದುವೆ ಬಗ್ಗೆ ಏನೇ ಹೇಳಿದರೂ ಪ್ರಯೋಜನವಿಲ್ಲ. ವಿವಾಹಿತರಿಗೆ ಹೇಳುವುದೇನು ಬಂತು? ಅವರೇ victims. ಈ ಕಾರಣಕ್ಕಾಗಿ ಎಲ್ಲರೂ ‘ಬೆಂಕಿ’ಯನ್ನು ಮುಟ್ಟಲೇಬೇಕು. ಮುಟ್ಟಿದರೆ ಸುಡುತ್ತದೆ ಎಂದು ಪ್ರವಚನ ಬಿಗಿದರೆ ಯಾರೂ ಕೇಳುವುದಿಲ್ಲ. ಈ ವಿಷಯದಲ್ಲಿ ಸುಟ್ಟುಕೊಳ್ಳಲು ಎಲ್ಲರೂ ಸ್ವತಂತ್ರರು.
ತಮಾಷೆ, ವಕ್ರತುಂಡೋಕ್ತಿಗಳೇನೇ ಇರಲಿ. ಈ ರೀತಿ ‘ಸುಟ್ಟು’ಕೊಳ್ಳುವುದರಲ್ಲಿ ಅದ್ಭುತ ಆನಂದವಿದೆ. ಇಲ್ಲದಿದ್ದರೆ ಯಾರೂ ‘ಆತ್ಮಾಹುತಿ’ಗೆ ಮುಂದಾಗುತ್ತಿರಲಿಲ್ಲ. ಗಂಡ- ಹೆಂಡತಿ ಥರದ ಜೋಡಿ ಇನ್ನೊಂದಿಲ್ಲ. ಒಬ್ಬ ವ್ಯಕ್ತಿ ಜತೆ ಮದುವೆಯ ನಂತರ ಜೀವನವಿಡೀ ಬಾಳುವುದು ಸಣ್ಣ ಮಾತಲ್ಲ. ಮದುವೆಯಲ್ಲಿ ಅದೆಂಥ ಸೆಳೆತ, ಆಕರ್ಷಣೆ, ಮೋಹ, ಚಮಕ್ ಇದೆಯೋ ಗೊತ್ತಿಲ್ಲ. ಬೇರೆ ಮನೆಯಲ್ಲಿ ಹುಟ್ಟಿದ, ಭಿನ್ನ ಅಭಿರುಚಿ, ಸಂಪ್ರದಾಯ, ಸಂಸ್ಕೃತಿ, ಪರಿಸರದಲ್ಲಿ ಬೆಳೆದ ವ್ಯಕ್ತಿಯೊಂದಿಗೆ ‘ಏಕ’ ಆಗಿ ಬದುಕುವುದು ರೋಚಕತೆಯೇ. ಇದಕ್ಕಿಂತ ಅದ್ಭುತವೇನಿದೆ? ನಲವತ್ತು- ಐವತ್ತು ವರ್ಷ ಗಂಡ- ಹೆಂಡತಿಯಾಗಿ ಬಾಳುವ ಅವಕಾಶ ಕಲ್ಪಿಸುವ ಈ ಮದುವೆಯ ಗರ್ಭದೊಳಗೆ ಅದೆಂಥ ವಿಸ್ಮಯ ಅಡಗಿರಬಹುದು?
ಅಕ್ರಮ- ಸಕ್ರಮ ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನಿಸುವವರು ರಾಜಕಾರಣಿಗಳಲ್ಲ. ಒಂದು ಗಂಡು- ಹೆಣ್ಣನ್ನು ಸೇರುವ ಮುನ್ನ ಕಲ್ಯಾಣಮಂಟಪದಲ್ಲೋ, ದೇವಸ್ಥಾನದಲ್ಲೋ ಸಂಧಿಸಿ ಹಾರ- ಅರಿಶಿನ ಕೊಂಬು ಬದಲಿಸಿಕೊಳ್ಳುತ್ತಾರಲ್ಲ ಅದೇ ಅಕ್ರಮ- ಸಕ್ರಮ!
ಮದುವೆ ಪೂರ್ವನಿಯೋಜಿತ. ದೇವ ನಿರ್ಧರಿತ. ಇಲ್ಲದಿದ್ದರೆ ಜಿಗಣಿಯ ಹುಡುಗ ಜಿಂಬಾಬ್ವೆ ಹುಡುಗಿಯನ್ನು ಮದುವೆಯಾಗುವುದುಂಟಾ? ಅಲಸ್ಕಾದ ಹುಡುಗಿ ಆಲ್ಮನೆ ಹುಡುಗನ ಕೈಹಿಡಿಯೋದು ತಮಾಷೆಯಾ? ಮುಖವನ್ನೇ ನೋಡದ, ಹಿನ್ನೆಲೆ ತಿಳಿಯದ, ಗೊತ್ತು ಗೋತ್ರ ಅರಿಯದ ಅಂಧರು ಸತಿ-ಪತಿಗಳಾಗೋದಕ್ಕೆ ಏನೆನ್ನಬೇಕು? ಇಂಟರ್‌ನೆಟ್‌ನಲ್ಲಿ ಭೇಟಿಯಾಗಿ ಕಂಪ್ಯೂಟರ್‌ನಲ್ಲಿ ಮದುವೆಯಾಗ್ತಾರಲ್ಲ, ಅದು ಎಂಥ ಭಾವಾತಿರೇಕ!?
ಹೀಗಾಗಿ, ಪ್ರತಿಯೊಬ್ಬರೂ ಮದುವೆಯಾಗಬೇಕು. ಮದುವೆಯಾಗದೆ ಅಲೆಮಾರಿಯಂತೆ ತಿರುಗಿ ಜಗತ್ತು ಸುಂದರ ಎನ್ನುವುದಕ್ಕಿಂತ, ನಮ್ಮಿಚ್ಛೆ ಅರಿಯುವವರನ್ನು ಕೈಹಿಡಿದು ಮದುವೆಯೆಂಬ ಜಗತ್ತು ಸುಂದರ ಎನ್ನುವುದೇ ಲೇಸು.
– ವಿಶ್ವೇಶ್ವರ ಭಟ್, (ಅಂಕಣ: ಬ್ರೇಕಿಂಗ್ ನ್ಯೂಸ್)
Collected from : http://vbhat.in/breaking-news/marriage_03021

Subscribe to:
Posts (Atom)