IMPORTANT NOTICE

New official website is designed for Karada Community. Please visit www.karadavishwa.com for more details.

Wednesday, 22 February 2017

SHRI JAYENDRA SARASWATHI VEDA MANDALAM

ಆದರಣೀಯ ಬ್ರಾಹ್ಮಣಬಂಧುಗಳೇ!

ನಮಸ್ಕಾರಪೂರ್ವಕ ವಿಜ್ಞಾಪನೆಗಳು 🙏—

ನಮ್ಮಸಂಪ್ರದಾಯ ಚಾರಿಟೇಬಲ್ ಎಂಡ್ ಎಜುಕೇಷನ್ ಟ್ರಸ್ಟ್ ಕಳೆದ ಎಂಟು ವರ್ಷಗಳಿಂದ "ಶ್ರೀ ಜಯೇಂದ್ರಸರಸ್ವತೀ ವೇದಮಂಡಲಂ " ಎಂಬ ಹೆಸರಿನಿಂದ ವೇದಪಾಠಶಾಲೆಯನ್ನು ಉಪನೀತ ಬ್ರಾಹ್ಮಣವಟುಗಳಿಗಾಗಿ ನಡೆಸುತ್ತಿದೆ.ವೇದಪಾಠಶಾಲೆಯು ಗುರುಕುಲ ಮಾದರಿಯನ್ನು ಅನುಸರಿಸುತ್ತಿದ್ದು,ಇಲ್ಲಿ ಕೃಷ್ಣಯಜುರ್ವೇದ, ಋಗ್ವೇದ,ಸಂಸ್ಕೃತ ಪಾಠಗಳು ನಡೆಯುತ್ತವೆ. ಇದೀಗ ಈ ವರ್ಷದ ಪ್ರವೇಶಕ್ಕಾಗಿ ಆಸಕ್ತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಬೋಧನಾ ವಿಷಯಗಳು— ಕೃಷ್ಣಯಜುರ್ವೇದ,ಋಗ್ವೇದ, ಸಂಸ್ಕೃತ, ಇಂಗ್ಲೀಷ್

ವಿದ್ಯಾರ್ಥಿಗಳಿಗೆ ಸೌಲಭ್ಯಗಳು—
೧ ಯಾವುದೇ ಬೋಧನಾ ಶುಲ್ಕವಿರುವುದಿಲ್ಲ.
೨ ಊಟ,ವಸತಿ,ಉಚಿತವಾಗಿರುತ್ತದೆ.
೩ ನಿತ್ಯೋಪಯೋಗಿ ವಸ್ತುಗಳನ್ನು,ಅಧ್ಯಯನಸಾಮಗ್ರಿಗಳನ್ನು, ವಸ್ತ್ರಗಳನ್ನು ಸಂಸ್ಥೆ ಉಚಿತವಾಗಿ ನೀಡುತ್ತದೆ.

ಬೋಧನಾಕ್ರಮ—
೧ ಗುರುಕುಲ ಪದ್ಧತಿಯನ್ನು ಅನುಸರಿಸುತ್ತದೆ.
೨ ಶಿಖಾ,ಪಂಚೆ,ಶಲ್ಯ— ಇವುಗಳು ಅನಿವಾರ್ಯ
೩ ಸಂಸ್ಕೃತ ಮಾಧ್ಯಮದಲ್ಲಿ ಶಿಕ್ಷಣ.

ಪ್ರವೇಶಕ್ಕೆ ಅರ್ಹತೆ—
ಉಪನೀತ ಬ್ರಾಹ್ಮಣ ವಟುವಾಗಿರಬೇಕು.

ವಿ.ಸೂ.—ವಿದ್ಯಾರ್ಥಿಗಳ ಪ್ರಗತಿಗಾಗಿ,ಭವಿಷ್ಯಕ್ಕಾಗಿ ಪರೀಕ್ಷೆಗಳಿರುತ್ತವೆ.ಅನಿವಾರ್ಯಕಾರಣಗಳಹೊರತಾಗಿ ವರ್ಷದಲ್ಲಿ ಎರಡು ಅವಧಿಯ ವಿರಾಮವಿರುತ್ತದೆ.

ನಮ್ಮವಿಳಾಸ—  SJS Vedamandalam,Katriguppe village,Neriga post,Anekal,Banglore— 562125

ಸಂಪರ್ಕಕ್ಕಾಗಿ— ವಿದ್ವಾನ್ ಮಂಜುನಾಥ ಭಟ್ಟ,ಪ್ರಾಚಾರ್ಯರು. 9480205088

No comments:

Post a Comment