ಮಣಿಪಾಲ: ತಾಂತ್ರಿಕ ಮಹಾವಿದ್ಯಾಲಯದ [MIT] ಸಂಶೋಧನ ವಿದ್ಯಾರ್ಥಿ ವಿಷ್ಣು ಶರ್ಮ ಆಟಿಕುಕ್ಕೆ ಅವರು ಬರೆದು ಮಂಡಿಸಿದ ಎಂಬ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [MAHE] ಸಂಸ್ಥೆಯು, ಪಿಎಚ್.ಡಿ. ಪದವಿಯನ್ನು ನೀಡಿದೆ.
ಇವರ ಸಂಶೋಧನೆಯು ಕೃಷಿ ಮಣ್ಣಿನ ಫಲವತ್ತತೆ ಮತ್ತು ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದ ಆಗಬಲ್ಲ ದುಷ್ಪರಿಣಾಮಗಳ ಬಗೆಗಿನ ಸಂಶೋಧನಾತ್ಮಕ ವರದಿಯಾಗಿದ್ದು, ಕೃಷಿಕರಿಗೆ, ಕೇಂದ್ರ ಹಾಗು ರಾಜ್ಯ ಸರಕಾರದ ಕೃಷಿ ಇಲಾಖೆ ಹಾಗೂ ಸಂಶೋಧನಾಸಕ್ತರಿಗೆ ಉಪಕಾರಿ ಆಗಬಲ್ಲುದು. ಈ ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದಪಡಿಸಿದ ಪ್ರಬಂಧಗಳು, ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ.
ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹೆಚ್. ಎನ್. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅದೇ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.
ಮೂಲತಃ ಕಾಸರಗೋಡಿನ ವಿಷ್ಣು ಶರ್ಮ ಆಟಿಕುಕ್ಕೆ ಅವರು ವಿದ್ವಾನ್ ಮಾಧವ ಭಟ್ ಆಟಿಕುಕ್ಕೆ ಹಾಗೂ ಸುಮತಿ ಆಟಿಕುಕ್ಕೆ ದಂಪತಿಗಳ ಪುತ್ರ. ಪ್ರಸ್ತುತ ಇವರು ಆಪಾವನಿ ಎನ್ವಿರಾನ್ಮೆಂಟಲ್ ಸೊಲ್ಯುಶನ್ಸ್ ಪ್ರೈ. ಲಿ. ಹಾಗೂ ರಿಪ್ಲ್ಯಾಸ್ಟಿಕೊ ಪ್ರೈ.ಲಿ. ಎಂಬ ಎರಡು ಸಂಸ್ಥೆಗಳನ್ನು ಆರಂಭಿಸಿ ಪರಿಸರ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
No comments:
Post a Comment