ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 2ನೇಯದಿನ ಋಕ್ ಸಂಹಿತಾ ಯಾಗ ಆಜ್ಯಾಹುತಿಯಿಂದ ಜರುಗಿತು. ಅರಣೀ ಮಥನ ಪೂರ್ವಕ ಅಗ್ನಿ ಪ್ರಜನನ ದೊಂದಿಗೆ ಐಕ್ಯ ಮತ್ಯ ಹೋಮ ಜರುಗಿತು. ಹೊಮವನ್ನು ಐಕ್ಯ ಮತ್ಯ ಮಂತ್ರ ಪಠಣದೊಂದಿಗೆ ಆಜ್ಯ, ಚರು, ಸಮಿಧೆ ಸಮರ್ಪಿಸಿ, ಋತ್ವಿಜರು ನೆರವೇರಿಸಿದರು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣಾರ್ಥ ವಾಗಿ ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕ್ಯಮತ್ಯಹೋಮ, ರುದ್ರಹೋಮ, ಧನ್ವಂತರಿ ಹೋಮ, ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಜರುಗುತ್ತಿರುವ ಸುಸಂದರ್ಭ ದಿನಾಂಕ 28 ಮಾರ್ಚ್ 2024ನೇ ಗುರುವಾರ ಸುಸಂಪನ್ನಗೊಂಡಿತು. ಪೂರ್ಣಾಹುತಿ ಯೊಂದಿಗೆ ಯಾಗ ಸಂಪನ್ನಗೊಂಡಿತು.
ಮಧ್ಯಾಹ್ನ ಶ್ರೀ ದುರ್ಗಾಪರಮೇಶ್ವರಿ ದೇವರ ಮಹಾ ಮಂಗಳಾರತಿ ಭಕ್ತ ವರ್ಗಕ್ಕೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗ ಪೂರ್ಣಾಹುತಿಯೊಂದಿಗೆ ನಡೆಸಲಾಯಿತು.
ಕ್ಷೇತ್ರದ ಆಡಳಿತ ಮೊತ್ತೇಸರ ಎ.ಜಿ. ಶರ್ಮಾ ಕೋಳಿಕ್ಕಜೆ ಮುತುವರ್ಭಾಜಿಯಿಂದ ಭಾಗ ವಹಿಸಿದ್ದರು. ವೇದಮಾತಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ, ಲೋಕ ಸಭಾ ಸದಸ್ಯರು, ಸಮೀತಿ ಸದಸ್ಯರು , ಭಕ್ತರು ಭಾಗವಹಿಸಿದ್ದರು .