IMPORTANT NOTICE

New official website is designed for Karada Community. Please visit www.karadavishwa.com for more details.

Tuesday, 31 December 2024

ಜನನೀ ವಿಜಯೀಭವ : ಕರಾಡ ಸಮ್ಮಿಲನ 2024


ಕರಾಡ ಕಲಾ ಮಂಜೂಷ ಪ್ರಸ್ತುತ ಪಡಿಸುವ ಕರಾಡ ಸಮ್ಮಿಲನ 2024 ಸುರೇಶ್ ಶಿರಂತಡ್ಕ ವಿರಚಿತ ನಾಟಕ “ಜನನೀ ವಿಜಯೀಭವ”

ಪಾತ್ರವರ್ಗ

ನರಸಿಂಹಣ್ಣ : ರಮಾನಂದ ಎಡಮಲೆ

ಧೀಮಹಿ : ಋಗ್ವೇದ್ ಶಿರಂತಡ್ಕ

ಅನಾವರಣ್ : ವಚನ್ ಎಡಮಲೆ

ಪ್ರಚೋದನ್ : ರಚನ್ ಎಡಮಲೆ

ಗಂಗಣ್ಣ : ಸುರೇಶ್ ಶಿರಂತಡ್ಕ

ತಮ್ಮಣ್ಣ : ಡಾ। ಕಾರ್ತಿಕ್ ಕೋಳಿಕ್ಕಜೆ

ತಿಮ್ಮಣ್ಣ : ಸಿಎ।ಕೊಮ್ಮುಂಜೆ ಬಾಲಮುರಳಿ

ಪುರಂದರಣ್ಣ : ವೆಂಕಟಕೃಷ್ಣ ಎಡಮಲೆ

ಶಂಭಣ್ಣ : ವಿಘ್ನೇಶ್ ಶಿರಂತಡ್ಕ

ಬಾಲಕ : ಶೌರಿ ಕೋಳಿಕ್ಕಜೆ

ಕರ್ನಲ್ ಭಾರ್ಗವ : ಮನೋಹರ್ ಚಿಪ್ಳೂಣ್ಕರ್

ಡಾ।ಅರುಂಧತಿ : ಸುಮ ಚಂದುಕೂಡ್ಲು

ಧ್ವನಿ ಸಂಕಲನ : ಸುಧನ್ವ ಕೋಟೆ & ಶಶಾಂಕ್ ಕೋಟೆ

ಹಿನ್ನೆಲೆ ಧ್ವನಿ : ಶುಭಾ ಶಿರಂತಡ್ಕ & ಶಿಲ್ಪ ಕೆದುಕೋಡಿ

ಹಿನ್ನೆಲೆ ಗಾಯನ : ರಮಾನಂದ ಎಡಮಲೆ

ರಚನೆ & ನಿರ್ದೇಶನ : ಸುರೇಶ್ ಶಿರಂತಡ್ಕ 

ಧ್ವನಿ & ದೀಪ : ಶಿವಗಿರಿ ಸೌಂಡ್ಸ್ ಪೆರ್ಲ

ಸ್ಥಳಾವಕಾಶ : ಶ್ರೀ ಭಾರತಿ ಸದನ, ಪೆರ್ಲ 

ವಿಷ್ಣು ಶರ್ಮ ಆಟಿಕುಕ್ಕೆ ಅವರಿಗೆ ಡಾಕ್ಟರೇಟ್ ಪದವಿ (ಪಿಎಚ್.ಡಿ.)

 

ಮಣಿಪಾಲ: ತಾಂತ್ರಿಕ ಮಹಾವಿದ್ಯಾಲಯದ [MIT] ಸಂಶೋಧನ ವಿದ್ಯಾರ್ಥಿ ವಿಷ್ಣು ಶರ್ಮ ಆಟಿಕುಕ್ಕೆ ಅವರು ಬರೆದು ಮಂಡಿಸಿದ ಎಂಬ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ [MAHE] ಸಂಸ್ಥೆಯು, ಪಿಎಚ್.ಡಿ. ಪದವಿಯನ್ನು ನೀಡಿದೆ.

ಇವರ ಸಂಶೋಧನೆಯು ಕೃಷಿ ಮಣ್ಣಿನ ಫಲವತ್ತತೆ ಮತ್ತು ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದ ಆಗಬಲ್ಲ ದುಷ್ಪರಿಣಾಮಗಳ ಬಗೆಗಿನ ಸಂಶೋಧನಾತ್ಮಕ ವರದಿಯಾಗಿದ್ದು, ಕೃಷಿಕರಿಗೆ, ಕೇಂದ್ರ ಹಾಗು ರಾಜ್ಯ ಸರಕಾರದ ಕೃಷಿ ಇಲಾಖೆ  ಹಾಗೂ ಸಂಶೋಧನಾಸಕ್ತರಿಗೆ ಉಪಕಾರಿ  ಆಗಬಲ್ಲುದು.  ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದಪಡಿಸಿದ ಪ್ರಬಂಧಗಳು, ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ.

ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹೆಚ್. ಎನ್. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅದೇ ವಿಭಾಗದ  ಪ್ರಾಧ್ಯಾಪಕ ಡಾ.  ಕೆ. ಬಾಲಕೃಷ್ಣ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.

ಮೂಲತಃ ಕಾಸರಗೋಡಿನ ವಿಷ್ಣು ಶರ್ಮ ಆಟಿಕುಕ್ಕೆ ಅವರು ವಿದ್ವಾನ್ ಮಾಧವ ಭಟ್ ಆಟಿಕುಕ್ಕೆ ಹಾಗೂ ಸುಮತಿ ಆಟಿಕುಕ್ಕೆ ದಂಪತಿಗಳ ಪುತ್ರ. ಪ್ರಸ್ತುತ ಇವರು ಆಪಾವನಿ ಎನ್ವಿರಾನ್ಮೆಂಟಲ್ ಸೊಲ್ಯುಶನ್ಸ್ ಪ್ರೈ. ಲಿ. ಹಾಗೂ ರಿಪ್ಲ್ಯಾಸ್ಟಿಕೊ ಪ್ರೈ.ಲಿ. ಎಂಬ ಎರಡು ಸಂಸ್ಥೆಗಳನ್ನು ಆರಂಭಿಸಿ ಪರಿಸರ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

Friday, 23 August 2024

ಭಜನಾಮೃತ : ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ : ಗುಂಡ್ಯಡ್ಕ



 

ಮುಜರಾಯಿ ದೇಗುಲಗಳು ಭಕ್ತಸ್ನೇಹಿ ಆಗುವುದೆಂದು!? - ರವೀ ಸಜಂಗದ್ದೆ

ದೇವಸ್ಥಾನದ ಪರಿಸರವು ಆಹ್ಲಾದಕರವಾಗಿದ್ದು ಭಕ್ತರ ಶ್ರದ್ಧಾಭಕ್ತಿಯನ್ನು ಇಮ್ಮಡಿ ಗೊಳಿಸುವಂತಿರಬೇಕು, ದೇವರು ಕಣ್ಣೆದುರು ಬಂದು ಹರಸಿ, ಇಷ್ಟಾರ್ಥಗಳನ್ನು ನೆರವೇರಿ ಸುವನು ಎನ್ನುವಷ್ಟು ಭರವಸೆಯನ್ನು ಅದು ಕೊಡುವಂತಿರಬೇಕು. ಹಾಗಾದಾಗ ದೇವಸ್ಥಾನಕ್ಕೆ ಹೋಗಿಬರುವ ಭಕ್ತವೃಂದಕ್ಕೆ ನೆಮ್ಮದಿಯ ಅನುಭವ, ಸಮಾಧಾನ ಸಿಗುತ್ತವೆ.

ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಶ್ರೇಣಿಯ, ಸಾವಿರಾರು ಕೋಟಿ ರು. ಆದಾಯ ತ೦ದಿಡುವ ಬಹುತೇಕ ದೇವಾಲಯಗಳ ಮತ್ತು ಅವುಗಳ ಪರಿಸರದ ಪರಿಸ್ಥಿತಿ ನೋಡಿದರೆ ದೇವರೇ ಕಾಪಾಡಬೇಕು ಎನಿಸುತ್ತದೆ! ಕಾರಣ, ಪ್ರಾಂಜಲ ಮನಸ್ಸಿನಿಂದ ಹೋಗುವ ಭಕ್ತವೃಂದಕ್ಕೆ ನರಕದರ್ಶನ ಮಾಡಿಸುವ ತಾಣಗಳಾಗಿ ಅವು ಮಾರ್ಪಟ್ಟಿವೆ. ಅಪರೂಪಕ್ಕೆಂಬಂತೆ, ಇದಕ್ಕೆ ತದ್ವಿರುದ್ಧವಾಗಿರುವ, ಚೊಕ್ಕ ವ್ಯವಸ್ಥೆಯ ಒಂದೆರಡು ದೇಗುಲಗಳೂ ಇರಬಹುದು,

ಅವ್ಯವಸ್ಥೆ, ದುರ್ವಾಸನೆ, ದುರ್ವತ್ರನೆ, ಸ್ಥಳೀಯ ವ್ಯಾಪಾರಿಗಳ ಆಡಚಣೆ, ಸ್ಥಳೀಯ ಆಡಳಿತ ಮಂಡಳಿಗಳ ದುಡ್ಡಿನ ದಾಹ, ಅಹಂಕಾರ ಇವು ಬಹಳಷ್ಟು ದೇಗುಲ- ಪರಿಸರಗಳಲ್ಲಿ ಕಣ್ಣಿಗೆ ರಾಚುವಂತಿವೆ. ಇವನ್ನೆಲ್ಲ ದಾಟಿ, ಕಸರತ್ತು ಮಾಡಿ ದೇವರ ದರ್ಶನ ಮಾಡಿ ಹೊರಬರುವಾಗ ನೆಮ್ಮದಿಗಿಂತಲೂ ಹೆಚ್ಚಾಗಿ ಇಡೀ ವ್ಯವಸ್ಥೆಯ ಬಗ್ಗೆ ಬೇಸರ, ರೇಜಿಗೆ ಉಂಟಾಗದಿದ್ದರೆ ಕೇಳಿ, ಹೀಗಾಗಿ ಆಸ್ತಿಕರು ಇಂಥ ದೇಗುಲಗಳಿಗೆ ಹೋಗಿ ಬರುವುದರೊಳಗೆ ನಾಸ್ತಿಕರಾಗಿ ಬದಲಾಗುವ ಸಂಭವವೇ ಹೆಚ್ಚು! ಹೆಚ್ಚಿನ ಆದಾಯ ತಂದುಕೊಡುವ ಇಂಥ ದೇವಸ್ಥಾನಗಳು ತಮ್ಮ ಪರಿಸರದ ನಿರ್ವಹಣೆ, ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದು ವಾಸ್ತವ ಮತ್ತು ದುರಂತ. ಶೀಘ್ರದರ್ಶನ, ವಿವಿಧ ಸೇವೆ, ಅಡ್ಡು ಪ್ರಸಾದ, ವಾಹನ ನಿಲುಗಡೆ ಮತ್ತು ಚಪ್ಪಲಿ ಸ್ಟ್ಯಾಂಡ್ ಮತ್ತಿತರ ಹೆಸರಿನಲ್ಲಿ ಭಕ್ತರಿಂದ ದುಡ್ಡನ್ನೇನೋ ಪೀಕಿಸಲಾಗುತ್ತದೆ; ಆದರೆ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆ ಏನೇನೂ ಸಾಲದು.

ನಾಡದೇವತೆ, ಶಕ್ತಿಸ್ವರೂಪಿಣಿ  ಎನಿಸಿಕೊಂಡಿರುವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇಗುಲಕ್ಕೆ ಇತ್ತೀಚೆಗೆ ಕುಟುಂಬ ಸಮೇತ ಭೇಟಿನೀಡಿದಾಗ ಅಲ್ಲಿನ ಕರಾಳ ವ್ಯವಸ್ಥೆಯ ದರ್ಶನವಾಯಿತು. ವಾಹನ ನಿಲುಗಡೆ ವ್ಯವಸ್ಥೆಗೆ ಜಾಗವಿದ್ದರೂ ಅಚ್ಚುಕಟ್ಟುತನ ಇರಲಿಲ್ಲ. ಪ್ರವೇಶದ್ವಾರದಲ್ಲಿ ದುಡ್ಡು ತೆಗೆದುಕೊಳ್ಳಲು ಒಂದಿಬ್ಬರು ಇದ್ದುದು ಬಿಟ್ಟರೆ, ವಾಹನಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಲು ಅಲ್ಲಿ ಯಾರೂ ಇರಲಿಲ್ಲ, ಬಹುಮಹಡಿ ಪಾರ್ಕಿಂಗ್ ತಾಣದ ಮೆಟ್ಟಿಲು ಮತ್ತದರ ಪರಿಸರ ಗಲೀಜಾಗಿತ್ತು, ಬೀದಿನಾಯಿಗಳ ನೆಲೆಯಾಗಿತ್ತು. ಅಲ್ಲಿಂದ ದೇವಸ್ಥಾನಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಹೂವು-ಹಣ್ಣು-ಕಾಯಿ, ಫ್ಯಾನ್ಸಿ ವಸ್ತುಗಳನ್ನು ಮಾರುವವರ ಕಿರುಚಾಟ-ಕಿರಿಕಿರಿ. ಅವನ್ನು ತಮ್ಮಿಂದಲೇ ತೆಗೆದುಕೊಳ್ಳುವಂತೆ ಪ್ರತಿಯೊಬ್ಬರಿಂದ ಒತ್ತಡ, ಅಲ್ಲಲ್ಲಿ ಸಿಗುವ ಮಂಗಳಮುಖಿಯರು ವರ್ತಿಸುವ ಪರಿಯಂತೂ ಭಕ್ತರನ್ನು ಮುಜುಗರಕ್ಕೆ ಈಡುಮಾಡದಿರದು. ಶುದ್ಧ ಅಸಹ್ಯ! 

ಮುಂದೆ ಚಪ್ಪಲಿ ಬಿಡುವ ಜಾಗ ಮತ್ತು ಹತ್ತಿರದಲ್ಲೆಲ್ಲೂ ಕೈಕಾಲು ತೊಳೆಯಲು ವ್ಯವಸ್ಥೆ ಇದ್ದಂತಿರಲಿಲ್ಲ. ಇದ್ದರೂ ಅಂಥ ಕಡೆ ಹೋಗಿ ಕೈಕಾಲು ಮುಖ ತೊಳೆಯಲಾಗದಷ್ಟು ಮಲಿನ. ಇಂಥ ಅವ್ಯವಸ್ಥೆಯಲ್ಲಿ ಭಕ್ತರ ಪಾಲೂ ಇದೆಯೆನ್ನಿ,  ಜನಸಂದಣಿ ಹೆಚ್ಚಿದ್ದುದರಿಂದ ತಲೆಗೆ ನೂರು ರುಪಾಯಿ ಗಾಬರಿ 'ಶೀಘ್ರ ದರ್ಶನ' ಟಿಕೆಟ್ ಪಡೆದು ದರ್ಶನದ ಸಾಲಿನಲ್ಲಿ ನಿಂತೆವು. ದೇಗುಲದ ಒಳಗೆ ಆಯಕಟ್ಟಿನ ಜಾಗದಲ್ಲಿ ಭಿಕ್ಷೆ ಬೇಡುವ ಕೆಲವರು ಕುಳಿತಿದ್ದರು, ಅವರ ಕಿರಿಕಿರಿ ಬೇರೆ (ದುಡ್ಡಿನ ಬಲದಿಂದ ಹೀಗೆ ದೇವರ ಶೀಘ್ರದರ್ಶನ ಮಾಡುವ ಪದ್ಧತಿ ನನ್ನ ವಿರೋಧವಿದೆ; ಏಕೆಂದರೆ ದೇವರು ಬೆಲೆಕೊಡುವುದು ಪರಿಶುದ ಭಕ್ತಿಗೇ ವಿನಾ ದುಡ್ಡಿಗಲ್ಲ). ಅಲ್ಲಿನ ಹೆಚ್ಚಿನ ಸಿಬ್ಬಂದಿ ಮೈಮೇಲೆ ದೆವ್ವ ಬ೦ದವರಂತೆ ವರ್ತಿಸುತ್ತಿದ್ದುದು ಹುಟ್ಟಿಸುವಂತಿತ್ತು. ಅವರು ಬಳಸುವ ಪದಗಳು, ಮಾತಿನ ಧಾಟಿ ಎಲ್ಲದರಲ್ಲೂ ದರ್ಪ, ಧಾರ್ಷ್ಟ್ಯ, ಸಿಡುಕು ಎದ್ದುಕಾಣುತ್ತಿತ್ತು. ದೇವಿ ಮೂರ್ತಿಯ ಎದುರು ನಿಂತಿದ್ದ ಅರ್ಚಕ ವೃಂದವಂತೂ ಏರುದನಿಯಲ್ಲಿ ತಮ್ಮದೇ ಕುಶಲೋಪರಿ ಮಾತನಾಡುತ್ತಾ, ನಗೆಯಾಡುತ್ತಾ ತಟ್ಟೆಕಾಸು ಎಣಿಸುವುದರಲ್ಲಿ ತಲ್ಲೀನವಾಗಿತ್ತು. ಒಟ್ಟಾರೆ ಹೇಳುವುದಾದರೆ, ಚಾಮುಂಡಿಗಿಂತ ಹೆಚ್ಚು ತಾವೇ ಇಲ್ಲಿನ ವಾರಸುದಾರರು, ಅವತಾರಪುರುಷರು ಎಂಬಂತಿತ್ತು ಮೇಲೆ ಉಲ್ಲೇಖಿಸಿದ ವಿವಿಧ ಸ್ತರದ ಮಂದಿಯ ವರ್ತನೆ. ಪ್ರಶಾಂತತೆಯ ನೆಲೆಯಾಗಿರಬೇಕಿದ್ದ ಗರ್ಭಗುಡಿಯ ಪರಿಸರದಲ್ಲಿ ಗಲಾಟೆ-ಗೋಜಲು-ಗೊಂದಲಗಳದ್ದೇ ಸಾಮ್ರಾಜ್ಯವಿತ್ತು, ಪ್ರಶಾಂತವಾಗಿ ಕುಳಿತಿದ್ದ ತಾಯಿ ಚಾಮುಂಡಿಯ ಸುತ್ತಲೂ ಇಂಥವರೇ ಮತ್ತು ಅವರ ನಕಾರಾತ್ಮಕ ಶಕ್ತಿಯೇ ತುಂಬಿಕೊಂಡಿದ್ದು ನೋಡಿ ಬೇಸರವಾಯಿತು.

ಹಣ್ಣು-ಕಾಯಿ ತೆಗೆದುಕೊಂಡು ಹೋದವರಿಗೆ ಮತ್ತೊಂದು ತೆರನಾದ ಕಿರಿಕಿರಿ, ತೆಂಗಿನಕಾಯಿ ಒಡೆದುಕೊಡಲು ಹಿರಿಯ ಮಹಿಳೆಯೊಬ್ಬರು ಪ್ರಾಂಗಣದಲ್ಲಿ ನಿಂತಿದ್ದರು. ಅಲ್ಲೇ ಇರುವ ಕಲ್ಲಿಗೆ ತೆಂಗಿನಕಾಯಿಯನ್ನು ಅಪ್ಪಳಿಸಿ, ಒಡೆದ ಕಾಯಿಯನ್ನು ವಾಪಸ್ ಮಾಡುವಾಗ ತಮ್ಮ ಸೇವೆಗೆ ಆಕೆ ಲಜ್ಜೆಯಿಲ್ಲದೆ ದುಡ್ಡು ಡಿಮ್ಯಾಂಡ್ ಮಾಡುತ್ತಿದ್ದರು, ಸರಕಾರಿ ಕಚೇರಿಗಳಲ್ಲಿ ಮಾತ್ರವೇ ಇಂಥ ಪರಿಪಾಠವನ್ನು ಕಂಡಿದ್ದ ನನಗೆ, ದೇಗುಲದಲ್ಲೂ ಅದೇ ಕಂಡು ಷಾಕ್ ಆಯಿತು! ಬಹುಶಃ ಅಲ್ಲಿ ಕೆಲಸಕ್ಕೆಂದು ನಿಯೋಜಿಸಲ್ಪಡಲು ಆಕೆ ಖಂಡಿತಾ ಪ್ರಭಾವ ಬೀರಿ ಸಂಬಂಧಪಟ್ಟವರಿಗೆ ಂದಷ್ಟು ಪಾವತಿಸಿರಬೇಕು ಅಥವಾ ದಿನದ ಲೆಕ್ಕದಲ್ಲಿ ಕಪ್ಪ ಸಂದಾಯ ಮಾಡುತ್ತಿರಬೇಕು! ದುಡ್ಡು-ಕಾಸಿನ ದಂಧೆ ಮಟ್ಟದವರೆಗೂ ಬಂದಿದೆಯಾ? ಚಾಮು೦ಡಿಯ ಸನ್ನಿಧಿಯ ಏಳೆಂಟು ಮೀಟರ್ ದೂರದಲ್ಲೇ ದುಡ್ಡಿಗೆ ಬೇಡಿಕೆ, ಭ್ರಷ್ಟಾಚಾರ! ಮಾತ್ರವಲ್ಲದೆ, ದೇವಸ್ಥಾನದ ಹೊರಗೆ ಗೋಪುರಕ್ಕೆ ಲಗತ್ತಿಸಲಾಗಿರುವ 'ಚಾಮುಂಡೇಶ್ವರಿ ಅಮ್ಮನವರು' ಎಂಬ ನಾಮಫಲಕದ ಮೇಲೆ ತೂಗುಬಿಟ್ಟಿದ್ದ ಹೂಗಳು ಕರಚಿಹೋಗಿ, cates ಗೋಪುರದ ಮೆರುಗನ್ನು ಘಾಸಿಗೊಳಿಸಿದ್ದವು. ಕೋಟಿಗಳಲ್ಲಿ ಆದಾಯ ಇರುವ ದೇವರಿಗೆ ಇಂಥಾ ದುರವಸ್ತ್ರ. ಾಮುಂಡೇಶ್ವರಿ ಅಮ್ಮನವರು ವಿಧಿಯೇ!

ಅಬ್ಬಾ, ಇಷ್ಟೆಲ್ಲಾ ಅವ್ಯವಹಾರ ಅವತಾರಗಳನ್ನು ಜೀರ್ಣಿಸಿಕೊಂಡು ತಾಯಿ ಚಾಮುಂಡಿಯ ದರ್ಶನ ಮುಗಿಸಿ ಹೊರಬಂದೆವು. ನಂತರದ್ದು ಲಡ್ಡು ಪ್ರಸಾದ ಸ್ವೀಕರಿಸುವ ಕಸರತ್ತು! ಅದನ್ನು ವಿತರಿಸುವ ಕೌಂಟರ್ ಅನ್ನು ಮುಚ್ಚಲಾಗಿತ್ತು. ನೂರು ರುಪಾಯಿಗಳ ಶೀಘ್ರದರ್ಶನದ ಟಿಕೆಟ್ ಪಡೆದವರಿಗೆ ಪ್ರಸಾದ ರೂಪದಲ್ಲಿ ಒಂದು ಲಡ್ಡು ಸಿಗುತ್ತದೆ ಎಂದು ನಮೂದಿಸಲಾಗಿತ್ತು. ಕುರಿತು ವಿಚಾರಿಸಲಾಗಿ ನಮಗೆ ಸಿಕ್ಕಿದ್ದು 'ಲಡ್ಡು ಸ್ಟಾಕ್ ಇಲ್ಲ' ಎಂಬ ಉತ್ತರ 'ಲಡ್ಡು ಸ್ಟಾಕ್ ಇಲ್ಲದಿದ್ದರೆ ನಮ್ಮ 15 ರುಪಾಯಿ ವಾಪಸ್ ಕೊಡಿ' ಎಂದು - ಮನವಿ ಮಾಡಿದ್ದೇ ತಡ, ಅಲ್ಲಿನ ಉಸ್ತುವಾರಿಯೊಬ್ಬ ಹೌಹಾರಿ ಮಾತನಾಡಿ, ನಾವೇನೋ ಕ್ರಿಮಿನಲ್ಗಳೆಂಬಂತೆ ವಾದ ಮಂಡಿಸಿದೆ. ಇನ್ನೂ ಒಂದಿಬ್ಬರು ಸಿಬ್ಬಂದಿಯನ್ನು ವಿಚಾರಿಸಿದಾಗಲೂ ಇದೇ ಅನುಭವ. ಒಟ್ಟಿನಲ್ಲಿ, 'ಲಡ್ಡು ಬಂದು ಬಾಯಿಗೆ ಬಿತ್ತಾ' ಎಂಬ ಅನುಭವಕ್ಕೆ ಬದಲಾಗಿ, 'ನಮ್ಮ ಹಕ್ಕಿನ ಲಡ್ಡುಗಾಗಿ ಅವರ ಬಾಯಿಗೆ ಬಿದ್ದು ನರಳಾಡಿದ ಅನುಭವವಾಯಿತು! ರುಪಾಯಿಗಳು. 

ಅಲ್ಲೇ ನಮೂದಿಸಿದಂತೆ ಒಂದು ಲಡ್ಡುವಿನ ದರ 15 ರುಪಾಯಿಗಳು. ದಿನಕ್ಕೆ ಅಂದಾಜು 4,000 ಮಂದಿ ಶೀಘ್ರದರ್ಶನ ಪಡೆದರೆ, 'ಲಡ್ಡು ತಯಾರಿಕೆ ಮತ್ತು ವಿತರಣಾ ಮ೦ಡಳಿ'ಯು ಜೇಬಿಗಿಳಿಸುವ ಮೊತ್ತ ಬರೋಬ್ಬರಿ 60,000 ದೇಗುಲದೊಳಗೆ ತೆಂಗಿನಕಾಯಿ ಒಡೆದುಕೊಡಲು ಪುಣ್ಯಾತ್ತಿ ಬಾಯಿಬಿಟ್ಟು ಕೇಳುತ್ತಿದ್ದ ಮೊಬಲಗು 20 ರುಪಾಯಿ. ದಿನಕ್ಕೆ ಆಕೆ 1,000 ಕಾಯಿ ಒಡೆದರೆ, ಸಂಜೆಯ ವೇಳೆಗೆ ಕೈಯಲ್ಲಿ ಒಟ್ಟಾಗುವ ಮೊತ್ತ 20,000 ರುಪಾಯಿ. ಆಕೆಯ ತಿಂಗಳ ಸಂಬಳವೂ ಅಷ್ಟಿರಲಿಕ್ಕಿಲ್ಲವೇನೋ?! ಇವೆಲ್ಲ ಒಂದೆರಡು ಸ್ಯಾಂಪಲ್ ಅಷ್ಟೇ ಅಥವಾ ಒಂದಿಡೀ ಅವ್ಯವಸ್ಥೆಯ ಸಿನಿಮಾದ ಟೀಸರ್ ಅಷ್ಟೇ! ಇಂಥ ನಗದು ಸಂಗ್ರಹದ ದಂಧೆ ಮತ್ತು ಅವ್ಯವಹಾರಗಳು ಹೆಚ್ಚಿನ ಮುಜರಾಯಿ ದೇವಸ್ಥಾನಗಳಲ್ಲಿ ಹಾಸುಹೊಕ್ಕಾದಂತೆ ಭಾಸವಾಗುತ್ತಿದೆ ಮತ್ತು ಅದು ಓಪನ್ ಸೀಕ್ರೆಟ್' ಎಂದೆನಿಸುತ್ತಿದೆ. ದುಡ್ಡಿನ ಸಂಗ್ರಹ ಎಲ್ಲಿಯವರೆಗೆ ಹೋಗಿ ಯಾರಿಗೆಲ್ಲ ಅದರ ಪಾಲು ಸೇರುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ, ಇಂಥ ಅಪಸವ್ಯವನ್ನು ಮಾನ್ಯ ಮುಜರಾಯಿ ಮಂತ್ರಿಗಳ ಗಮನಕ್ಕೆ ತರುವ ಪುಟ್ಟ ಪ್ರಯತ್ನವಿದು ಅಷ್ಟೇ. 

ದೇವರಂತೂ ದುಡ್ಡನ್ನು ಮುಟ್ಟುವುದಿಲ್ಲ. ಇದು ದೇವರ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಜೇಬಿಗಿಳಿಸುವವರ ವ್ಯವಸ್ಥಿತ ಲಾಬಿ, ಕನಿಷ್ಠಪಕ್ಷ ದೇವಸ್ಥಾನ ಗಳಂಥ ನಮ್ಮ ಶ್ರದ್ಧಾಭಕ್ತಿಯ ಕೇಂದ್ರಗಳನ್ನು ದುಡ್ಡು ಬಾಚುವ ದಂಧೆ ಯಿಂದ ಹೊರಗಿಡಬೇಕಿದೆ. ಮುಜ ರಾಯಿ ಮಂತ್ರಿಗಳು ನಿಟ್ಟಿನಲ್ಲಿ ಸ್ವತಃ ಫೀಲ್ಡಿಗಿಳಿದು ತಮ್ಮ ಇಲಾಖೆಯನ್ನು ಹಾಗೂ ದೇವಸ್ಥಾನಗಳನ್ನು ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಬೇಕು. ಮುಜರಾಯಿ ಇಲಾಖೆಯ ಆಡಳಿತ ಕ್ಕೊಳಪಡುವ ರಾಜ್ಯದೆಲ್ಲೆಡೆಯ ದೇಗುಲಗಳನ್ನು ಸ್ಥಳೀಯರು ಅವಲೋಕಿಸಿ, ಸಚಿವರ ಗಮನಕ್ಕೆ ತಂದು ವ್ಯವಸ್ಥೆಯನ್ನು ಸರಿಪಡಿಸಬೇಕು. ದುಡ್ಡು ಮಾಡಲೆಂದು ದೇಗುಲದ ವ್ಯವಸ್ಥೆ ಯೊಳಗೆ ತೂರಿಕೊಂಡವರಿಗೆ, ಅವರಷ್ಟೇ ಪ್ರಭಾವಶಾಲಿಯಾಗಿರಲಿ, ಅವರಿರಬೇಕಾದ ಜಾಗವನ್ನು ತೋರಿಸಬೇಕು, ದೇವರ ಹೆಸರಿನಲ್ಲಿ ದಂಧೆ, ಅವ್ಯವಹಾರ ಮಾಡುವವರನ್ನು ಮಟ್ಟಹಾಕಿ, ದೇಗುಲಗಳ ಪರಿಸರವನ್ನು ಸ್ವಚ್ಛಗೊಳಿಸುವ, ಅಭಿವೃದ್ಧಿಪಡಿಸುವ ಕೆಲಸ ಆಗಲೇಬೇಕು. ಆಗ ಮಾತ್ರ, ಜನರ ನಿಜಭಕ್ತಿ ಅನಾವರಣ ಗೊಂಡು, ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸ ಮತ್ತು ಪ್ರಸಿದ್ಧಿಯಿರುವ ಕರ್ನಾಟಕದ ವಿವಿಧ ದೇಗುಲಗಳ ಪರಿಸರ, ಪಾವಿತ್ರ್ಯ, ಶ್ರೇಷ್ಠತೆ ಮತ್ತು ಶಕ್ತಿಯ ಮರುಸ್ಥಾಪನೆಯಾದೀತು.

 

-ರವೀ ಸಜಂಗದ್ದೆ

(ಲೇಖಕರು ಸಾಫ್ಟ್ವೇರ್ ಉದ್ಯೋಗಿ)